ವೈಚಾರಿಕ ಒಡಕುಗಳನ್ನು ಒಂದು ಮಾಡುವ ಶಕ್ತಿಯೇ ದೊರೈರಾಜ್-1927ರಲ್ಲೇ ತುಮಕೂರಿನಲ್ಲಿ ಗಾಂಧಿಯಿಂದ ಸ್ವಚ್ಛ ಭಾರತದ ಭಾಷಣ-ಬರಗೂರು ರಾಮಚಂದ್ರಪ್ಪ

ತುಮಕೂರು : ವೈಚಾರಿಕ ಒಡಕುಗಳನ್ನು ಒಂದು ಮಾಡುವ ಶಕ್ತಿಯೊಂದು ಬೇಕಾಗಿದೆ, ನಮ್ಮೆಲ್ಲರ ಕನಸ್ಸು ಪ್ರಜಾಪ್ರಭುತ್ವವನ್ನು ಉಳಿಸುವ, ಸಂವಿಧಾನದ ಆಶಯಗಳನ್ನು ಉಳಿಸುವ ನಿಜವಾದ ಅರ್ಥದಲ್ಲಿ ಸಮಾನತೆಯನ್ನು ತರುವ ಕನಸ್ಸಿದೆಯಲ್ಲಾ ಆ ಬದ್ಧತೆಗೆ ಬೇಕಾಗಿರುವಂತಹ ಪೇರಕ ಶಕ್ತಿಯಾಗಿ ಕೆ.ದೊರೈರಾಜ್ ನಮ್ಮ ನಡುವೆ ಇದ್ದಾರೆಂಬುದೇ ನಮಗೆ ಹೆಮ್ಮಯ ವಿಷಯ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.

ಅವರಿಂದು ನಗರದ ಅಮಾನಿಕೆರೆ ರಸ್ತೆಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಂ.ಎಚ್.ನಾಗರಾಜು ಅವರು ಬರೆದಿರುವ ಪ್ರೊ.ಕೆ.ದೊರೈರಾಜ್ ಅವರ ‘ಏಕತೆಯ ಹೋರಾಟಗಾರ” ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.

ದೊರೈರಾಜ್ ಕೇವಲ ದೊರೈರಾಜ್ ಅಲ್ಲ ಅವರು, ವೈಚಾರಿಕ ಪ್ರಜ್ಞೆಯೊಂದಿಗೆ ಅಸಮಾನತೆಯ ವಿರುದ್ಧ, ಜಾತಿವಾದದ ವಿರುದ್ಧ,ಮೂಲಭೂತವಾದದ ವಿರುದ್ಧ ಮಾತನಾಡುತ್ತೇವೆ ಅಂದರೆ ಅರ್ಥ ಏನೆಂದರೆ ಸಮಕಾಲಿನ ಅಗತ್ಯತೆಗಳನ್ನು ಕುರಿತು ಪ್ರಜಾಪ್ರಭುತ್ವವಾದಿ ಮೌಲ್ಯಗಳನ್ನು ಕುರಿತು ದೊರೈರಾಜ್ ಅವರ ನೆಪದಲ್ಲಿ ಮಾತನಾಡುತ್ತೇವೆ, ದೊರೈರಾಜ್ ಅವರು ವ್ಯಕ್ತಿಯಾಗಿಯಲ್ಲ ದೊರೈರಾಜ್ ಮುಖಾಂತರ ನಮಗೆ ನಾವೇ ಆಹ್ವಾನಿಸಿಕೊಳ್ಳಬೇಕಾಗಿರುವ ಸಮಸ್ಯೆ ಮತ್ತು ಸವಾಲುಗಳನ್ನು ಎದರಿಸಬೇಕಾಗಿದೆ ಎಂದರು.

