ಕಲ್ಪತರು ನಾಡಿನಲ್ಲಿ ಯಶಸ್ಸು ಕಂಡ ಭಾರತ ಜೋಡೋ ಯಾತ್ರೆ – Save Sparrow(Gubbi-135)Constituency ಎದ್ದು ಕಂಡ ಫಲಕ

ತುಮಕೂರು: ಕಲ್ಪತರು ನಾಡಿಗೆ ಆಗಮಿಸಿರುವ ಭಾರತ ಜೋಡೋ ಯಾತ್ರೆಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ರಾಹುಲ್ ಗಾಂಧಿ ಹೆಜ್ಜೆ ಹಾಕಿದ ದಾರಿಯ ಇಕ್ಕಲೆಗಳಲ್ಲಿ ಜನಸ್ತೋಮ ನೆರೆದು ಸ್ವಾಗತ ಕೋರಿದರು.

ಇಂದು ಬೆಳಿಗ್ಗೆ ತುರುವೇಕೆರೆ ತಾಲ್ಲೂಕಿನ ಬಾಣಸಂದ್ರದಿಂದ ನಡೆಗೆಯನ್ನು ಪ್ರಾರಂಭಿಸಿದ ರಾಹುಲ್ ಗಾಂಧಿ ಎಲ್ಲಿಯೂ ನಿಲ್ಲದೆ ಜೆ.ಸಿ.ಪುರದ ತನಕ ಬಿರುಸಿನ ನಡಿಗೆಯಲ್ಲಿ ನಡೆದರು. ಇವರ ಜೊತೆಗೆ ಹಜ್ಜೆ ಹಾಕಿದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಶಾಸಕರಾದ ಷಡಕ್ಷರಿ, ಕೆ.ಎನ್.ರಾಜಣ್ಣ ಟೂಡಾಶಶಿಧರ್, ರಾಯಸಂದ್ರ ರವಿಕುಮಾರ್, ಜಿ.ಎಸ್.ಪ್ರಸನ್ನಕುಮಾರ್ ಅವರುಗಳು ಹೆಜ್ಜೆ ಹಾಕಿದರು.
ದಾರಿಯ ಮಧ್ಯೆ ದಲಿತ ಮುಖಂಡ ಕುಂದೂರು ತಿಮ್ಮಯ್ಯ ಅವರು ರಾಹುಲ್ ಗಾಂಧಿಯವರಿಗೆ ಅಂಬೇಡ್ಕರ್ ಮೂರ್ತಿಯನ್ನು ನೀಡುವುದರ ಮೂಲಕ ಸ್ವಾಗತವನ್ನು ಕೋರಿದರು.

SAVE GUbbi

ಬೆಳಿಗ್ಗೆ 6ಗಂಟೆಗೆ ಸರಿಯಾಗಿ ನಡಿಗೆ ಪ್ರಾರಂಭಿಸಿದ ರಾಹುಲ್ ಅವರು, ಕೆ.ಬಿ.ಕ್ರಾಸ್‍ನಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಾರೆಂದು ವೇದಿಕೆ ಸಜ್ಜು ಮಾಡಿದ್ದರೂ ನಿಲ್ಲದೆ ಮುಂದೆ ಸಾಗಿದರು.

ಜೆ.ಸಿ.ಪುರದಲ್ಲಿ ಬಾಳೆಕಾಯಿ ಶಿವನಂಜಪ್ಪನವರ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಿದರು. ಜೆ.ಸಿ.ಪುರದಲ್ಲಿ ಬಾಳೆಕಾಯಿ ಶಿವನಂಜಪ್ಪನವರ ಮನೆ ಸಚಿವ ಜೆ.ಸಿ.ಮಾಧುಸ್ವಾಮಿಯವರ ಮನೆ ಎದುರಿಗೆ ಇದೆ. ಸಚಿವ ಜೆ.ಸಿ.ಮಾಧುಸ್ವಾಮಿಯವರು ಮನೆಯಲ್ಲಿಯೇ ಇದ್ದರೂ ಹೊರ ಬರಲಿಲ್ಲ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಾಳೆಕಾಯಿ ಶಿವನಂಜಪ್ಪನವರ ಮನೆಯಲ್ಲಿ ಉಪಹಾರ ಸೇವನೆಗಾಗಿ ತಂಗಿದ್ದ ರಾಹುಲ್‍ಗಾಂಧಿಯವರು, ಸಾವಯವ ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಬೆಲೆ ಮತ್ತು ಮಾರುಕಟ್ಟೆಯ ಬಗ್ಗೆ ಮಾಹಿತಿ ಪಡೆದುಕೊಂಡು, ಸ್ಥಳೀಯ ಸ್ಥಿತಿಗತಿಯ ಬಗ್ಗೆ ವಿಚಾರಿಸಿದರು.

ತದ ನಂತರ ಚಿಕ್ಕನಾಯಕನಹಳ್ಳಿಗೆ ಹಜ್ಜೆ ಹಾಕಿದ ರಾಹುಲ್ ಕನಕ ಜಯಂತಿಯಲ್ಲಿ ಭಾಗವಹಿಸಿ, ನಂತರ ಕನಕ ಭವನದಲ್ಲಿ ಮಧ್ಯಾಹ್ನನದ ವಿಶಾಂತ್ರಿ ಪಡೆದರು.


