ಕೆಲಸ ಮಾಡದೆ ಕಾಂಗ್ರೆಸ್‍ಗೆ ಬರುತ್ತೇನೆಂದು ಸುಳ್ಳು ಹೇಳಿಕೊಂಡು ತಿರುಗುತ್ತಿರುವ ಗುಬ್ಬಿ ಶಾಸಕರು- ಜಿ.ಎಸ್. ಪ್ರಸನ್ನಕುಮಾರ್


ಗುಬ್ಬಿ(ಬಿದರೆ) : ಸತತ ನಾಲ್ಕು ಬಾರಿ ಗೆದಿರುವ ಶಾಸಕರು ತಾಲ್ಲೂಕಿನಲ್ಲಿ ಯಾವುದೇ ಕೆಲಸ ಮಾಡದೇ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಸಾಕಷ್ಟು ಗ್ರಾಮಗಳಲ್ಲಿ ರಸ್ತೆಯಿಲ್ಲ. ಚರಂಡಿಗಳು ಇಲ್ಲ ಅಭಿವೃದ್ಧಿ ಮರಿಚೀಕೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಜಿ.ಎಸ್. ಪ್ರಸನ್ನಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಅವರು ಚೇಳೂರು ಹೋಬಳಿಯ ಬಿದರೆ ಗ್ರಾಮ ಪಂಚಾಯಿತಿಯಲ್ಲಿ ಸೋಮಪಾರ ಹಮ್ಮಿಕೊಂಡಿದ್ದ ಸಮಚಿತ್ರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.


ತಾಲೂಕಿನಲ್ಲಿ ಸಾಕಷ್ಟು ರಸ್ತೆಗಳು ಇಲ್ಲದಿದಿರುವುದು ಜನರಿಗೆ ಎಷ್ಟೊಂದು ತೊಂದರೆ ಎಂಬುದು ನಿಮಗೆ ಗೊತ್ತಿದೆ. ತಾಲ್ಲೂಕಿನ ಮತದಾರರು ಬುದ್ಧಿವಂತರಾಗಿದ್ದು ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲುವಿಗೆ ಶ್ರಮಿಸಬೇಕು ಎಂದ ಅವರು, ಜೆಡಿಎಸ್ ಪಕ್ಷದಿಂದ ಶ್ರೀನಿವಾಸ್ ಅವರನ್ನು ಹೊರ ಹಾಕಿರುವುದು ಎಲ್ಲರಿಗೋ ಗೊತ್ತಿದೆ, ಕುಮಾರಸ್ವಾಮಿಯವರಿಗೆ ಮಾಡಿರುವ ದ್ರೋಹದಿಂದ ಕುಮಾರಣ್ಣ ಅವರು ಶ್ರೀನಿವಾಸ್ ಅವರನ್ನು ಉಚ್ಚಾಟನೆ ಮಾಡಿದ್ದಾರೆ.ಬೇರೆ ಉದ್ದೇಶವಿಲ್ಲ ಶಾಸಕರೇ ಸುಳ್ಳು ಹೇಳಿಕೊಂಡು ಕುಮಾರಣ್ಣ ಅವರೇ ನಮ್ಮನ್ನ ಬೇಕು ಅಂತಾನೇ ಉಚ್ಚಾಟನೆ ಮಾಡಿದ್ದಾರೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದ ಅವರು, ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಗುಬ್ಬಿಯಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ತಿಳಿಸಿದರು.

ಉದ್ಘಾಟನೆ ಮಾಡಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಮುಂಬರುವ ಚುನಾವಣೆಯಲ್ಲಿ ಮತದಾರರ ಒಲವು ಕಾಂಗ್ರೆಸ್ ಪಕ್ಷದ ಪರವಾಗಿ ಇರುವುದರಿಂದ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಮುಂದಾಗಿದ್ದು ನಮ್ಮಿಂದ ಅವರು ಬರುವುದಕ್ಕೆ ಸಂಪೂರ್ಣ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.

ಶಾಸಕ ಎಸ್ ಆರ್ ಶ್ರೀನಿವಾಸ್ ಕಾಂಗ್ರೆಸ್‍ಗೆ ಬಂದ್ರೂ ನಾವು ಯಾರು ಕೂಡ ನಮ್ಮ ಪಕ್ಷಕ್ಕೆ ಸೇರಿಸಿಕೊಳಲು ತಯಾರಿಲ್ಲ ಗುಬ್ಬಿಯಲ್ಲಿ ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ತ ಕಟ್ಟಿ ಹಗಲು ಇರುಳು ಪಕ್ಷಕ್ಕೆ ಸೇವೆ ಮಾಡಿದ್ದೇವೆ, ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳು ಇದ್ದಾರೆÉ ಶಾಸಕರು ಬರುವ ಅಗತ್ಯವಿಲ್ಲ, ಈಗಾಗಲೇ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ ನಮ್ಮಲ್ಲಿ ಯಾರೇ ಅಭ್ಯರ್ಥಿಗಳು ಆದರೂ ಸಹ ಕಾಂಗ್ರೆಸ್ ಗೆಲುವು ಪ್ರಾಮಾಣಿಕವಾಗಿ ಕೆಲಸ ಮಾಡಿ ಈ ಭಾರಿ ಗುಬ್ಬಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರಾದ ಸಲೀಂ ಅಹಮದ್, ಚಾಕಯ್ಯ, ನರಸಿಂಹಯ್ಯ, ಜಯಣ್ಣ ,ಕಿರಣ್ ಎ. ಪುಟ್ಟಯ್ಯ ಗಂಗಣ್ಣ, ಶಿವಾನಂದ್ ,ಶಾರದಮ್ಮ ,ಸೌಭಾಗ್ಯಮ್ಮ.ಡಿ, ಗಂಗಾಧರ, ಬಸವರಾಜು ಇತರರಿದ್ದರು.

Leave a Reply

Your email address will not be published. Required fields are marked *