ದೊರೈರಾಜ್ ಅವರ ವ್ಯಕ್ತಿತ್ವ ಬಹಳ ವಿಶೇಷವಾದ ವ್ಯಕ್ತಿತ್ವ ಇವತ್ತಿನ ಸನ್ನಿವೇಶವನ್ನು ಯೋಚನೆ ಮಾಡಿದರೆ ಏಕತೆಯ ಹೋರಾಟಗಾರ ಪರಿಕಲ್ಪನೆಗೆ ನಿಜವಾದ ಅರ್ಥ ಸಿಕ್ಕಿದೆ, ಇವತ್ತು ನಾವಿರುವ ಸಂದರ್ಭ ಇದೆಯಲ್ಲ ಜಾತಿವಾದ ಇದೆ, ತಾರ್ಕಿಕ ಮೂಲಭೂತವಾದ ಇದೆ, ಬಹು ಸಂಸ್ಕøತಿಗಳನ್ನು ವಿರೋಧಿಸುವ ಪ್ರವೃತ್ತಿ ಹೆಚ್ಚಾಗುತ್ತಾ ಇದೆ, ಅಸಹನೆ ಇದೆ, ಅಸಮಾನತೆ ಇದೆ, ಇದೆಲ್ಲದರದ ಜೊತೆಗೆ ಅಹಂಕಾರ ಮತ್ತು ಅಬ್ಬರಗಳು ಜಾಸ್ತಿಯಾಗುತ್ತಿರುವ ಸಂದರ್ಭದಲ್ಲಿದ್ದೇವೆ, ಇವೆಲ್ಲವನ್ನೂ ವಿರೋಧಿಸುವ ವ್ಯಕ್ತಿತ್ವ ಇದೆಯಲ್ಲ ಅದು ದೊರೈರಾಜ್ ಅವರ ವ್ಯಕ್ತಿತ್ವ. ಅವರು ಜಾತಿವಾದ ವಿರೋಧಿಗಳು, ಧಾರ್ಮಿಕ ಮೂಲಭೂತವಾದಿ ವಿರೋಧಿಗಳು, ಬಹುಸಂಸ್ಕøತಿ ಪರವಾಗಿರುವಂತಹವರು, ಅಸಮಾನತೆಯನ್ನು ವಿರೋಧಿಸುವಂತಹವರು, ಅಧಿಕಾರದಲ್ಲಿದ್ದು, ಹೋರಾಟದಲ್ಲಿದ್ದು, ಅಹಂಕಾರವಿಲ್ಲದೆ, ಅಬ್ಬರವಿಲ್ಲದೆ ತಮ್ಮ ಕ್ರಿಯಾಶೀಲತೆಯನ್ನು ತೋರಿದಂತಹವರು, ಇಂದು ಏನಾಗಿದೆ ಎಂದರೆ ಅಬ್ಬರ ಮಾಡುವಂತಹವರನ್ನೇ ನಾಯಕರೆಂದು ವೈಭವೀಕರಿಸಲಾಗುತ್ತಿದೆ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.

ದೊರೈರಾಜ್ ಅವರು ವಿವಿಧತೆಯಲ್ಲಿ ಏಕತೆಯನ್ನು ಮೂಡಿಸುವ ಪರಿಕಲ್ಪನೆಯವರು,ಈ ವಿವಿಧತೆಯಲ್ಲಿ ವೈವಿಧ್ಯವನ್ನು, ಬಹುತ್ವವನ್ನು ನಾಶ ಮಾಡಲಿಕ್ಕಾಗಿಯೇ ಇರತಕ್ಕಂತಹ ಶಕ್ತಿಗಳು ಪ್ರಬಲವಾಗುತ್ತಿವೆ ಎಂದು ಬರಗೂರು ಅವರು ಆತಂಕ ವ್ಯಕ್ತಪಡಿಸಿದರು. ದೊರೈರಾಜ್ ಅವರಲ್ಲಿ ಮುಗ್ಧತೆಯಿದೆ, ಪ್ರಾಮಾಣಿಕತೆಯಿದೆ, ಅವರಲ್ಲಿ ಒಳಗೊಳ್ಳುವ ವ್ಯಕ್ತಿತ್ವವಿದೆ, ಈ ಒಳಗೊಳೂವಿಕೆಯೆ ಏಕತೆ ಅಂದರೆ ಬಹುತ್ವವನ್ನು ಒಳಗೊಳ್ಳುವುದೇ ಏಕತೆ, ವಿವಿಧತೆಯಲ್ಲಿ ಏಕತೆ ಎಂಬುದು ಭಾರತದ ಪ್ರತೀಕ, ವಿವಿಧತೆಯನ್ನು ಮುನ್ನೆಲೆಗೆ ತರುತ್ತಾ ಏಕತೆಯನ್ನು ಅಪಾರ್ಥ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿದ್ದೇವೆ, ನಮಗೆ ಭಾರತೀಯ ವಿವಿಧತೆ ಬೇಕು, ಭಾರತೀಯ ಬಹುತ್ವ ಬೇಕು ಅಲ್ಲಿಯೇ ಏಕತೆ ಇರುವುದು, ಏಕತೆ ಅನ್ನುವುದು ಇದೆಯಲ್ಲ ಅದು ಒಂದು ಒಕ್ಕೂಟ, ಈ ಒಕ್ಕೂಟ ವಿವಿಧ ಸಂಸ್ಕøತಿಗಳ ಒಕ್ಕೂಟ, ವಿವಿಧ ಧರ್ಮಗಳ ಒಕ್ಕೂಟ, ವಿವಿಧ ವಿಚಾರಧಾರೆಗಳ ಒಕ್ಕೂಟ, ಅಂತಹ ಒಕ್ಕೂಟವನ್ನು ಒಗ್ಗೂಡಿಸಬೇಕೆಂದರೆ ಒಳಗೊಳ್ಳುವಿಕೆ ಬೇಕು ಎಂದು ಅಭಿಪ್ರಾಯ ಪಟ್ಟರು.

