ಲೋಪವಿಲ್ಲದಂತೆ ಭಾರತ ಜೋಡೋ ಯಾತ್ರೆಗೆ ಭದ್ರತಾ ವ್ಯವಸ್ಥೆ :ಎಸ್.ಪಿ.ರಾಹುಲ್‍ಕುಮಾರ್ ಶಹಪೂರ್‍ವಾಡ್‍ಗೆ ಮೆಚ್ಚಿಗೆ ಹಗಲು-ರಾತ್ರಿ ಜೋಡೋ ಯಾತ್ರೆ ಯಶಸ್ಸಿಗೆ ಶ್ರಮಿಸಿದ ಕಾಂಗ್ರೆಸ್ ಯುವ ನಾಯಕರು

ತುಮಕೂರು :ರಾಷ್ಟ್ರ ನಾಯಕರು ಬರುತ್ತಾರೆ ಎಂದರೆ ಮೊದಲು ತಲೆದೋರುವುದೇ ಅವರಿಗೆ ಭದ್ರತೆ ಹೇಗೆ ಎಂಬುದು, ರಾಹುಲ್‍ಗಾಂಧಿಯು ಭಾರತ ಜೋಡೋ ಯಾತ್ರೆಯ ಮೂಲಕ ನಡೆದುಕೊಂಡು ಬರುತ್ತಾರೆ ಎಂದಾಗ ಕೂಡ ಅವರಿಗೆ ಭದ್ರತೆ ಹೇಗೆ ಎಂಬುದೇ ದೊಡ್ಡ ಚರ್ಚೆ ಮತ್ತು ಪೊಲೀಸ್ ಅಧಿಕಾರಿಗಳಲ್ಲಿ ಒಂದು ತರಹ ಭಯವು ಉಂಟಾಗಿತ್ತು, ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಹುಲ್‍ಕುಮಾರ್ ಶಹಪೂರ್‍ವಾಡ್ ಅವರು ಎಲ್ಲಿಯೂ ಲೋಪವಾಗದಂತೆ ಅಚ್ಚುಕಟ್ಟಾಗಿ ನಿಭಾಯಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ರಾಹುಲ್ ಗಾಂಧಿಯವರು ಮೂರು ಪ್ರಧಾನಿಗಳ ಕುಟುಂಬದ ಗಣ್ಯವ್ಯಕ್ತಿ ಮತ್ತು ರಾಷ್ಟ್ರನಾಯಕರಾಗಿರುವುದರಿಂದ ಅವರಿಗೆ ಭದ್ರತೆ ಜೊತೆಗೆ ಅವರ ಜೊತೆಗೆ ನಡೆಯುವವರಿಗೆ ಮತ್ತು ಅವರನ್ನು ನೋಡಲು ಬರುವ ಜನರನ್ನು ನಿಯಂತ್ರಿಸುವುದು ಅಷೇನು ಸುಲಭವಲ್ಲ. ರಾಹುಲ್ ಮತ್ತು ಜನರನ್ನು ನಿಯಂತ್ರಿಸಲು ಜಿಲ್ಲೆಗೆ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿತ್ತು, ಹೀಗೆ ನಿಯೋಜನೆಗೊಂಡ ಪೊಲೀಸರಿಗೆ ಆಹಾರ ನೀರು, ಶೌಚಾಲಯ ವ್ಯವಸ್ಥೆಯನ್ನು ಮಾಡುವುದು ಇದೆಯಲ್ಲಾ ಅದು ಯಾರಿಗೂ ಬೇಡವಾದ ಕೆಲಸ, ಏಕೆಂದರೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಜಾಲತಾಣಗಳಲ್ಲಿ ದಿನವೆಲ್ಲಾ ಅದೇ ಸುದ್ದಿ, ಅಲ್ಲಿರುವ ಉನ್ನತ ಮಟ್ಟದ ಅಧಿಕಾರಿಯ ಮೇಲೆ ಗೂಬೆ ಕೂರಿಸಲು ಕಾಯುತ್ತಿರುತ್ತಾರೆ.

ಇದನ್ನೆಲ್ಲಾ ನಿಭಾಯಸಿವುದಕ್ಕೆ ಚಾಕಚಕ್ಕತೆ, ನಿಪುಣತೆ ಮತ್ತು ತಾಳ್ಮೆ ಎಂಬುದು ಬಹು ಮುಖ್ಯವಾದದ್ದು, ತುಮಕೂರು ಜಿಲ್ಲೆಗೆ ಭಾರತ ಜೋಡೋ ಯಾತ್ರೆ ಬರುತ್ತದೆ ಎಂದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪೂರ್‍ವಾಡ್ ಅವರು ಹಗಲು-ರಾತ್ರಿಯೆನ್ನದೆ ಭದ್ರತೆ ಮತ್ತು ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ತಮ್ಮ ಸಿಬ್ಬಂದಿಗೆ ಸಲಹೆ ಸೂಚನೆಗಳನ್ನು ಕೊಟ್ಟರು.

