
ತುಮಕೂರು: ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಅಶೋಕ್.ಕೆ.ವಿ.ಅವರು ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ವರ್ಗಾವಣೆಯಾಗಿರುವ ರಾಹುಲ್ ಕುಮಾರ್ ಶಹಪೂರ ವಾಡ್ ಅವರಿಂದ ಇಂದು ಅಧಿಕಾರ ವಹಿಸಿಕೊಂಡರು.
ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ್.ಕೆ.ವಿ. ಅವರು ತುಮಕೂರು ಎಸ್ಪಿಯಾಗಿ ವರ್ಗಾವಣೆಗೊಂಡಿದ್ದು, ಇಂದು ಅಧಿಕಾರವನ್ನು ಸ್ವೀಕರಿಸಿದ್ದಾರೆ. ನೂತನ ಎಸ್ಪಿರವರ ಪತ್ನಿ ಅಶ್ವಿಜ.ಬಿ.ವಿ.ಅವರು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದಾರೆ.

ತುಮಕೂರು ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರರಾಗಿ ಅಶೋಕ್ ಕೆ ವಿ ರವರು ಅಧಿಕಾರ ಸ್ವೀಕರಿಸಿ, ಈ ಹಿಂದಿನ ಎಸ್.ಪಿ ರಾಹುಲ್ ಕುಮಾರ್ ಶಹಾಪುರ್ವಾಡ್ ರವರಿಂದ ಹೂಗುಚ್ಛ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಮರಿಯಪ್ಪ ಉಪಸ್ಥಿತರಿದ್ದರು.