ದೊರೈರಾಜ್ ಅವರು ಮನುಷ್ಯ ಸಂಬಂಧಗಳನ್ನು ಕಟ್ಟುವಂತಹವರು, ಅವರು ಸಿದ್ಧಾಂತಕ್ಕೆ ಬದ್ದರಾಗಿರುವಂತಹವರು, ಅಬ್ಬರ ಮಾಡುವವರು ಯಾರೂ ಸಿದ್ಧಾಂತಕ್ಕೆ ಬದ್ಧರಾಗಿರುವುದಿಲ್ಲ, ಸೈದ್ಧಾಂತಿ ವಿಚಾರÀವನ್ನು ಇತರರಿಗೆ ತಲುಪಿಸುವಾಗ ನಾನು ಮತ್ತು ನನ್ನ ಜೊತೆಗಿರುವವರ ಸಂಬಂಧ ಮನುಷ್ಯ ಸಂಬಂಧದ ಸೆಳೆತವಿರಬೇಕು, ಅಂತಹ ಸೆಳೆತ ದೊರೈರಾಜ್ ಅವರಲ್ಲಿದ್ದು, ಅವರಲ್ಲಿ ಸಿನಿಕತನವಿಲ್ಲ, ದೊರೈರಾಜ್ ಅವರ ಮನುಷ್ಯ ಸಂಬಂಧ ಎಂತಹವುದು ಎಂದರೆ ಅವರಿದ್ದ ಜಾಗದಲ್ಲಿ ಶಾಲೆಯನ್ನು ಕಟ್ಟುವಾಗ ಅವರೂ ಸೇರಿಕೊಂಡು ಶಾಲಾ ಕಟ್ಟಡವನ್ನು ಕಟ್ಟುತ್ತಾರೆ, ಈ ಕಟ್ಟುವಿಕೆಯಲ್ಲಿ ಪಾಲ್ಗೊಳ್ಳುವಿಕೆ ಇದೆಯಲ್ಲಾ ಅದು ನೀವೇನಾಗಿದ್ದೀರೋ ಅದು ನಾನು ಆಗಿದ್ದೇನೆ ಎಂದರ್ಥ ಎಂದು ಹೇಳಿದರು.
ನಾವು ಹುಟ್ಟಿದ ಸ್ಥಳ ಇದೆಯಲ್ಲಾ ಅದು ನಮಗೆ ಸ್ವರ್ಗ ಸುಖ ನೀಡುವಂತಹ ಸ್ಥಳವಾಗಿರುತ್ತದೆ, ದೊರೈರಾಜ್ ಅವರು ಎಲ್ಲಿ ಹುಟ್ಟಿದರೋ ಆ ಹುಟ್ಟಿದ ಪರಿಸರವನ್ನು ಅದ್ಭುತವಾದ ರಮ್ಯ ಲೋಕ ಎಂದು ಭಾವಿಸಿಕೊಂಡು ಅಲ್ಲಿರತಕ್ಕಂತಹ ಶೋಷಣೆಯ ವಿರುದ್ಧ ಹೋರಾಟವನ್ನು ಅವರದೇ ಆದ ರೀತಿಯಲ್ಲಿ ಕಟ್ಟಿದ್ದು ದೊರೈರಾಜ್ ಅವರ ವಿಶಿಷ್ಟತೆ ಎಂದರು.

