ತುಮಕೂರು : 2018ರಲ್ಲಿ ನಡೆದ ತುಮಕೂರು ಗ್ರಾಮಾಂತರ ವಿಧಾನ ಸಭಾ ಚುನಾವಣೆಯಲ್ಲಿ ನಕಲಿ ಬಾಂಡ್ ಹೆಸರಲ್ಲಿ ಚುನಾವಣಾ ಅಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ ಮತ್ತು 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲಬಾರದು ಎಂದು ಅನರ್ಹ ಗೊಳಿಸಿದೆ ಎಂದು ಹೈಕೋರ್ಟಿನ ಏಕ ಸದಸ್ಯ ಪೀಠ ನೀಡಿರುವ ತೀರ್ಪಿನ ಆದೇಶದಲ್ಲಿ ಉಲ್ಲೇಖವಿಲ್ಲ್ಲ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.
ಕೋರ್ಟಿನ ತೀರ್ಪು ಏನು ಹೇಳುತ್ತದೆ :
ಆದೇಶ :
a)ತುಮಕೂರು ಗ್ರಾಮಾಂತರ ಕ್ಷೇತ್ರ-ಸಂಖ್ಯೆ133ಕ್ಕೆ ಅರ್ಜಿ ದಿನಾಂಕ : 15-05-2018 ರ ನಮೂನೆ-ಸಿ ರಿತ್ಯ ವಿಧಾನಸಭಾ ಸದಸ್ಯರಾಗಿ ಚುನಾಯಿತ ಅಭ್ಯರ್ಥಿಯಾಗಿದ್ದ ಶ್ರೀ ಡಿ.ಸಿ. ಗೌರಿಶಂಕರ್ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿದೆ.
b) ಈ ಕೆಳಕಂಡ ಹೆಸರಿನ ವ್ಯಕ್ತಿಗಳಾದ ಶ್ರೀ ಪಾಲನೇತ್ರಯ್ಯ ಜಿ.ಜಿ. ಅರೇಹಳ್ಳಿ, ಮಂಜುನಾಥ, ಶ್ರೀ ಕೃಷ್ಣೇಗೌಡ, ಶ್ರೀಮತಿ ರೇಣುಕಮ್ಮ ಮತ್ತು ಶ್ರೀಮತಿ ಸುನಂದ ಇವರುಗಳನ್ನು ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್99(1)(a)((II) ಪ್ರಕಾರ ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿರುತ್ತಾರೆ. ಎಂದು ನ್ಯಾಯಧೀಶರು ತೀರ್ಪು ನೀಡಿದ್ದಾರೆ.
ಇಲ್ಲಿ ಚುನಾವಣೆಗೆ ನಿಲ್ಲ ಬಾರದು ಎಂಬ ಉಲ್ಲೇಖವೇ ಇಲ್ಲ, ಈ ಆದೇಶದ ಮೇಲೆ ಅನರ್ಹತೆ ಆದೇಶವನ್ನು ಸ್ಪೀಕರ್ ಮಾಡಬೇಕು, ಒಂದು ವೇಳೆ ಸುಪ್ರೀಂ ಕೋರ್ಟ್‍ನಲ್ಲಿ ತಡೆಯಾಜ್ಞೆಯಾದರೆ ಅನರ್ಹತೆ ಮಾಡಲು ಬರುವುದಿಲ್ಲ. ತಡೆಯಾಜ್ಞೆ ಸಿಗದೇ ಇದ್ದ ಪಕ್ಷದಲ್ಲಿ ಜನ ಪ್ರತಿನಿಧಿ ಕಾಯ್ದೆಯಂತೆ ಅನರ್ಹತೆ ಮುನ್ನಲೆಗೆ ಬಂದು, ಸ್ಪೀಕರ್ ತೀರ್ಮಾನದಂತೆ ಅನರ್ಹತೆ ವಿಷಯ ನಿಂತಿದೆ.
ಈಗಾಗಲೇ 2018 ಶಾಸಕರ ಅವಧಿ ಮುಗಿದು ಹೋಗಿದ್ದು, ಮುಂದೆ ಈ ಕೇಸ್ ಯಾವ ರೀತಿಯ ತಿರುವ ಪಡೆಯಲಿದೆ ಎಂಬುದು ಸುಪ್ರೀಂ ಕೋರ್ಟ್ ಅಂಗಳದಲ್ಲಿ ಚೆಂಡಿದೆ.

