ತಿಪಟೂರು: ಕಾಂಗ್ರೆಸ್ ಪಕ್ಷ ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವುದನ್ನು ನಾನು ಗೌರವಿಸುತ್ತೇನೆ. ಆದರೆ ನಾನು ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಪ್ರಾಬಲ್ಯತೆಯನ್ನು ಹೆಚ್ಚಿಸುವಲ್ಲಿ ನಿರಂತರ ಪಯತ್ನ ಮಾಡಿದ್ದು, ರಾಜ್ಯ ಮಟ್ಟದಲ್ಲಿಯೂ ಕಾಂಗ್ರೆಸ್ ಪಕ್ಷದ ಗೌರವ ಹೆಚ್ಚಿಸುವಂತಹ ಕೆಲಸಗಳನ್ನೇ ಮಾಡಿದ್ದೇನೆ ಈ ಎಲ್ಲಾ ಪಕ್ಷ ನಿಷ್ಠೆಯ ಕೆಲಸಗಳನ್ನು ಪರಿಗಣಿಸಿ ಮುಂಬರುವ ವಿಧಾನಸಭೆ ಚುನವಣೆಯಲ್ಲಿ ಪಕ್ಷ ನನಗೆ ಬಿ.ಫಾರ್ಮ್ ನೀಡುವ ಮೂಲಕ ತಿಪಟೂರಿನ ಜನತೆಗೆ ಸೇವೆ ಮಾಡಲು ಅವಕಾಶ ನೀಡುತ್ತದೆ ಎಂಬ ಭರವಸೆ ಇದೆ ಎಂದರು.
ಇಂದು ನಗರದ ಕಲ್ಪತರು ಗ್ರಾಂಡ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನಾದ್ಯಂತ ಕಾಂಗ್ರೆಸ್ ಪಕ್ಷದ ಪ್ರಾಬಲ್ಯತೆ ಹೆಚ್ಚಿಸಲು ಪಕ್ಷನಿಷ್ಠೆಯಿಂದ ನಿರಂತರ ಪ್ರಯತ್ನ ಮಾಡಿದ್ದೇನೆ, ಇನ್ನೂ ಚುನಾವಣೆ ದಿನಾಂಕ ನಿಗಧಿಯಾಗಿಲ್ಲ, ಬಿ.ಫಾರ್ಮ್ ಕೂಡ ನೀಡಿಲ್ಲ, ಯಾವ ಅಭ್ಯರ್ಥಿಯ ಘೋಷಣೆಗಳು ಅಧಿಕೃತವಾಗಿ ಆಗಿಲ್ಲ, ಕಾಂಗ್ರೆಸ್ ಪಕ್ಷ ಪ್ರತಿಪಾದಿಸುವಂತಹ ಜಾತ್ಯಾತೀತ ತತ್ವ ಹಾಗೂ ರಾಹುಲ್ ಗಾಂಧಿಯ ನಾಯಕತ್ವದಲ್ಲಿ ಯುವಕರ ಆದ್ಯತೆಯ ನಿರೀಕ್ಷೆಯೊಂದಿಗೆ ನನಗೆ ಇನ್ನೂ ಟಿಕೆಟ್ ಸಿಗುವ ಆಶಾ ಭಾವನೆ ದೃಢವಾಗಿದೆ ಎಂದು ತಿಳಿಸಿದರು.
ಕಳೆದ 5 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯ ವೈಖರಿಯನ್ನು ಗಮನಿಸಿದರೆ. ತಾಲ್ಲೂಕಿನಲ್ಲಿ ಅಭಿವೃದ್ಧಿಗಾಗಿ ಹಲವಾರು ಕಾರ್ಯಗಳಲ್ಲಿ ನಾನು ಸಕ್ರಿಯವಾಗಿ ಭಾಗಿಯಾಗಿದ್ದು, ಅಲ್ಪಸಂಖ್ಯಾತ ಬಂಧುಗಳಿಗೆ ಸಮಸ್ಯೆಯಾಗಿ ಪರಿಣಮಿಸುವ ಸಿ.ಎ.ಎ ಮತ್ತು ಎನ್.ಆರ್.ಸಿ ಕಾಯಿದೆಯನ್ನು ಜಾರಿಗೆ ತರಲು ಬಿಜೆಪಿ ಮುಂದಾಗಿದ್ದು, ದೇಶಾದ್ಯಂತ ಈ ವಿರುದ್ಧದ ಪ್ರತಿಭಟನೆಗಳು ನಡೆದವು ತಾಲ್ಲೂಕಿನಲ್ಲಿ ನಡೆದ 6000 ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತ ಬಂಧುಗಳು ನಡೆಸಿದ ಪ್ರತಿಭಟನೆಯ ನೇತೃತ್ವವನ್ನು ನಾನು ವಹಿಸಿಕೊಂಡಿದ್ದು, ಜಾತ್ಯಾತೀತ ತತ್ವದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷದ ನಿಲುವನ್ನು ನಾನು ತಾಲ್ಲೂಕಿನಲ್ಲಿ ಪಸರಿಸಿದ್ದು ನನಗೆ ಅತ್ಯಂತ ಹೆಮ್ಮೆ ಇದೆ ಎಂದರು.