ಅವರು ಹುಟ್ಟಿದ ಜಾಗ ಮಹಾತ್ಮ ಗಾಂಧಿ ಬಂದು ಹೋದ ಜಾಗ, ಗಾಂಧೀಜಿಯವರು 1927ರಲ್ಲಿ ಎನ್.ಆರ್.ಕಾಲೋನಿಗೆ ಭೀಟಿ ನೀಡುತ್ತಾರೆ, ಗಾಂಧಿ ಬಂದು ಹೋದ ಮೇಲೆ ಹುಟ್ಟಿದರು, ಮೊಟ್ಟ ಮೊದಲ ಬಾರಿಗೆ ಸ್ವಚ್ಚತೆಯನ್ನು ಕುರಿತು ಈ ತುಮಕೂರಿನ ಎನ್.ಆರ್.ಕಾಲೋನಿಯಲ್ಲಿ ಮಾತನಾಡಿದರು, ಅದೇ ಈಗ ಸ್ವಚ್ಛ ಭಾರತ, ಸ್ವಚ್ಚ ಭಾರತದಲ್ಲಿ ಗಾಂಧಿಯ ಮುಖ ಇಲ್ಲ, ಕನ್ನಡಕ ಮಾತ್ರ ಇದೆ, ಗಾಂಧಿ ಮಾತ್ರ ಇಲ್ಲ,ಸ್ವಚ್ಚ ಭಾರತದ ಕಲ್ಪನೆಯನ್ನು 1927ರಲ್ಲೇ ಗಾಂಧೀಜಿಯವರು ತುಮಕೂರಿನ ಕೋತಿ ತೋಪಿನ ಎನ್.ಆರ್.ಕಾಲೋನಿಯಲ್ಲಿ ಒಂದು ಕಂಬಳಿಯ ಮೇಲೆ ಕುಳಿತು ಸ್ವಚ್ಚತೆಯ ಬಗ್ಗೆ ಮಾತನಾಡಿದರು, ಆ ಜಾಗದಲ್ಲಿ ದೊರೈರಾಜ್ ಇದ್ದಾರೆ,ಅಲ್ಲಿಯೇ ಸ್ವಚ್ಚ ಭಾರತದ ಬೀಜ ಹುಟ್ಟಿದ್ದು, ಸ್ವಚ್ಚ ಭಾರತ ಒಂದು ಒಳ್ಳೆ ಕಲ್ಪನೆ, ನಮ್ಮ ಬೀದಿ ಭಾರತ ಸ್ವಚ್ಚವಾಗಬೇಕು, ಬೀದಿ ಭಾರತದ ಜೊತೆಗೆ ಭಾವ ಭಾರತವೂ ಸ್ವಚ್ಚವಾಗಬೇಕಾದ್ದು ಬಹಳ ಮುಖ್ಯವಾದದ್ದು, ಬೀದಿ ಭಾರತವನ್ನು ಹೆಚ್ಚು ಹೆಚ್ಚು ಸ್ವಚ್ಚ ಮಾಡಲಾಗುತ್ತಿದೆ ಆದರೆ ಭಾವ ಭಾರತವನ್ನು ಹೆಚ್ಚು ಮಲೀನವಾಗುತ್ತಾ ಇದೆ ಎಂದು ಆತಂಕ ವ್ಯಕ್ತ ಪಡಿಸಿದರು.

