ಡುಡಿಯುವ ಸಮಯ 12 ಗಂಟೆ-ಮಾಚ್ 23 ಕಾರ್ಮಿಕ ಸಂಘಟನೆಗಳ ಮುಷ್ಕರ

ತುಮಕೂರು:ರಾಜ್ಯ ಸರಕಾರ ಇತ್ತೀಚಗೆ ಕಾರ್ಮಿಕರ ದುಡಿಯುವ ವೇಳೆಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿರುವ ಕ್ರಮವನ್ನು ಖಂಡಿಸಿ,ಮಾರ್ಚ್ 23 ರ ಗುರುವಾರದಂದು ಎಲ್ಲಾ ಕಾರ್ಮಿಕ ಸಂಘಟನೆಗಳು ಸೇರಿ ಮುಷ್ಕರಕ್ಕೆ ಕರೆ ನೀಡಿವೆ ಎಂದು ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯ ಗಿರೀಶ್ ತಿಳಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,1886ರಲ್ಲಿ ನಡೆದ ಚಿಕಾಗೋ ಒಪ್ಪಂದದಂತೆ ದಿನದ 24 ಗಂಟೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ,8 ಗಂಟೆ ದುಡಿಮೆ,8 ಗಂಟೆ ರೆಸ್ಟ್ ಮತ್ತು 8 ಗಂಟೆ ನಿದ್ರೆಗೆ ನಿಗಧಿ ಪಡಿಸಿರುವುದಲ್ಲದೆ,ಕನಿಷ್ಠ 5 ಗಂಟೆಗೊಮ್ಮೆ ಅರ್ಧ ತಾಸು ವಿಶಾಂತ್ರಿ ಅವಕಾಶ ನೀಡಬೇಕೆಂಬ ನಿಯವಿದೆ.ಆದರೆ ಹೊಸ ನೀತಿಯಲ್ಲಿ ಯಾವುದೇ ಬಿಡುವಿಲ್ಲದೆ 6 ಗಂಟೆಗಳ ನಿರಂತರ ದುಡಿಮೆಗೆ ದೂಡಲಾಗಿದೆ.ಅಲ್ಲದೆ ದಿನದ ಮೂರು ಪಾಳಿಯನ್ನು ಎರಡು ಪಾಳಿಯಲ್ಲಿ ದುಡಿಯುವಂತೆ ಮಾಡಿ,ಮಾಲಿಕರಿಗೆ ಹೆಚ್ಚು ಲಾಭವಾಗುವಂತೆ, ಕಾರ್ಮಿಕರ ಪಾಲು ಕಡಿಮೆಯಾಗುವಂತೆ ಮಾಡಿ, ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಮತ್ತುಷ್ಟು ಹೆಚ್ಚಿಸಿದೆ. ಇದರ ವಿರುದ್ದ ಎಲ್ಲಾ ಕಾರ್ಮಿಕ ಸಂಘಟನೆಗಳು ಮಾರ್ಚ್ 23ರ ಮುಷ್ಕರಕ್ಕೆ ಕರೆ ನೀಡಿವೆ ಎಂದರು.

ಸಿಐಟಿಯುನ ಸೈಯದ್ ಮುಜೀಬ್ ಮಾತನಾಡಿ,ಕರ್ನಾಟಕ ಕಾರ್ಮಿಕ ಕಾಯ್ದೆ ಅಧಿನಿಯಮ-1948ರ ಅನ್ವಯ ದುಡಿಯುವ ಸಮಯವನ್ನು ನಿಗಧಿ ಪಡಿಸಿದೆ.ಆದರೆ ಇಂದು ಕೇಂದ್ರ ಮತ್ತು ರಾಜ್ಯ ಸರಕಾರ ದುಡಿಯುವ ಸಮಯವನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿದೆ.ಅಲ್ಲದೆ ರಾತ್ರಿ ಪಾಳಿಯಲ್ಲಿ ಹೆಣ್ಣು ಮಕ್ಕಳಿಗೆ ದುಡಿಯಲು ಅವಕಾಶ ನೀಡಿದೆ.ದೊಡ್ಡ ದೊಡ್ಡ ಮಾಲ್‍ಗಳಲ್ಲಿ ರಾತ್ರಿ ವೇಳೆಯಲ್ಲಿ ಕೆಲಸ ಮಾಡಲು ಈ ರೀತಿಯ ಕಾನೂನು ಬದಲಾವಣೆ ಮಾಡಲಾಗಿದೆ.ಆದರೆ ಇಂದಿಗೂ ದುಡಿಯುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳ ನಡೆಯುತ್ತಲೇ ಇವೆ. ಹಗಲಿನಲ್ಲಿಯೇ ಈ ರೀತಿಯಾದರೆ ಇನ್ನೂ ರಾತ್ರಿ ವೇಳೆ ದುಡಿಯುವ ಮಹಿಳೆಯರ ಪಾಡೇನು, ಅವರಿಗೆ ಯಾವ ರೀತಿ ರಕ್ಷಣೆ ಕೈಗೊಳ್ಳಬೇಕೆಂಬ ಸಣ್ಣ ತಿಳುವಳಿಕೆಯೂ ಸರಕಾರಕ್ಕೆ ಇಲ್ಲ.ದುಡಿಯುವ ಸಮಯವನ್ನುಹೆಚ್ಚಳ ಮಾಡುವುದು ಜೀವ ವಿರೋಧಿಯಾಗಿದೆ.ಅಲ್ಲದೆ ಸಂವಿಧಾನವಿರೋಧಿಯೂ ಆಗಿದೆ. ಹಾಗಾಗಿ ಜೆಸಿಟಿಯು ಮಾರ್ಚ್ 23 ರಂದು ಮುಷ್ಕರಕ್ಕೆ ಕರೆ ನೀಡಿದೆ.ಅಂದು ನಗರದ ಟೌನ್‍ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.ಈ ಮುಷ್ಕರದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದರು.

ಎಐಯುಟಿಯುಸಿ ಮಂಜುಳ ಗೋನಾವರ,ಎಐಟಿಯುಸಿಯ ಆಶ್ವಥನಾರಾಯಣ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *