
ತುಮಕೂರು : ರಾಜ್ಯದಲ್ಲಿ ಈ ಬಾರಿ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಗುರುವಾರ ಮಧ್ಯಾಹ್ನ 3.30ಕ್ಕೆ ಕಂಠಿರವ ಸ್ಠಡಿಯಂನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ, ಇದರಿಂದ ಕಾರ್ಯಕರ್ತರಲ್ಲಿ ಮತ್ತು ಸಿದ್ದರಾಮಯ್ಯ ಅಭಿಮಾನಿಗಳಲ್ಲಿ ಉತ್ಸಾಹ ಹಿಮ್ಮಡಿಗೊಳಿಸಿದೆ.

ಮುಂಬರುವ ಲೋಕಸಭೆ ಚುನಾವಣೆ ದೃಷ್ಠಿಯಿಂದ ಸಿದ್ದರಾಮಯ್ಯನವರನ್ನು ಮುಂದಿನ 2ವರ್ಷದವರೆಗೆ ಮುಖ್ಯಮಂತ್ರಿಯಾಗಿ ಮುಂದುವರೆಸಲು ಹೈಕಮಾಂಡ್ ಹೇಳಿದೆ ಎನ್ನಲಾಗುತ್ತಿದೆ. ಜಾತಿ ಲೆಕ್ಕಚಾರದ ಆಧಾರದ ಮೇಲೆ 3 ಉಪ ಮುಖ್ಯಮಂತ್ರಿ (ಲಿಂಗಾಯಿತ, ಒಕ್ಕಲಿಗ, ದಲಿತ)ಸ್ಥಾನವನ್ನು ಸೃಷ್ಠಿಸಿ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್. ಡಾ.ಜಿ.ಪರಮೇಶ್ವರ್ ಅಥವಾ ಮುನಿಯಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ದೊರಕುವ ಎಲ್ಲಾ ಸಾಧ್ಯತೆಗಳಿವೆ!?
ಲೋಕಸಭೆ ಚುನಾವಣೆ ಮುಗಿದ ನಂತರ ಉಳಿದ ಪೂರ್ಣ ಪ್ರಮಾಣದ ಮೂರು ವರ್ಷಗಳಿಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಗದ್ದುಗೆ ಏರುವ ನಿರ್ಣಯ ಅಂತಿಮವಾಗಿದೆ ಎನ್ನಲಾಗಿದೆ.
ಕೆಲವೇ ಗಂಟೆಗಳಲ್ಲಿ ಈ ನಿರ್ಧಾರ ಹೊರ ಬೀಳಲಿದ್ದು, ನಾಳೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಕಂಠಿರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.