ತುಮಕೂರು: ನಂದಿನಿ ಹಾಲಿನ ದರ ಏರಿಕೆ ( Nandini milk price hiked ) ಬಗ್ಗೆ ಈ ತಿಂಗಳ 20ರ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರು ತಿಳಿಸಿದರು.
ಸೇಡಂನಲ್ಲಿ ಹಾಲಿನ ದರ ಪರಿಷ್ಕರಣೆ ( Milk price revision ) ಬಗ್ಗೆ ಮಾಧ್ಯಮವರಿಗೆ ಪ್ರತಿಕ್ರಿಯಿಸುತ್ತಾ, ಕಳೆದ ಹಲವಾರು ತಿಂಗಳಿನಿಂದ ಚರ್ಚೆಯಾಗುತ್ತಿದ್ದು, ಈ ತಿಂಗಳ 20ನೇ ತಾರೀಖಿನ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
KFMನಿಂದ ನಂದಿನಿ ಹಾಲು, ಮೊಸರಿನ ದರ 3 ರೂ ಹೆಚ್ಚಳ: ಹೀಗಿದೆ ನೂತನ ಪರಿಷ್ಕೃತ ದರಪಟ್ಟಿ
ಬೆಂಗಳೂರು: ಚರ್ಮ ಗಂಟು ರೋಗ, ಅತಿವೃಷ್ಟಿ ಸೇರಿದಂತೆ ಇತರೆ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿರುವಂತ ರೈತರಿಗೆ ನೆರವಾಗುವ ನಿಟ್ಟಿನಲ್ಲಿ, ಹಾಲು, ಮೊಸರಿನ ದರವನ್ನು ( Nandini Milk, Curd Price Hike ) ಪ್ರತಿ ಲೀಟರ್ ಗೆ 3 ರೂ ಹೆಚ್ಚಳ ಮಾಡಲಾಗಿತ್ತು.
ಈ ಕುರಿತಂತೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (Karnataka Co-operative Milk Producers Federation- KMF ) ಮಾಹಿತಿ ಬಿಡುಗಡೆ ಮಾಡಿದ್ದು, ನಂದಿನಯ ಎಲ್ಲಾ ಮಾದರಿಯ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 3 ರೂ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ.
ಹೀಗಿದೆ ನಂದಿನ ಹಾಲು, ಮೊಸರಿನ ಪರಿಷ್ಕೃತ ನೂತನ ದರಪಟ್ಟಿ
ಪ್ರಸ್ತುತ ಟೋಲ್ ಹಾಲಿನ ದರ ರೂ.37 ಇತ್ತು. ಇದೀಗ ಮೂರು ರೂ ಹೆಚ್ಚಳದ ನಂತ್ರ ರೂ.40ಕ್ಕೆ ತಲುಪಿದೆ.
ಹೋಮೋಜಿನೈಸ್ಡ್ ಟೋನ್ಡ್ ಹಾಲು ರೂ.38ರಿಂದ ರೂ.41ಕ್ಕೆ ಹೆಚ್ಚಳ
ಹೋಮೋಜಿನೈಸ್ಡ್ ಹಸುವಿನ ಹಾಲು ರೂ.42 ರಿಂದ 45ಕ್ಕೆ ಹೆಚ್ಚಳ
ಸ್ಪೆಷಲ್ ಹಾಲು ರೂ.43 ರಿಂದ 46ಕ್ಕೆ ಹೆಚ್ಚಳ
ಶುಭಂ ಹಾಲು ರೂ.43 ರಿಂದ 46ಕ್ಕೆ ಏರಿಕೆ
ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು ರೂ.44 ರಿಂದ 47ಕ್ಕೆ ಹೆಚ್ಚಳ
ಸಮೃದ್ಧಿ ಹಾಲು ರೂ.48 ರಿಂದ 51ಕ್ಕೆ ಹೆಚ್ಚಳ
ಸಂತೃಪ್ತಿ ಹಾಲು (ಹೋಮೋಜಿನೈಸ್ಡ್) ರೂ.50 ರಿಂದ 53ಕ್ಕೆ ಹೆಚ್ಚಳ
ಡಬಲ್ ಟೋನ್ಡ್ ಹಾಲು ರೂ.36 ರಿಂದ 39ಕ್ಕೆ ಏರಿಕೆ
ಇನ್ನೂ ಮೊಸರು ಪ್ರತಿ ಕೆಜಿಗೆ ರೂ.45 ರಿಂದ 48 ಹೆಚ್ಚಳ ಮಾಡಲಾಗಿದೆ.