Tumkur S.P. Rahulkumar Shahapurvad

ಹೀಗೆ ಸಲಹೆ ಸೂಚನೆಗಳನ್ನು ನೀಡಿ ಎಸಿ ಕಾರಿನಲ್ಲಿ ಕೂತು ಬಿಟ್ಟರೆ ಪೊಲೀಸ್‍ರು ನಮ್ಮನ್ನು ಯಾರೂ ಗಮನಿಸುತ್ತಿಲ್ಲ ಎಂದು ಎಡವಟ್ಟು ಮಾಡುವುದಂತೂ ಖಚಿತ, ಈ ಹಿನ್ನಲೆಯಲ್ಲಿಯೇ ಸ್ವತಃ ಎಸ್.ಪಿ.ಯವರೇ ತಮ್ಮ ಕಾರನ್ನು ಬಿಟ್ಟು ಪೊಲೀಸ್ ಜೀಪಿನಲ್ಲಿ ಗಸ್ತು ತಿರುಗುವುದು, ಅವಶ್ಯಕತೆ ಇರುವ ಕಡೆ ತಾವೇ ಸ್ವತಃ ರಾಹುಲ್ ಗಾಂಧಿ ನಡೆದು ಬರುವ ರಸ್ತೆಯಲ್ಲಿ ನಿಂತು ಜನರನ್ನು ಮತ್ತು ನಡೆಗೆಯಲ್ಲಿ ಬರುತ್ತಿರುವವರನ್ನು ನಿಯಂತ್ರಿಸುತ್ತಿದ್ದರು. ಕೆಲವು ವೇಳೆ ರಾಹುಲ್‍ನನ್ನು ಕಾಣಲೇ ಬೇಕೆಂದು ಮುನ್ನುಗ್ಗಲು ಬರುತ್ತಿದ್ದವರನ್ನು ತಡೆದು ಹಾಗೆ ಬರಬಾರದು, ಪಕ್ಕದಲ್ಲೇ ನಿಂತು ನೋಡು, ಅವರ ಮನಸ್ಸಿಗೆ ಬಂದರೆ ನಿನ್ನನ್ನು ಕರೆಯುತ್ತಾರೆ ಎಂದು ವಿನಯದಿಂದಲೇ ಹೇಳಿ ರಸ್ತೆಯ ಇಕ್ಕಲೆಗಳಲ್ಲಿ ನಿಲ್ಲುವಂತೆ ಮಾಡುತ್ತಿದ್ದರು.

ಎರಡೂವರೆ ದಿನದ ಭಾರತ ಜೋಡೋ ಯಾತ್ರೆಯಲ್ಲಿ ಜನರಿಗಾಗಲಿ, ಪೊಲೀಸ್‍ರಿಗಾಗಲಿ ಯಾವುದೇ ತೊಡಕಾಗದಂತೆ ನೋಡಿಕೊಂಡರು, ಅಲ್ಲದೆ ಯಾತ್ರೆಯಲ್ಲಿ ಭಾಗವಹಿಸಿದ್ದ ಸುಮಾರು ಎರಡು-ಮೂರು ಲಕ್ಷ ಜನರಿಗೆ ಎಲ್ಲಿಯೂ ನೀರು, ಊಟ, ಧಣಿವು ಆಗದಂತೆ ಜೋಡೋ ಯಾತ್ರೆಯ ಜಿಲ್ಲಾ ಸಂಘಟಕರು ನೋಡಿಕೊಂಡರು.

ರಾಹುಲ್ ಜೊತೆ ಹೆಜ್ಜೆ ಹಾಕಲು 25ರಿಂದ 35 ವರ್ಷದ ಪೊಲೀಸರನ್ನು, 35ರಿಂದ 45 ವರ್ಷದ ಸಿಬ್ಬಂದಿಯನ್ನು ರಸ್ತೆಯ ಇಕ್ಕಲೆಗಳಲ್ಲಿ ನಿಂತು ಭದ್ರತೆ ನೀಡಲು ಮತ್ತು ಅದಕ್ಕೂ ಮೇಲ್ಪಟ್ಟವರನ್ನು ಅಲ್ಲಲ್ಲಿ ಕೂತು ಯಾರು ಬರುತ್ತಾರೆ, ಏನು ಮಾಡುತ್ತಾರೆ ಎಂಬುದನ್ನು ವೀಕ್ಷಿಸಲು ಮತ್ತು ವರದಿ ನೀಡಲು ನೇಮಿಸಲಾಗಿತ್ತು. ಮತ್ತು ಎಸ್.ಐ. ಹಾಗೂ ಸಿ.ಪಿ.ಐ. ಮಟ್ಟದ ಅಧಿಕಾರಿಗಳು ಜೀಪಿನಲ್ಲಿ ಸಂಚಾರ ಮಾಡಿ ಪ್ರತಿಯೊಂದನ್ನು ವೀಕ್ಷಣೆ ಮತ್ತು ತಪಾಷಣೆ ಮಾಡಲು ನೇಮಿಸಲಾಗಿತ್ತು. ತುಮಕೂರು ಜಿಲ್ಲೆಯ ಪೊಲೀಸರಿಗೆ ಹೊರಗಿನಿಂದ ಬಂದ ಸಿಬ್ಬಂದಿಗೆ ಊಟದ ವ್ಯವಸ್ಥೆ ಎಲ್ಲಿ ಹೇಗೆ ಮತ್ತು ಉಳಿದುಕೊಳ್ಳುವುದು ಎಲ್ಲಿ ಹೇಗೆ ಎಂಬುದನ್ನು ನಿಭಾಹಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು.

