ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ನ ಮುಖಂಡರುಗಳು ಮಾಜಿ ಶಾಸಕ ಬಿ.ಸುರೇಶಗೌಡ ನೇತೃತ್ವದಲ್ಲಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
.ಜೆಡಿಎಸ್ ನ ತುಮಕೂರು ಎಪಿಎಂಸಿ ಮಾಜಿ ಅಧ್ಯಕ್ಷ, ಕಳೆದ ಜಿ.ಪಂ. ಚುನಾವಣೆಯ ಪರಾರ್ಜಿತ ಅಭ್ಯರ್ಥಿ ವೈ.ಟಿ.ನಾಗರಾಜ್, ಬೆಳಗುಂಬ ಜಿ.ಪಂ.ನ ಪರಾರ್ಜಿತ ಅಭ್ಯರ್ಥಿ ಕೆಂಪರಾಜು, ಹೆಗ್ಗರೆ ಜಿ.ಪಂ. ಪರಾಜಿತ ಅಭ್ಯರ್ಥಿ ಜಿ.ವೆಂಕಟೇಶ್, ಹೊನ್ನುಡಿಕೆ ಜಿ.ಪಂ. ಪರಾಜಿತ ಅಭ್ಯರ್ಥಿ ಹನುಮಂತರಾಯಪ್ಪ, ಊರ್ಡಿಗೆರೆ ಜಿ.ಪಂ. ಪರಾಜಿತ ಅಭ್ಯರ್ಥಿ ವೆಂಕಟೇಶಬಾಬು, ತುಮಕೂರು ಗ್ರಾಮಾಂತರ ಜಿ.ಪಂ. ಮಾಜಿ ಸದಸ್ಯ ರಾಮಾಂಜಿನಪ್ಪ, ತುಮಕೂರು ಎಪಿಎಂಸಿ ಮಾಜಿ ಅಧ್ಯಕ್ಷೆ ತಾರಾದೇವಿ, ತುಮಕೂರು ಗ್ರಾಮಾಂತರದ ಕಾರ್ಯಾಧ್ಯಕ್ಷ ಜಯಂತ್ ಗೌಡ, ತುಮಕೂರು ಪಾಲಿಕೆ ಮಾಜಿ ಸದಸ್ಯ ಜನಾರ್ದನ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಯೋಗೀಶ್ ಅವರುಗಳು ಜೆಡಿಎಸ್ ತೊರೆದು ಬಿಜೆಪಿ ಸೇರಿದರು.
ಇವರಲ್ಲದೆ ಅರೆಯೂರು ತಾ.ಪಂ. ಸದಸ್ಯ ಮುನೇಶ್, ಕೆಸರುಮಡು ಗ್ರಾ.ಪಂ. ಮಾಜಿ ಅಧ್ಯಕ್ಷ ಮಾರೇಗೌಡ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಮುನಿರಾಜು, ಹೆಗ್ಗರೆ ಗ್ರಾ.ಪಂ ಸದಸ್ಯ ಶಿವಣ್ಣ, ಮಾಜಿ ಸದಸ್ಯ ನಾಗರಾಜು, ಹೆಗ್ಗರೆಯ ಪ್ರಮುಖ ಮುಖಂಡರಾದ ರೇಣುಕಪ್ರಸಾದ್, ಸಿರಿವಾರದ ನಾರಾಯಣಪ್ಪ, ಹರಳೂರು ಗ್ರಾ.ಪಂ. ಸದಸ್ಯ ಕೃಷ್ಣಪ್ಪ, ವಡೆಯರಪುರದ ಸ್ವಾಮಿ, ಅರೆಯೂರು ಗ್ರಾ.ಪಂ. ಸದಸ್ಯ ಶ್ರೀನಿವಾಸ್, ಹೆಗ್ಗರೆಯ ಅಲ್ಪ ಸಂಖ್ಯಾತರ ಘಟಕದ ಮುಖಂಡ ಮುಬಾರಕ್ ಪಾμÁ ಸೇರ್ಪಡೆಗೊಂಡ ಪ್ರಮುಖರಾಗಿದ್ದಾರೆ.
ಮುಖಂಡರು ಜೆಡಿಎಸ್ ತೊರೆದು ಬಿಜೆಪಿಗೆ ಸೇರುವ ಮುನ್ನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಔಪಚಾರಿಕವಾಗಿ ಮಾತನಾಡಿದರು.
ನಾನು ಮಾಡಿರುವುದಕ್ಕಿಂತಲೂ ಹೆಚ್ಚು ಕೆಲಸ ಸುರೇಶಗೌಡರು ಮಾಡಿದ್ದಾರೆ. ಹೆಬ್ಬೂರು- ಗೂಳೂರು ಏತ ನೀರಾವರಿ ಯೋಜನೆಯನ್ನು ವರ್ಷದಲ್ಲೇ ಮುಗಿಸಿದರು. ಈ ಸಲ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಬಿಜೆಪಿ ಗ್ರಾಮಾಂತರ ಘಟಕದ ಕಾರ್ಯಾಧ್ಯಕ್ಷ ಶಂಕರಣ್ಣ, ಹಿರಿಯ ಮುಖಂಡರಾದ ವೈ.ಎಚ್.ಹುಚ್ಚಯ್ಯ, ಜಿ.ಪಂ.ಮಾಜಿ ಸದಸ್ಯರಾದ ಸಿದ್ದೇಗೌಡ, ನರಸಿಂಹಮೂರ್ತಿ, ಗೂಳೂರು ಶಿವಕುಮಾರ್, ನರಸಿಂಹಮೂರ್ತಿ ಸಹಿತ ಹಲವು ಬಿಜೆಪಿ ಮುಖಂಡರು ಇದ್ದರು.