ದೊರೈರಾಜ್ ಅವರು ಭಾವ ಭಾರತ ಹೆಚ್ಚು ಸ್ವಚ್ಚವಾಗಿರಬೇಕು ಅಂದುಕೊಳ್ಳುವವರು, ನಮ್ಮ ದೂರ ಒಬ್ಬ ಮನುಷ್ಯನಿಂದ ಇನ್ನೊಬ್ಬ ಮನುಷ್ಯನಿಗಿರುವ ದೂರ, ಜಾತಿ ಕಾರಣಕ್ಕಿರುವ ದೂರ, ಧರ್ಮದ ಕಾರಣಕ್ಕಿರುವ ದ್ವೇಷ ಹೋಗಬೇಕೆಂದು ಅವರು ಹೋರಾಟವನ್ನು ಕಟ್ಟಿದವರು, ದೊರೈರಾಜ್ ಅವರಲ್ಲಿ ವೈರುಧ್ಯಗಳನ್ನು ಮೀರಿ ಒಂದಾಗಿಸುವ ಗುಣ ಅವರಲ್ಲಿದೆ, ಏನು ವೈರುಧಯ ಎಂದರೆ ಅವರಲ್ಲಿ ನಲಿವು ಇದೆ, ನೋವು ಇದೆ, ಇದು ಬದುಕಿನ ವೈರುಧ್ಯ, ನೋವು-ನಲಿವನ್ನು ಒಟ್ಟುಗೂಡಿಸಿಕೊಂಡು ಹೋಗಲು ಸಮಚಿತ್ತತೆ ಇರಬೇಕು, ಅಂತಹ ಸಮಚಿತ್ತತೆಯ ವೈರುಧ್ಯಗಳನ್ನು ಒಂದಾಗಿಸುವುದರ ಮುಖಾಂತರವಾಗಿ ಏಕತೆಯ ಪರಿಕಲ್ಪನೆಯನ್ನು ಸಾರ್ಥಕತೆಗೊಳಿಸುವ ಗುಣ ದೊರೈರಾಜ್ ಅವರಲ್ಲಿದೆ ಎಂದರು.

ದೊರೈರಾಜ್ ಅವರು ಆಡಳಿತಗಾರರು ಮತ್ತು ಹೋರಾಟಗಾರರು ಈ ಎರಡನ್ನೂ ಒಬ್ಬ ಆಡಳಿತಗಾರ ಹೋರಾಟಗಾರ ಆಗಲು ಸಾಧ್ಯವೇ? ಆಡಳಿತಗಾರ ಇಂದಿನ ಪರಿಸ್ಥಿತಿಯಲ್ಲಿ ಬಹಳ ಸೊಗಸಾದ ಭ್ರಷ್ಟಚಾರಿಯಾಗಬಹುದು, ಒಬ್ಬ ಆಡಳಿತಗಾರ ಮತ್ತು ಹೋರಾಟಗಾರ ಎಂಬ ಎರಡು ಮನೋಧರ್ಮಗಳನ್ನು ಒಟ್ಟಿಗೆ ಇಟ್ಟುಕೊಳ್ಳುವುದು ಇದೆಯಲ್ಲಾ ಅದು ಬಹಳ ವಿಶೇಷವಾದ ಗುಣ, ದೊರೈರಾಜ ಅವರು ಆಡಳಿತಗಾರರಾಗಿ ಅನೇಕ ಹುದ್ದೆಗಳನ್ನು ಅನುಭವಿಸಿದ್ದಾರೆ, ಆದರೆ ಅವರು ದಕ್ಷತೆಯನ್ನ, ಪ್ರಾಮಾಣಿಕತೆಯನ್ನ, ಅದರ ಜೊತೆಗೆ ಯಾವತ್ತಿಗೂ ಬಿಡದ ವೈಚಾರಿಕತೆಯನ್ನ ಉಳಿಸಿಕೊಂಡಿದ್ದಾರೆ, ಅದು ಬಹಳ ಮುಖ್ಯವಾದದ್ದು, ತಾವು ಆಡಳಿತ ನಡೆಸುವ ಕಡೆಯೇ ವೈಚಾರಿಕೆಯನ್ನು ಹೇಗೆ ಪ್ರಸಾರ ಮಾಡ ಬಹುದು ಎಂಬುದನ್ನು ಅವರು ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.

