ಕಲಾ ಪ್ರಕಾರಗಳಿಂದ ಮಾನಸಿಕ ಒತ್ತಡ ನಿವಾರಣೆ-ವೈ.ಎಸ್. ಪಾಟೀಲ

ತುಮಕೂರು : ಕಲಾ ಪ್ರಕಾರಗಳಿಂದ ಮಾತ್ರ ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ನುಡಿದರು.

ಅವರು ತುಮಕೂರಿನ ಝೆನ್ ಟೀಮ್ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಎರಡು ದಿವಸಗಳ ನಾಟಕೋತ್ಸವವನ್ನು ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವಜನರು ಹೆಚ್ಚಾಗಿ ಒತ್ತಡಕ್ಕೆ ಸಿಲುಕಿರುವುದನ್ನು ನಾವು ಕಾಣುತ್ತೇವೆ. ಅದರಲ್ಲೂ 25 ವರ್ಷಕ್ಕಿಂತ ಕೆಳಗಿನವರೇ ಜಾಸ್ತಿ. ಇದಕ್ಕೆ ಕಾರಣ ಮಾನಸಿಕ ಒತ್ತಡ. ಇದರಿಂದ ಹೊರ ಬರಲು ನಾಟಕ, ಕ್ರೀಡೆ, ಸಂಗೀತ ಮೊದಲಾದ ಪ್ರಕಾರಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ನಾಟಕ ಸೇರಿದಂತೆ ವಿವಿಧ ಕಲಾಪ್ರಕಾರಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದರಿಂದ ನಮ್ಮಲ್ಲಿ ಸಾಮಾಜಿಕ ಕಾಳಜಿ ಹುಟ್ಟಿಕೊಳ್ಳುತ್ತದೆ. ಈ ಸಾಮಾಜಿಕ ಕಾಳಜಿಯನ್ನು ಕಾಯ್ದುಕೊಳ್ಳುವ ಸದುz್ದÉೀಶ ನಮ್ಮಲ್ಲಿದ್ದರೆ ಇಂತಹ ನಾಟಕೋತ್ಸವಗಳು ನಿರಂತರವಾಗಿ ನಡೆಯುತ್ತವೆ ಎಂದ ಅವರು ಇದಕ್ಕೆ ಝೆನ್ ಟೀಮ್ ಸಾಕ್ಷಿಯಾಗಿದೆ ಎಂದು ಪ್ರಶಂಸಿಸಿದರು.
ಒಂದು ನಾಡಿನ ಜನರ ಬದುಕು ನೆಮ್ಮದಿಯಿಂದ ಕೂಡಿದೆ ಎಂಬುದನ್ನು ಕೇವಲ ಆರ್ಥಿಕ ವ್ಯವಸ್ಥೆಯಿಂದ ಅಳೆಯುವುದು ಸರಿಯಲ್ಲ, ಅಲ್ಲಿಯ ಜನರು ಕಲೆ, ಸಂಸ್ಕøತಿಯಿಂದಲೂ ಶ್ರೀಮಂತರಾಗಿರಬೇಕು. ಅಲ್ಲಿಯ ಆಡಳಿತ ವ್ಯವಸ್ಥೆಯೂ ಕೂಡ ಈ ಕಲಾ ಪ್ರಕಾರಗಳಿಗೆ ಪೆÇ್ರೀತ್ಸಾಹ ನೀಡುವಂತ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನೀನಾಸಂ ನಾಟಕಗಳಿಗೆ ಅದರz್ದÉೀ ಆದ ಒಂದು ಘನತೆಯಿದೆ. ಪ್ರೇಕ್ಷಕನ ಅಂತರಾಳವನ್ನು ಪ್ರವೇಶಿಸಿ ಆತನನ್ನು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಇವರ ನಾಟಕಗಳು ಮಾಡುತ್ತದೆ. ನಿರಂತರ ಕಲಾ ತಪಸ್ಸಿನಿಂದ ಮಾತ್ರ ಇದು ಸಾಧ್ಯ ಎಂದರು.

ಝೆನ್ ಟೀಮ್ ಕಳೆದ 18 ವರ್ಷಗಳಿಂದ ನಿರಂತರವಾಗಿ ತುಮಕೂರಿನಲ್ಲಿ ರಂಗಭೂಮಿಯನ್ನು ಜೀವಂತವಾಗಿರಿಸಿಕೊಂಡು ಸಾರ್ಥಕ ಕೆಲಸ ಮಾಡುತ್ತಿದೆ ಎಂದರು.
ಜಿ.ಪಂ. ಸಿಇಓ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ ನಾಟಕಗಳು ಪ್ರೇಕ್ಷಕರಲ್ಲಿ ಸಾಮಾಜಿಕ ಕಾಳಜಿಯನ್ನು ಮೂಡಿಸುತ್ತದೆ. ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಕಲೆ ಮತ್ತು ಸಂಸ್ಕøತಿಯನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ. ಆ ಕೆಲಸವನ್ನು ಝೆನ್ ಟೀಮ್ ಪ್ರಾಮಾಣಿಕವಾಗಿ ನಡೆಸುತ್ತಿರುವುದು ಸಂತಸದ ವಿಷಯ ಎಂದರು.

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ,ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿದರು. ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ವಹಿಸಿದ್ದರು.
ಬಳಿಕ ಗ್ರೀಕ್‍ನ ಯೂರಿಪಿಡೀಸ್ ರಚನೆಯ ಇಫಿಜೀನಿಯಾ ನಾಟಕವನ್ನು ನೀನಾಸಂ ತಂಡ ಪ್ರದರ್ಶಿಸಿತು. ಈ ನಾಟಕವನ್ನು ಕನ್ನಡಕ್ಕೆ ಮಾಧವ ಚಿಪ್ಪಳಿ ಅವರು ಅನುವಾದಿಸಿದ್ದು ಬಿ.ಆರ್. ವೆಂಕಟರಮಣ ಐತಾಳ್ ನಿರ್ದೇಶಿಸಿದ್ದಾರೆ.

Leave a Reply

Your email address will not be published. Required fields are marked *