ಬರಗೂರರಿಗೆ ಬುದ್ದಿ ಹೇಳುವಂತೆ ಬೆದರಿಕೆ ಪತ್ರ-ಡಾ.ಎಲ್.ಹನುಮಂತಯ್ಯ

ತುಮಕೂರು : ನಾಡೋಜ ಪ್ರಶಸ್ತಿ ಪುರಸ್ಕøತರಾದ ಸಾಹಿತಿ ಬರಗೂರು ರಾಮಚಂದ್ರಪ್ಪನವರಿಗೆ ಬುದ್ದಿ ಹೇಳುವಂತೆ ಬೆದರಿಕೆ ಪತ್ರಗಳು ಬಂದಿವೆ ಎಂದು ಲೇಖಕರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ.ಎಲ್,ಹನುಮಂತಯ್ಯ ಹೇಳಿದರು.

Dr.L Hanumantaiah speech

ತುಮಕೂರಿನಲ್ಲಿ ಬುಧವಾರ ಸಂಜೆ ಕನ್ನಡಭವನದಲ್ಲಿ ಪ್ರೊ.ಎಚ್.ಜಿ. ಸಣ್ಣಗುಡ್ಡಯ್ಯ ಪ್ರತಿಷ್ಠಾನದ ವತಿಯಿಂದ ಏರ್ಪಾಟಾಗಿದ್ದ ಸಮಾರಂಭದಲ್ಲಿ ಸಾಹಿತಿಗಳಾದ ಚಂದ್ರಶೇಖರ ಆಲೂರು, ಲಲಿತಾ ಸಿದ್ದಬಸವಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಎಡಪಂಥೀಯ ಸಾಹಿತಿಗಳನ್ನು ಹಿಂದು ಧರ್ಮದ ವಿರೋಧಿಗಳಾಗಿದ್ದಾರೆಂದು, ಬರಗೂರು ರಾಮಚಂದ್ರಪ್ಪನವರೂ ಅದೇ ಗುಂಪಿಗೆ ಸೇರಿದವರಾಗಿದ್ದು ಅವರಿಗೆ ಬುದ್ದಿ ಹೇಳುವಂತೆ ಆಗ್ರಹಿಸಿ ಬೆದರಿಕೆ ಪತ್ರಗಳು ಬಂದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.

ಈ ಬೆದರಿಕೆ ಪತ್ರಗಳ ಹಿಂದಿರುವ ಉದ್ದೇಶ ಪರಿಣಾಮ ಕಳವಳಕಾರಿಯದ್ದಾಗಿದ್ದು, ಈ ಬಗ್ಗೆ ಪ್ರಜ್ಞಾವಂತ ವಲಯವು ಗಂಭೀರ ಚಿಂತನೆಯನ್ನು ಮಾಡಬೇಕಿದೆ ಎಂದರು. ಭಾರತ ವಿಶ್ವಗುರುವಾಗಲು ಕೆಲವೇ ಹೆಜ್ಜೆಗಳಷ್ಟೇ ಬಾಕಿಯಿದೆ ಪ್ರಜಾಪ್ರಭುತ್ವವನ್ನುವಿಜೃಂಭಿಸುತ್ತಲೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಲಾಗಿದೆ ಎಂದರು.