ಹೋರಾಟಗಾರನ ಕಾರ್ಯ ವಿಧಾನವೇ ಬೇರೆ, ಆಡಳಿಗಾರನ ಕಾರ್ಯವಿಧಾನವೇ ಬೇರೆ, ಅವರು ಆಡಳಿತಗಾರರಾಗಿ ವೈಚಾರಿಕತೆಯನ್ನು ಬಿಟ್ಟು ಕೊಟ್ಟವರಲ್ಲ, ವೈಚಾರಿಕತೆಯನ್ನು ಹೇರದೆ ಅವರು ಮನವರಿಕೆ ಮಾಡಿಕೊಟ್ಟು, ಅದರ ಮೂಲಕ ಹೋರಾಟವನ್ನೂ ರೂಪಿಸಿದವರು ಎಂದ ಬರಗೂರು ರಾಮಚಂದ್ರಪ್ಪನವರು, ತಮ್ಮ ಅಧಿಕಾರಾವಧಿಯಲ್ಲಿ ಎಂದೂ ವೈಚಾರಿಕತೆ ಮಾತನಾಡ ಕೆಲವರು ನಿವೃತ್ತಿಯಾದ ನಂತರ ಕೆಲವರು ಇದ್ದಕ್ಕಿಂದಂತೆ ಪ್ರಕಾರ ಪಂಡಿತ ವೈಚಾರಿಕರಂತೆ ಮಾತನಾಡುತ್ತಾರೆ, ನಿಜವಾದ ವೈಚಾರಿಕವಂತರಾದರೆ ಅವರು ಕೆಲಸ ಮಾಡುವಂತಹ ಜಾಗದಲ್ಲಿ ವೈಚಾರಿಕತೆಯನ್ನು ಪ್ರಚಾರ ಮಾಡುವುದು ಹೇಗೆ ಎಂದು ಯೋಚಿಸುವುದಿಲ್ಲ. ಆದರೆ ದೊರೈರಾಜ್ ಅವರಲ್ಲಿ ಆಡಳಿತಗಾರರಾಗಿದ್ದಾಗ ಹೋರಾಟಗಾರರಾಗಿದ್ದರು, ಹೋರಾಟಗಾರರಾಗಿದ್ದಾಗ ಆಡಳಿತಗಾರರಾಗಿದ್ದರು, ಆಡಳಿತಗಾರನಿಗೆ ಬೇಕಾದ ದಕ್ಷತೆ, ಶಿಸ್ತು, ಮತ್ತು ಕ್ರಮ ಬದ್ಧತೆ ಇದ್ದಾಗ ಮಾತ್ರ ಸಾಧ್ಯ, ಹೋರಾಟಕ್ಕೂ ಕ್ರಮಬದ್ಧತೆ ಬೇಕು ಎಂದು ಹೇಳಿದರು.

