ದಶಮಾನೋತ್ಸವಕ್ಕೆ ಬಂದ ಜನರಿಗೆ ಬೆಳಿಗ್ಗೆ 10 ಗಂಟೆಯಿಂದಲೇ ಜನರಿಗೆ ಟೊಮೆಟೊ ಬಾತ್, ನಂದಿನಿ ಮೈಸೂರು ಪಾಕ್, ನಂದಿನಿ ಮಜ್ಜಿಗೆಯನ್ನು ನೀಡಲಾಯಿತು.
ಸಮಾರಂಭಕ್ಕೆ ಬಂದ ಜನರು ಊಟಕ್ಕಿಂತ ಮಜ್ಜಿಗೆ, ಮೈಸೂರು ಪಾಕ್ ಇಸ್ಕೊಳಲು ಮುಗಿ ಬಿದ್ದದ್ದು ಕಂಡು ಬಂದಿತು.
ಊಟದ ವ್ಯವಸ್ಥೆ ಯನ್ನು ಮೂರು ಕಡೆ ಕೌಂಟರ್ ತೆರೆದು ಕೊಡಲಾಗುತ್ತಿತ್ತು, ಮಜ್ಜಿಗೆ ಪಡೆದ ಕೆಲವರು ತಮ್ಮ ಪಂಚೆಯನ್ನು ಎತ್ತಿ ನಿಕ್ಕರ್ ಜೋಬಿನಲ್ಲಿಟ್ಟುಕೊಂಡು ಹೋಗುತ್ತಿದ್ದದ್ದು ಕಂಡು ಬಂದಿತು.
ಮಧುಗಿರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದಾಗ ಪಾವಗಡ ರಸ್ತೆಯಲ್ಲಿರುವ ಅಂಬೇಡ್ಕರ್ ಪುತ್ತಳಿಗೆ ಪಾದಾರ್ಪಣೆ ಮಾಡಿದರು.
ನಂತರ ಜಾಮೀಯ ಮಸೀದ್ ಮುಸ್ಲೀಂಮರು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ದಲ್ಲಿ ಸನ್ಮಾನ ಮತ್ತು ಅಭಿನಂದನಾ ಫಲಕಗಳನ್ನು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಮಧುಗಿರಿಯಲ್ಲಿ ನಿರ್ಮಿಸಿರುವ ಕನ್ನಡ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ವೇದಿಕೆಗೆ ಬರುತ್ತಿದಂತೆ ಜನರು ಹುಚ್ಚೆದ್ದು ಕುಣಿದು ಕೇಕೆ ಹಾಕಿದರು. ಸಿದ್ದರಾಮಯ್ಯನವರು ವೇದಿಕೆಗೆ ಬರುವ ಮುನ್ನ ಕ್ಷೀರಭಾಗ್ಯ ದ ಫಲಾನುಭವಿ ಮಹಿಳೆಯರೊಂದಿಗೆ ಸಂವಾದ ನಡೆಸಿದರು.
ಮುಖ್ಯಮಂತ್ರಿಗಳು ಈ ಮೊದಲು ಹೆಲಿಕ್ಯಾಪ್ಟರ್ ಮೂಲಕ ಬರುವರು ಎಂದು ಹೇಳಲಾಗುತ್ತು, ಆದರೆ ಹವಾಮಾನದ ವೈಪರೀತ್ಯ ದಿಂದ ರಸ್ತೆಯ ಮೂಲಕ ತೆರಳಲು ರಾತ್ರಿ ಬದಲಾಯಿಸಕಾಯಿತು.
ಮುಖ್ಯಮಂತ್ರಿಗಳು ಆಗಮಿಸುವ ರಸ್ತೆಯ ಎರಡೂ ಇಕ್ಕಲೆಗಳಲ್ಲಿ ಪೆÇಲೀಸ್ ಭದ್ರತೆ ಏರ್ಪಡಿಸಲಾಗಿತ್ತು.
ಮಧ್ಯಾಹ್ನ 1.30 ಆಗಿದ್ದರೂ ಜನ ಕಾರ್ಯಕ್ರಮಕ್ಕೆ ಆಗಮಿಸುತ್ತಲೇ ಇದ್ದರು.
ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮದ ಹಿನ್ನೆಲಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು, ಮುಧುಗಿರಿ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.