ಭಾರತ ಜೋಡೋ ಯಾತ್ರೆ ತುಮಕೂರು ಜಿಲ್ಲೆಗೆ ಬಂದಾಗ ಅದನ್ನು ಪ್ರೀತಿಯಂದ ಸ್ವಾಗತಿಸಿದ್ದಲ್ಲದೆ, ಯಾವುದೇ ಲೋಪವಾಗದಂತೆ ಜೋಡೋ ಯಾತ್ರೆ ಸಂಘಟಕರು ವ್ಯವಸ್ಥೆಯನ್ನು ಕಲ್ಪಿಸಿದ್ದು, ಎಲ್ಲರ ಮೆಚ್ಚುಗೆಯನ್ನು ಗಳಿಸಿತು.

ಎಲ್ಲಿಯೂ ಊಟ-ನೀರಿನ ವ್ಯವಸ್ಥೆಯ ಬಗ್ಗೆ ಅಪಸ್ವರಗಳು ಬರಲಿಲ್ಲ, ಬಂತಂತಹ ನಡಿಗೆದಾರರಿಗೆ, ಜನರಿಗೆ ನೀರು, ಬಿಸ್ಕತ್, ಎಳೆನೀರು, ಕಡಲೆ ಪುರಿ, ತಿಂಡಿ, ಊಟದ ವ್ಯವಸ್ಥೆಯೆಲ್ಲವೂ ಅಚ್ಚುಕಟ್ಟಾಗಿದ್ದವು. ಬಂದ ಜನ ಊಟ ಮಾಡಿದ ಸ್ಥಳ ಮತ್ತು ತಟ್ಟೆ, ಲೋಟಗಳು ಮತ್ತು ಮುಸುರೆಯನ್ನು ಸ್ವಚ್ಚ ಮಾಡಲೇ ನೂರಾರು ಕೆಲಸಗಾರರು ಟೊಂಕ ಕಟ್ಟಿ ನಿಂತಿದ್ದನ್ನು ನೋಡಿ ಬಂದ ಜನರೇ ಮೂಕ ವಿಸ್ಮಿತರಾದರು. 

ಒಟ್ಟಿನಲ್ಲಿ ಕಲ್ಪತರು ನಾಡಿನಲ್ಲಿ ರಾಹುಲ್ ಗಾಂಧಿಗೆ ಭವ್ಯ ಸ್ವಾಗತದೊಂದಿಗೆ ವಿವಿಧ ಆಯಾಮಗಳನ್ನು ಸಹ ಪರಿಚಯಿಸಲಾಯಿತು. ಇದಕ್ಕೆ ಜಿಲ್ಲಾ ಕಾಂಗ್ರೆಸ್ ನಾಯಕರ ಜೊತೆಗೆ ಯುವ ನಾಯಕರೆಂದು ಗುರುತಿಸಿಕೊಂಡಿರುವ ಬೆಮಲ್ ಕಾಂತರಾಜು, ಸಿ.ಬಿ.ಶಶಿಧರ್, ರಾಯಸಂದ್ರ ರವಿಕುಮಾರ್, ಜಿ.ಎಸ್.ಪ್ರಸನ್ನಕುಮಾರ್, ಸಾಸಲು ಸತೀಶ್,ಇವರು ಪಕ್ಷದಲ್ಲಿ ಏನೂ ಅಲ್ಲದಿದ್ದರೂ ಪಕ್ಷಕ್ಕಾಗಿ ಹಗಲು ರಾತ್ರಿ ಕೆಲಸ ಮಾಡಿರುವುದು ಎದ್ದು ಕಾಣಿಸುತ್ತಿದೆ. ಮುಂದೆ ಇಂತಹ ಯುವ ಕಾಂಗ್ರೆಸ್ ನಾಯಕರನ್ನು ಜಿಲ್ಲಾ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಹೇಗೆ ಗುರುತಿಸುತ್ತಾರೆ ನೋಡಬೇಕಿದೆ. ಇಂತಹ ಯುವ ಕಾಂಗ್ರೆಸ್ ನಾಯಕರನ್ನು ಗುರತಿಸದಿದ್ದರೆ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಭವಿಷ್ಯವೂ ಅಷ್ಟಕಷ್ಟೆ

Leave a Reply

Your email address will not be published. Required fields are marked *