ಕೋವಿಡ್ ಸಂಕಷ್ಟದಲ್ಲಿ ತಾಲ್ಲೂಕಿನಾಂದ್ಯಂತ ಕಾಂಗ್ರೆಸ್ ಪಕ್ಷದ ಪರವಾಗಿ ಬಡ ಜನತೆ ಅನುಕೂಲಕ್ಕಾಗಿ 8000 ಕ್ಕೂ ಹೆಚ್ಚು ಗುಣಮಟ್ಟದ ಕಿಟ್ ಗಳನ್ನು ಹಂಚಿದ್ದೇನೆ.
ತಾಲ್ಲೂಕಿನ ಕೋವಿಡ್ ವಾರಿಯರ್ಸ್ ಗಳನ್ನು ಗೌರವವಾಗಿ ಆಹ್ವಾನಿಸಿ ಗೌರವಿಸಿ ಪಕ್ಷದ ಪರವಾಗಿ ಆತ್ಮೀಯ ಅಭಿನಂದನೆಯನ್ನು ಸಲ್ಲಿಸಿ ಮುಂದಿನ ಕಾರ್ಯ ನಿರ್ವಹಣೆಗೆ ಆತ್ಮ ವಿಶ್ವಸ ತುಂಬಿದ್ದೇನೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆನ್ ಲೈನ್ ಶಿಕ್ಷಣಕ್ಕಾಗಿ ವ್ಯಯಕ್ತಿಕವಾಗಿ ಮೊಬೈಲ್ ಗಳನ್ನು ನೀಡಲಾಗಿದ್ದು, ಶಾಲಾ ಶುಲ್ಕ ಭರಸಿಲು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಕಳೆದ ೨ ವರ್ಷಗಳಿಂದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವ್ಯವಸ್ಥೆ, ಕೋವಿಡ್ ಅವಘಡಗಳಲ್ಲಿ ಏಕ ಪೋಷಕರಿದ್ದ ವಿದ್ಯಾರ್ಥಿಗಳ ನೂರಾರು ಮಕ್ಕಳ ಶಿಕ್ಷಣದ ಕನಸಿಗೆ ನೆರವಾಗಿದ್ದೇವೆ.
ನಮ್ಮ ದೇಶದ ಜನತೆ ಗಾಂಧೀಜಿಯವರನ್ನು ಗೌರವದಿಂದ ಕಾಣುತಿದ್ದು, ಬಿಜೆಪಿ ಗಾಂಧೀಜಿಯವರ ಎದುರಿಗೆ ಮತ್ಯಾರನ್ನೋ ರಾಷ್ಟ್ರಪಿತ ಮಾಡುವ ದಿಸೆಯಲ್ಲಿ ಹೋರಾಟ ಮಾಡುತ್ತಿದ್ದರು, ಹಾಗಾಗಿ ಮತ್ತೊಮ್ಮೆ ಮನೆ ಮನೆಗೆ ಗಾಂಧೀಜಿಯವನ್ನು ತಲುಪಿಸುವ ಕೆಲಸವನ್ನು ಮತ್ತೊಮ್ಮೆ ಅಕ್ಟೋಬರ್ ೨ ರಂದು “ಗಾಂಧಿ ಗೀತ ನಮನ”ವನ್ನು ಹಮ್ಮಿಕೊಂಡಿದ್ದು, ಆ ದಿನ ನೇಕಾರ ಬಂಧುಗಳನ್ನು ಗೌರವಿಸಿ ಈ ವಲಯದಲ್ಲಿಯೂ ಕಾಂಗ್ರೆಸ್ ಪರವಾದ ಅಲೆಯನ್ನು ಹುಟ್ಟು ಹಾಕಿದ್ದೇನೆ ಎಂದರು.