ದೊರೈರಾಜ್ ಅವರು ಆಡಳಿತಗಾರರಾಗಿ ಯಾವತ್ತಿಗೂ ಭ್ರಷ್ಟಚಾರಿಯಾಗಲಿಲ್ಲ, ಇವತ್ತು ಪೇಪರ್ ಲೆಸ್ ಆಫೀಸ್ ಎಂಬ ದೊಡ್ಡ ಪರಿಕಲ್ಪನೆ ಬಂದಿದೆ, ತಂತ್ರಜ್ಞಾನ ಬಂದ ಮೇಲೆ, ಜ್ಞಾನ ತಂತ್ರವೋ, ತಂತ್ರಜ್ಞಾನವೋ ಅದು ಬೇರೆ ವಿಷಯ, ಆದರೆ ತಂತ್ರಜ್ಞಾನ ಬಂದ ಮೇಲೆ ಕಾಗದ ರಹಿತ ಕಛೇರಿಗಳು ಬಹಳ ಮುಖ್ಯ ಎಂದು ಮಾತನಾಡುತ್ತಾರೆ, ಕಾಗದ ರಹಿತ ಕಛೇರಿಗಳನ್ನು ಮಾಡುವುದಕ್ಕಿಂತ ಮುಂಚೆ ಭ್ರಷ್ಟಚಾರ ಮುಕ್ತ ಕಛೇರಿಗಳನ್ನು ಮಾಡುವುದು ಮುಖ್ಯ, (ಅoಡಿಡಿuಠಿಣioಟಿ ಐess ಔಜಿಜಿiಛಿe) ನಮ್ಮ ಕಚೇರಿಗಳೆಲ್ಲಾ ಭ್ರಷ್ಟಚಾರದ ಉತ್ತುಂಗದಲ್ಲೇ ಇದ್ದಾವೆ, ದೊರೈರಾಜ್ ಅವರು ಭ್ರಷ್ಟಚಾರ ರಹಿತವಾದ ಆಡಳಿತ ಕೊಟ್ಟಂತಹವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿಂತಕ ಕೆ.ದೊರೈರಾಜ್ ಅವರು, ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿಕೆಗೆ ಅಷ್ಟು ಆಸಕ್ತಿ ಇರಲಿಲ್ಲ, ಆ ನಂತರ ಪ್ರೌಢಶಾಲೆಗೆ ಬಂದ ನಂತರ ಓದಿವಿಕೆಗೆ ಆಸಕ್ತಿ ತೋರಿದೆ, ನನ್ನ ಆಡಳಿದ ಅವಧಿ ಇರಬಹುದು, ಹೋರಾಟದ ದಿನಗಳಿರಬಹುದು ಸಮ ಸಮಾಜದ ಮತ್ತು ಜನರ ಬದುಕು ಹಸನಾಗಿರಬೇಕೆಂಬುದು ನನ್ನದಾಗಿತ್ತು, ನಾನು ಸರ್ಕಾರಿ ಆಡಳಿಗಾರನಾಗಿದ್ದ ಕಾಲದಲ್ಲಿ ಇಂಗ್ಲೀಷ್ ಕಲಿಕೆಯಲ್ಲಿ ಮಕ್ಕಳು ಹಿಂದಿರುವುದನ್ನು ಮನಗಂಡು ಹೆಚ್ಚುವರಿ ಇಂಗ್ಲೀಷ್ ತರಗತಿಗಳನ್ನು ತೆಗೆದುಕೊಳ್ಳಲು ಹೇಳಿದಾಗ ಜಿಲ್ಲೆಯ ಪಿ.ಯು. ಕಾಲೇಜು ಉಪನ್ಯಾಸಕರುಗಳು, ಆಡಳಿತ ಮಂಡಳಿಗಳು ಯಾವ ಫಲಪೇಕ್ಷೆ ಇಲ್ಲದೆ ತರಗತಿಗಳನ್ನು ಮಾಡಿ ನನಗೆ ಹೆಸರು ತಂದವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ನಮ್ಮ ಹೋರಾಟದ ದಿನಗಳಲ್ಲಿ ಹೋರಾಟಕ್ಕೆ ಕರೆ ಕೊಟ್ಟಾಗ ನಮ್ಮ ಹಟ್ಟಿಯಿಂದಲೇ ಸಾವಿರಾರು ಜನರು ಬರುತ್ತಿದ್ದರು, ಪೊಲೀಸರು ನಮ್ಮನ್ನು ಬಂಧಿಸುತ್ತಾರೆ ಎಂದಾಗ ಹೆಣ್ಣು ಮಕ್ಕಳು ನಮ್ಮ ಸುತ್ತಲೂ ನಿಂತು ರಕ್ಷಿಸುತ್ತಿದ್ದರು, ಹೋರಾಟದಿಂದ ಆಗುವ ತೊಂದರೆಗಳದೇ ಬೇರೆ ಕತೆ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ನಮ್ಮ ಹೋರಾಟವೇ ಒಂದು ಎನ್‍ಸೈಕ್ಲೋಪಿಡಿಯಾ ಆಗಲಿದೆ, ಈ ಹೋರಾಟ ನಾನೊಬ್ಬ ಮಾಡಿರುವಂತಹವುದಲ್ಲ ಜನ ಹೋರಾಟ ಮಾಡಿರುವಂತಹವುದು, ಈ ಎಲ್ಲಾ ಹೋರಾಟಗಳು ಜನತೆಗೆ ಸಲ್ಲುವಂತಹವುದು ನನ್ನೊಬ್ಬನಿಗಲ್ಲ ಎಂದರು.

