ತಮ್ಮ ಕೊನೆಯ ಕಾರ್ಯಕ್ರಮ ವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಎಸ್ಪಿ ರಾಹುಲ್ ಕುಮಾರ್

ತುಮಕೂರು : ಮುಖ್ಯ ಮಂತ್ರಿಗಳ ಮಧುಗಿರಿ ಕಾರ್ಯಕ್ರಮಕ್ಕೂ ಮೊದಲೇ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿಗಳಾದ ರಾಹುಲ್ ಕುಮಾರ್ ಶಹಪೂರ್ ವಾಡ್ ಅವರು ಕ್ಷೀರಭಾಗ್ಯ ದಶಮಾನೋತ್ಸವದ ಕಾರ್ಯಕ್ರಮದ ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಂಡರು.

ಎರಡು ದಿನ ಮಧುಗಿರಿಯಲ್ಲೇ ಇದ್ದು ಕಾರ್ಯಕ್ರಮಕ್ಕೆ ಬೇಕಾದ ಭದ್ರತೆ ಮತ್ತು ಮುಖ್ಯಮಂತ್ರಿ ಗಳ ಭದ್ರತೆಗೆ ಒತ್ತು ನೀಡಿದರು.

ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಅವರು ಜಿಲ್ಲೆಗೆ ಭಾರತ ಜೋಡೋ ಯಾತ್ರೆ ಬಂದಾಗಲೂ ಯಾವುದೇ ಲೋಪವಾಗದಂತೆ ಭದ್ರತೆ ಒದಗಿಸಿ ಜೋಡೋಯಾತ್ರೆ ಯಶಸಿಗೆ ಕಾರಣಕರ್ತರಾಗಿದ್ದರು, ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಹ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣೆ ನಡೆಯುವಂತೆ ಭದ್ರತಾ ವ್ಯವಸ್ಥೆ ಮಾಡಿದ್ದರು.

ಇದಲ್ಲದೆ ಎಸ್ಪಿಯವರು ಜನರೊಂದಿಗೆ ಬೆರೆಯುವುದರಿಂದ ಜನಸ್ನೇಹಿ ಎಸ್ಪಿ ಎಂದು ಹೆಸರು ಗಳಿಸಿದ್ದರು, ತುರುವೇಕೆರೆಯಲ್ಲಿ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಅಲ್ಲಿಯ ಪಿಎಸ್ ಐ ಜನಸಾಮಾನ್ಯನ ಕೇಸು ದಾಖಲಿಸದೇ ಇದ್ದುದರಿಂದ ಸ್ವತಃ ತಮ್ಮ ಕಾರನ್ನೇ ಜನ ಸಾಮಾನ್ಯನ ಬಳಿಗೆ ಕಳಿಸುವ ಮೂಲಕ ಸ್ಪಂದಿಸಿದ್ದು ಗಮನ ಸೆಳೆದಿತ್ತು.

ತಮ್ಮ ಕಚೇರಿ ಗೆ ಬರುವ ಸಾಮಾನ್ಯ ಜನರನ್ನು ಕೂರಿಸಿ ಅವರ ಅಹವಾಲನ್ನು ಕೇಳುತಿದದ್ದು ವಿಶೇಷವಾಗಿತ್ತು, ಅಲ್ಲದೆ ತಮ್ಮ ಇಲಾಖೆಯ ಸಿಬ್ಬಂದಿಯ ಏನೇ ಸಮಸ್ಯೆ ಇದ್ದರೂ ಬಗೆ ಹರಿಸುವ ನಿಟ್ಟಿನಲ್ಲಿ ಸ್ಪಂದಿಸುತ್ತಿದ್ದರು.

Leave a Reply

Your email address will not be published. Required fields are marked *