“ಅಂಬೇಡ್ಕರ್ ಭರವಸೆಯ ಮಾರ್ಗ”ದ ಮೂಲಕ ಅಂಬೇಡ್ಕರ್ ಜಯಂತಿ ಹಾಗೂ ಬಸವಣ್ಣನವರು ಎತ್ತು ಹೋರಿ ಎನ್ನುವ ಕಾಲಘಟ್ಟದಲ್ಲಿಲಿಂಗಾಯಿತ ತತ್ವವವನ್ನು ಜಗತ್ತಿಗೆ ಸಾರಿದ ನಿಜವಾದ ಬಸವಣ್ಣವರ ಜಯಂತಿಗಳನ್ನುಎಲ್ಲೆಡೆ ಆಚರಿಸುವ ಕಾರ್ಯದ ಮೂಲಕ ಉಭಯ ಸಮಾಜದ ಭಾಂಧವರಲ್ಲಿ ಪಕ್ಷದ ಗೌರವವನ್ನು ಹೆಚ್ಚು ಮಾಡಿದ್ದು, ಇದರ ಫಲಶ್ರುತಿ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ತಿಳಿಯಲಿದೆ ಎಂದರು.
*8ನೇ ತರಗತಿ ವಿದ್ಯಾರ್ಥಿಗಳು ಬರೆಯುವ 5 ವರ್ಷಗಳಿಗೆ 62,000 ರೂ. ವಿದ್ಯಾರ್ಥಿ ವೇತನ ಸಿಗುವ ವ್ಯಾಸಂಗಿಕ ಪ್ರವೃತ್ತಿ ಸಾಮರ್ಥ್ಯ NMMS ಪರೀಕ್ಷೆಗೆ ೨ ರಿಂದ ೩ ಮಕ್ಕಳು ಉತ್ತೀರ್ಣರಾದರೆ ಅದೇ ಹೆಚ್ಚು ಎನ್ನುವ ಕಾಘಟ್ಟದಲ್ಲಿ ಉತ್ಸಾಹಿ ಪ್ರತಿಭಾವಂತ ಬಡ ಮಕ್ಕಳಿಗೆ ಉಚಿತ ತರಬೇತಿ ನೀಡಿ 26 ಕ್ಕೂ ಹೆಚ್ಚಿನ ಮಕ್ಕಳು ಉತ್ತೀರ್ಣರಾಗಿ ವಿದ್ಯಾರ್ಥಿ ವೇತನ ಬರುವಂತಾಗಿರುವುದು ನನಗೆ ಬಹಳ ಹೆಮ್ಮೆ ಎನಿಸಿದೆ.
75ನೇ ಅಮೃತ ಸುವರ್ಣ ಮಹೋತ್ಸವ ಸ್ವಾತಂತ್ರ ದಿನದಂದು ಎಂ.ಡಿ ಪಲ್ಲವಿಯವರ ಗಾಯನದೊಂದಿಗೆ “ಸೌಹಾರ್ದ ಸಂಗೀತ ಸಂಭ್ರಮ” ಕಾರ್ಯಕ್ರಮ ಆಯೋಜಸಿ. ದೇಶ ಸೇವೆ ಮಾಡಿ ನಿವೃತ್ತಿ ಹೊಂದಿದ ಸೈನಿಕರನ್ನು ಹಾಗೂ ಅವರ ಕುಟುಂಬವನ್ನು ಆಹ್ವಾನಿಸಿ ಅವರನ್ನು ಗೌರವಿಸಿ ಸರ್ವರಲ್ಲೂ ಮತ್ತೊಮ್ಮೆ ಸ್ವಾತಂತ್ರ್ಯದ ಕಿಚ್ಚಿನ ಜತೆ ಯೋಧರ ಬಗ್ಗೆ ಗೌರವ ಮೂಡಿಸುವ ಅರ್ಥಪೂರ್ಣವಾಗಿ ಬಹಳ ವಿಶೇಷವಾಗಿ ಆಚರಿಸಿ. ಕಾಂಗ್ರೆಸ್ ಪಕ್ಷದ ಬಗ್ಗೆ ಹೆಮ್ಮೆ ಮೂಡುವ ಕೆಲಸ ಮಾಡಿದ್ದೇನೆ ಎಂದರು.