ನಾನು ಹುಟ್ಟಿದ ಜಾಗದಲ್ಲಿದ್ದ ಬಡತನ, ಜಾತಿ ಅವಮಾನ, ದ್ವೇಷ, ಕ್ರೌರ್ಯಗಳು, ಎಲ್ಲವನ್ನೂ ನೋಡಿ ಆ ವ್ಯವಸಯೇ ನನ್ನನ್ನು ಈ ರೀತಿ ಕಡೆಯಿತು, ಜನರ ಪ್ರೀತಿ ವಿಶ್ವಾಸಗಳಿಂದಲೇ ನಾನು ಬೆಳೆದದ್ದು, ನಾನೇನಾದರೂ ಆಗಿದ್ದೇನೆ ಎಂದರೆ ಈ ವ್ಯವಸ್ಥೆಗೆ ಸಲ್ಲಬೇಕು, ಯಾವುದು ಮನುಷ್ಯನನ್ನು ಮತ್ತು ನನ್ನನ್ನು ಒಳಗೊಂಡು ಕ್ರೌರ್ಯವನ್ನು ತೋರಿಸುತ್ತೆ, ಅವಮಾನ ಮಾಡುತ್ತೆ, ಇವೆಲ್ಲವೂ ಕೂಡ ಸರಿ ಇಲ್ಲ ಇರಬಾರದು ಎಂಬುದೇ ನನ್ನ ವಿಚಾರ, ನನ್ನ ನಡೆ, ಯಾವ ಪಂಥ ಎಂದರೆ ಯಾರನ್ನೂ ದ್ವೇಷ ಮಾಡದೆ, ಜನ ಸಾಮಾನ್ಯರಲ್ಲಿ ಬದುಕುತ್ತಿದ್ದೇನೆ, ಮನುಷ್ಯ ಸಂಬಂಧಗಳನ್ನು ಇಟ್ಟುಕೊಂಡು ನಮ್ಮ ವಿಚಾರಗಳನ್ನು ಹೇಳಲು ಸಾಧ್ಯ, ಮನುಷ್ಯನನ್ನು ದೂರ ಇಟ್ಟು ಯಾವ ವಿಚಾರವನ್ನು ಹೇಳಲಿಕ್ಕೆ ಸಾಧ್ಯವಿಲ್ಲ, ಯಾವುದು ನಮ್ಮನ್ನು ಕಾಡಿದೆಯೋ, ಯಾವುದು ನಮಗೆ ಹಿಂಸೆ ಹುಟ್ಟಾಕುತ್ತೋ, ತುಚ್ಚವಾಗಿ ಕಾಣುವುದಿದೆಯಲ್ಲ ಈ ಎಲ್ಲಾ ಅನಿಷ್ಟಗಳನ್ನು ಮೀರಿ ಮಾನವೀಯ ಸಹಜ ಹೋಗಬೇಕೆಂಬ ನಿಲುವಿಗೆ ವ್ಯವಸ್ಥೆಗೆ ನೀವು ಎಲ್ಲರೂ ಕಾರಣರಾಗಿದ್ದೀರಿ ಇದನ್ನು ಯಾವ ಪಂಥ ಅಂತ ಕರೆಯುತ್ತೀರಿ ಅದು ನಿಮಗೆ ಬಿಟ್ಟಂತಹ ವಿಚಾರ ಎಂದು ಹೇಳಿದರು.

ಕೃತಿ ಕುರಿತು ಕವಿಗಳು ಹಾಗೂ ವಿಮರ್ಶಕರಾದ ಡಾ.ಕೆ.ಪಿ.ನಟರಾಜ್ ಮಾತನಾಡಿದರು, ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್.ಸಿದ್ಧಲಿಂಗಪ್ಪ ವಹಿಸಿ ಮಾತನಾಡಿದರು, ಶ್ರೀಮತಿ ಅನುರಾಧ ಮತ್ತು ಕೆ.ದೊರೈರಾಜ್ ಅವರು ಉಪಸ್ಥಿತಿಯಿದ್ದರು, ಮುಖ್ಯ ಅತಿಥಿಗಳಾಗಿ ರೇಷ್ಮೆ ಇಲಾಖೆಯ ಉಪನಿರ್ದೇಶಕರಾದ ಡಾ.ವೈ.ಕೆ.ಬಾಲಕೃಷ್ಣಪ್ಪ, ವಿಶ್ರಾಂತ ಪ್ರಾಂಶುಪಾಲರಾದ ಸಿ.ಚೌಡಪ್ಪ, ಲೇಖಕಿ ಬಾ.ಹ.ರಮಾಕುಮಾರಿ, ಗಾಂಧಿ ವಿಚಾರವಾದಿ ಎಂ.ಬಸವಯ್ಯ, ಭಾಗವಹಿಸಿದ್ದರು. ಕೃತಿಯ ಸಂಪಾದಕರಾದ ಎಂ.ಎಚ್.ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಣಿಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು, ಡಾ.ಮುರಳೀಧರ ಡಿ ಅವರ ತಙಡ, ವಿರೂಪಾಕ್ಷ ಡ್ಯಾಗೇರಹಳ್ಳಿ ಮತ್ತು ಸ್ನೇಹುತರು ದೊರೈರಾಜ್ ದಂಪತಿಗಳ ನ್ನು  ಸನ್ಮಾನಿಸಿದರು.

Leave a Reply

Your email address will not be published. Required fields are marked *