ಸ0ವಿಧಾನಬದ್ಧ ಹಕ್ಕುಗಳನ್ನು ಅನುಭವಿಸಲು ಸಾಧ್ಯವಿಲ್ಲದಂತೆ ಉಸಿರುಗಟ್ಟಿದ ವಾತಾವರಣವಿದ್ದು, ಅಘೋಷಿತ ತುರ್ತುಪರಿಸ್ಥಿತಿ ಸೃಷ್ಠಿಸಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಮ್ಯುನಿಸ್ಟ್, ಸಮಾಜವಾದಿ ಚಿಂತನೆಯ ಲೇಖಕ ರನ್ನು ಗೌರವಿಸುತ್ತಿದ್ದ ದೇಶದಲ್ಲಿ 75 ವರ್ಷದಲ್ಲೇ ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದ್ದು, ಕಮ್ಯುನಿಸ್ಟ್ ಚಿಂತನೆಯವರು ದೇಶದ್ರೋಹಿಗಳಲ್ಲ, ಸತ್ಯ ಪಕ್ಷಪಾತಿಗಳು. ಯುವಜನರು ದಿಕ್ಕು ತಪ್ಪಿದಂತೆ ಧರ್ಮ, ಜಾತಿ ಹೆಸರಲ್ಲಿ ಭಾವೋದ್ರಿಕ್ತರಾಗುತ್ತಿದ್ದಾರೆ.ನೆಹರು ಕಾಲದಲ್ಲಿ ಗುರುತಿಸಿ ಗೌರವಿಸುತ್ತಿದ್ದ ಸಮಾಜಮುಖಿ ಚಿಂತನೆಯ ಸಾಹಿತಿಗಳನ್ನು ಇಂದು ಜೈಲಿಗಟ್ಟಲಾಗುತ್ತಿದೆ. 85 ವರ್ಷದ ಚಿಂತಕ ವರವರರಾವ್ ಅವರನ್ನು ಎಡಪಂಥೀಯ ಸಿದ್ಧಾಂತ ಪ್ರತಿಪಾದಿಸುತ್ತಾರೆ ಎನ್ನುವ ಕಾರಣಕ್ಕೆ ಜೈಲಿಗೆ ಕಳುಹಿಸಲಾಯಿತು. ಅಂಬೇಡ್ಕರ್ ಸಂಬಂಧಿಯಾದ ತೇಲ್‍ಥಾಮ್ಟೆಯನ್ನು ಜಾಮೀನು ರಹೀತವಾಗಿ ಬಂಧಿಸಿ ಎರಡು ವರ್ಷಗಳಿಂದ ಜೈಲಿನಲ್ಲಿಡಾಲಾಗಿದೆ, ಸಂಸತ್‍ನಲ್ಲಿ ಪ್ರಶ್ನಿಸಿದರೂ ಇದಕ್ಕೆ ಉತ್ತರವೇ ಇಲ್ಲ, ನ್ಯಾಯಾಲಯಗಳಲ್ಲೂ ಈ ಅರ್ಜಿಗಳನ್ನು ಕೊನೆಯಲ್ಲಿ ನಡೆಸಲಗುತ್ತಿದೆ, ಸಬ್ಸಿಡಿ ಏಕೆ ಕೊಡ ಬೇಕು ಎಂಬ ವಿಚಾರವನ್ನು ವಿಚಾರಣೆಗೆ ಮೊದಲಿಗೆ ಕೂಗೆತ್ತಿಕೊಳ್ಳಲಾಗುತ್ತಿದೆ ಎಂದರು.

1970ರ ದಶಕದಲ್ಲಿ ಮಾಕ್ರ್ಸ್‍ವಾದದ ಪ್ರಭಾವ ಸಾಹಿತಿಗಳ ಮೇಲೆ ಹೆಚ್ಚಾಯಿತು ಎಂದ ಎಲ್. ಹನುಮಂತಯ್ಯ ಅವರು ಎಚ್.ಜಿ. ಸಣ್ಣಗುಡ್ಡಯ್ಯ ಅವರು ಆಧುನಿಕ ತಲೆಮಾರಿನ ವಿಚಾರವಂತ ಸಾಹಿತಿಗಳ ಸಾಲಿಗೆ ಸೇರುತ್ತಾರೆ. ಸತ್ಯ, ವಾಸ್ತವತೆಯನ್ನು ನಿರ್ಭೀತಿಯಿಂದ ಪ್ರತಿ ಪಾದಿಸುತ್ತಿದ್ದ ಎಚ್.ಜಿ.ಸಣ್ಣಗುಡ್ಡಯ್ಯ ಅವರ ಪ್ರಶಸ್ತಿ ಇಬ್ಬರು ಸಂವೇದನಶೀಲ ಬರಹಗಾರ ರಾದ ಲಲಿತಾ ಸಿದ್ದಬಸವಯ್ಯ ಹಾಗೂ ಚಂದ್ರ ಶೇಖರ್ ಅಲೂರಿಗೆ ಟ್ರಸ್ಟ್ ಕೊಡಮಾಡಿರುವುದು ಪ್ರಶಸ್ತಿ ಮೌಲ್ಯ ಹೆಚ್ಚಿದೆ ಎಂದು ಎಲ್. ಹನುಮಂತಯ್ಯ ಹೇಳಿದರು.

ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಪ್ರೊ. ಬರಗೂರು ರಾಮಚಂದ್ರಪ್ಪ ಮಾತನಾಡಿ, ಸಣ್ಣಗುಡ್ಡಯ್ಯನವರು ತಮ ಗೆ ನೇರ ಗುರುವಲ್ಲದಿದ್ದರೂ, ಗುರುವಿನ ರೀತಿಯಲ್ಲೇ ಮಾರ್ಗದರ್ಶನಮಾಡಿದ್ದಾರೆ. ಅವರು ತುಳಿಯುತ್ತಿದ್ದ ಸೈಕಲ್ಲನ್ನೇ ತಮಗೂ ಬಳಸಲು ಅವಕಾಶ ನೀಡಿದ್ದು ಸ್ಮರಣೀಯ ಘಟನೆಗಳಲ್ಲೊಂದು, ಸಣ್ಣಗುಡ್ಡಯ್ಯನವರ ಸಮಕಾಲೀನರೇ ಆದ ಹೋರಾಟಗಾರ ಹಾಗೂ ಟೈಲರ್ ಕೆ.ಆರ್. ನಾಯಕ್, ಕೃಷಿಕ ಹಾಗೂ ಕವಿ ವಿ. ಚಿಕ್ಕವೀರಯ್ಯನವರು ಸೇರಿ ತುಮಕೂರಿನಲ್ಲಿ ಸಾಹಿತ್ಯಕ, ಸಾಂಸ್ಕøತಿಕ, ಹೋರಾಟದ ವಾತಾವರಣ ನಿರ್ಮಾಣ ಮಾಡಿದ್ದು ಅವಿಸ್ಮರಣೀಯ ಎಂದರು.
ಲಲಿತ ಪ್ರಬಂಧಕ್ಕಾಗಿ ಚಂದ್ರಶೇಖರ ಆಲೂರು, ಕಾವ್ಯಕ್ಕಾಗಿ ಲಲಿತಾ ಕಾವ್ಯಕ್ಕಾಗಿ ಲಲಿತಾ ಸಿದ್ಧಬಸವಯ್ಯಗೆ ಸಣ್ಣ ಗುಡ್ಡಯ್ಯ ಪ್ರತಿಷ್ಠಾನದಿಂದ ಪ್ರಶಸ್ತಿ ಪ್ರದಾನ ಮಾಡ ಲಾಯಿತು. ಇವರಿಗೆ ತಲಾ 10ಸಾವಿರ ನಗದನ್ನು ನೀಡಲಾಯಿತು. ಸಣ್ಣಗುಡ್ಡಯ್ಯರ ಬದುಕು- ಬರಹ ಕುರಿತು ಪಿಎಚ್‍ಡಿ ಮಹಾಪ್ರಬಂಧ ರಚಿಸಿರುವ ಡಾ. ವೈ.ಎಂ. ಪದ್ಮಜಾರನ್ನು ಸನ್ಮಾನಿಸಲಾಯಿತು.

ಪ್ರಶ್ನಿಸಿ ಸಣ್ಣಗುಡ್ಡಯ್ಯ ಪ್ರತಿಷ್ಠಾನದ ಅಧ್ಯಕ್ಷರು, ಗಾಂಧಿ ವಾದಿಗಳೂ ಆದ ಎಂ. ಬಸವಯ್ಯ, ಪ್ರತಿಷ್ಠಾನ ಮಂಡಳಿಯ ಉಪಾಧ್ಯಕ್ಷರಾದ ಪತ್ರಿಕೋದ್ಯಮಿ ಎಸ್. ನಾಗಣ್ಣ ಶಾಂತಾ ಸಣ್ಣಗುಡ್ಡಯ್ಯ, ಕಾರ್ಯದರ್ಶಿ ಡಾ. ನಾಗಭೂಷಣ ಬಗ್ಗನಡು, ಸದಸ್ಯರಾದ ಎಂ.ಎ.ಹೆಚ್.ನಾಗರಾಜು, , ಎಚ್.ವಿ. ಸುಗುಣ, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಇದ್ದರು.

Leave a Reply

Your email address will not be published. Required fields are marked *