ನಂತರ ಚಿಕ್ಕನಾಯಕನಹಳ್ಳಿಯಿಂದ ಅಂಕನಬಾವಿಯವರೆಗೆ ಪಾದಯಾತ್ರೆಯಲ್ಲಿ ಸಾಗಿ ರಾತ್ರಿ ತಂಗಿದರು.
ರಸ್ತೆಯುದ್ದಕ್ಕೂ ರಾರಾಜಿಸಿದ ಬ್ಯಾನರ್-ಪ್ಲೆಕ್ಸ್‍ಗಳು : ಬಾಣಸಂದ್ರದಿಂದ ರಸ್ತೆಯುದ್ದಕ್ಕೂ ರಾಹುಲ್ ಗಾಂಧಿ, ಸೋನಿಯಾಗಾಧಿ ಮತ್ತು ಪ್ರಿಯಾಂಕ ಗಾಂಧಿಯವರ ದೊಡ್ಡ ದೊಡ್ಡ ಬ್ಯಾನರ್ ಮತ್ತು ಪ್ಲೆಕ್ಸ್‍ಗಳನ್ನು ರಾಷ್ಟ್ರ ಮತ್ತು ರಾಜ್ಯದ ನಾಯಕರುಗಳ ಬ್ಯಾನರ್-ಪ್ಲೆಕ್ಸ್‍ಗಳನ್ನು ಕಟ್ಟಲಾಗಿತ್ತು.

ದಾರಿಯುದ್ದಕ್ಕೂ ನಡಿಗೆಯಲ್ಲಿ ಭಾಗವಹಸಿದವರಿಗೆ ಬಿಸ್ಕತ್, ನೀರು, ಎಳೆನೀರು, ಪುರಿ ವಿತರಿಸಿದರು. ತರಬೇನಹಳ್ಳಿ ಗೇಟ್‍ನಲ್ಲಿ ಪಾದಯಾತ್ರೆಯಲ್ಲಿ ಭಾಗವಹಸಿದ ಜನರಿಗೆ ಪೊಲೀಸ್ ಸಿಬ್ಬಂದಿಗೆ ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕೆ.ಬಿ.ಕ್ರಾಸ್‍ನಲ್ಲಿ ಜನರನ್ನು ಆಕರ್ಷಿಸಿದ ಜಾನಪದ ತಂಡಗಳು : ಗುಬ್ಬಿ ವಿಧಾನ ಸಭಾ ಕ್ಷೇತ್ರದ ಜಿ.ಎಸ್.ಪ್ರಸನ್ನಕುಮಾರ್ ಅವರು ಅಯೋಜಿಸಿದ್ದ, ವೀರಗಾಸೆ ಕುಣಿತ, ಕೊಂಬು-ಕಹಳೆ ವಾದ್ಯ ಮತ್ತು ಕಲಶ ಹೊತ್ತ ಮಹಿಳೆಯರು ರಾಹುಲ್‍ಗಾಂಧಿಯನ್ನು ಸ್ವಾಗತಿಸಲು ಬಂದಾಗ ಸೇರಿದ್ದ ಜನಸ್ತೋಮವನ್ನು ಆಕರ್ಷಿಸಿತು. ದಾರಿಯುದ್ದಕ್ಕೂ ಇವರು ಕೊಂಬು ಕಹಳೆ ಊದುತ್ತಾ, ಮದ್ದಲೆ ನುಡಿಸುತ್ತಾ ಯಾತ್ರೆಯ ಹಿಂದೆ ಸಾಗುತ್ತಾ ಸಾಗಿದ್ದು ಜನರನ್ನು ಆಕರ್ಷಿಸಿತು. ಈ ಸಂದರ್ಭದಲ್ಲಿ ಗುಬ್ಬಿ ಕ್ಷೇತ್ರದ ಕಾರ್ಯಕರ್ತರು ಹಿಡಿದಿದ್ದ Save Sparrow(Gubbi-135) No Development From Past 25 Years GUBBI CONSTITUENCY.& Save Unity in Diversity it is Foundation of India. ಪಾದಯಾತ್ರೆಯಲ್ಲಿ ಭಾಗವಹಸಿದವರನ್ನು ಆಕರ್ಷಿಸಿದವು.

Gubbi Taluk Janapada Teams in Jodo Yatra at K.B.Cross, Tumkur Dist.

ಚಿಕ್ಕನಾಯಕನಹಳ್ಳಿಯಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಮಧುಬಂಗಾರಪ್ಪ, ಮುಂತಾದವರು ಭಾಗವಹಿಸಿದ್ದರು.


ಪಾದಯಾತ್ರೆಯಲ್ಲಿ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಹಾಗೂ ಪತ್ರಕರ್ತರಾದ ದಿನೇಶ್ ಅಮಿನ್ ಮಟ್ಟು, ಹಾಸ್ಯನಟ ಮುತ್ತುರಾಜ್, ಡಾ.ಫರ್ಹಾನಬೇಗಂ, ಡಾ.ಅರುಂಧತಿ, ಡಾ.ಬಸವರಾಜು, ಪತ್ರಕರ್ತ ವೆಂಕಟಾಚಲ.ಹೆಚ್.ವಿ. ಪಾದಯಾತ್ರೆಯಲ್ಲಿ ಹಜ್ಜೆ ಹಾಕಿದರು.

Leave a Reply

Your email address will not be published. Required fields are marked *