ಹೀಗೊಂದು ಗಪದ್ಯ
ಮಮತಾಮಯಿಗಳು ….
ಕೆಲವು ವೇಳೆ ಯೋಚಿಸುತ್ತೇನೆ
ಈ ಸ್ತ್ರೀಯರು ನಿಜಕ್ಕೂ ಸೃಜನಶೀಲರು
ಕ್ರಿಯಾಶೀಲರು ಉತ್ಸಾಹಿಗಳು
ಒಂದು ಮನೆ ನಿಭಾವಣೆ ಅಂದ್ರೆ ಹುಡುಗಾಟವಲ್ಲ ಅದೊಂದು ಜೀವನದ ಹುಡುಕಾಟ
ಗಂಡ ಮನೆ ಮಕ್ಕಳು ಬಂಧುಬಳಗ
ಹೀಗೆ ನೂರಾರು ಖುಷಿಗಳು ರಗಳೆಗಳು
ಮನೆಯಲ್ಲಿ ಊಟ ತಿಂಡಿ ತಿನಿಸುಗಳು
ಪ್ರತಿದಿನ ಒಂದೊಂದು ಮಾದರಿ
ರೂಪಿಸುವುದೇ ಒಂದು ಅಚ್ಚರಿ
ಬೆಳಿಗ್ಗೆ ತಿಂಡಿ ಮಧ್ಯಾಹ್ನ ಹಾಗು ರಾತ್ರಿ ಊಟ
ಈ ಮಧ್ಯೆ ಕುರುಕಲು
ಇವೆಲ್ಲವನ್ನೂ ನಿರ್ವಹಿಸುವುದೇ
ಒಂದು ಕಲೆ ಮತ್ತು ಸೃಜನಶೀಲತೆ
ಮನೆಯಲ್ಲಿ ಒಂದು ದಿನ ಹೆಂಡತಿಯಿಲ್ಲ
ಅಂದ್ರೆ ..ಹೇ ಬಿಡು ನಾವು ಆರಾಮಾಗಿರಬಹುದು
ಎನ್ನಬಹುದು …ಆದರೆ..
ಮನೆಯ ನಿಭಾವಣೆ ನಿರ್ವಹಣೆ
ಗಂಡಸಿಗೆ ಸಾಧ್ಯವೇ….
ಈ ಹೆಣ್ಣು ಮಕ್ಕಳು ನಿಜಕ್ಕೂ
ಮಹಾಕಾಳಿಗಳು ಉಗ್ರಪ್ರತಾಪಿಗಳು
ಮಮತಾಮಯಿಗಳು….
ರವೀಶ್.ಎನ್.ಎ.