ಅವರಿಂದು ತಮ್ಮ ಬಳ್ಳಗೆರೆಯ ನಿವಾಸದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ನನ್ನ ಶಾಸಕ ಸ್ಥಾನವನ್ನು ಅಸಿಂಧು ಗೊಳಿಸಿದೆಯೇ ಹೊರತು, ಅನರ್ಹಗೊಳಿಸಿಲ್ಲ, ಇದನ್ನು ಅರ್ಥ ಮಾಡಿಕೊಳ್ಳದ ಮಾಜಿ ಶಾಸಕರು ತೀರ್ಪಿನ ಪ್ರತಿಯೇ ಇಲ್ಲದೆ ಮಾಧ್ಯಮಗಳಿಗೆ ತಪ್ಪುಮಾಹಿತಿಯನ್ನು ಭಿತ್ತರಿಸುವುದು ಸೂಕ್ತ ವಲ್ಲ, ಹೈಕೋರ್ಟಿನ ತೀರ್ಪು ಭಾಗಶಃ ತೀರ್ಪಾಗಿದ್ದು, ಮಾಜಿ ಶಾಸಕರೊಬ್ಬರು ಹೇಳಿರುವಂತೆ ಈ ತೀರ್ಪು ಧರ್ಮ, ಅಧರ್ಮದ ತೀರ್ಪಲ್ಲ, ನಕಲಿ ಅಂಕಪಟ್ಟಿ ಹಗರಣ ರುವಾರಿ, ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ ಬಿದ್ದು ತಪೆÇ್ಪಪ್ಪಿಗೆ ಯಾರು ಬರೆದು ಕೊಟ್ಟಿರುವುದು ಜಗತ್ತಿಗೆ ಗೊತ್ತಿದೆ ಎಂದರು.
ಮಾಜಿ ಶಾಸಕರು ನ್ಯಾಯಾಲಯದ ತೀರ್ಪಿನ ಪ್ರತಿಯೇ ಇಲ್ಲದೆ ಪತ್ರಿಕಾ ಹೇಳಿಕೆ ನೀಡಿರುವುದು ಅವರ ಬಾಲಿಶತನ ತೋರಿಸುತ್ತದೆ, 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲಬಾರದು ಎಂದು ತೀರ್ಪಿನಲ್ಲದೆ ಎಂದು ಅರ್ಜಿದಾರರು ಮಾಡಿರುವ ಆರೋಪ ಸುಳ್ಳು ಎಂದ ಗೌರಿಶಂಕರ್ ಅವರು, ಬಾಂಡ್ ಹಂಚಿದ ಕಂಪನಿಗೂ ನನಗೂ ಸಂಬಂಧವೇ ಇಲ್ಲ, ನಕಲಿ ಬಾಂಡ್ ಹಂಚಿಕೆಯಲ್ಲಿ ಮಂಜುನಾಥ ಎಂಬುವವನು ಭಾಗಿಯಾಗಿದ್ದಾನೆ ಎಂದು ಹೇಳಿದ್ದಾರೆ, ಇದುವರೆವಿಗೂ ಮಂಜುನಾಥ ಯಾರೆಂದು ಮುಖ ಸಹ ನೋಡಿಲ್ಲ, ಸಂಪರ್ಕವೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹೈಕೋರ್ಟ್ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು, ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಕೇಸನ್ನು ನಡೆಸಲು ನಮ್ಮ ಪಕ್ಷದ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿಯವರೆ ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಮಾಧ್ಯಮಗಳು, ಕಾರ್ಯಕರ್ತರುಗಳು ಆತಂಕ ಪಡಬೇಕಿಲ್ಲ, ನಾನೂ ಒಬ್ಬ ಪ್ರಜೆ ನ್ಯಾಯಕ್ಕೆ ತಲೆ ಭಾಗಬೇಕು, ನಾನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ರಾಜಕಾರಣಿಯಾಗಿ ಕೆಲಸ ಮಾಡಿಲ್ಲ, ಮನೆ ಮಗನಾಗಿ ಕೆಲಸ ಮಾಡಿದ್ದೇನೆ, ಮಾಜಿ ಶಾಸಕರು ಧರ್ಮ ಗೆದ್ದು ಬಿಡ್ತು, ಅಧರ್ಮ ಸೋತು ಬಿಡ್ತು ಎಂದಿದ್ದಾರೆ, ಅವರು ಆತ್ಮ ಸಾಕ್ಷಿ ಇಟ್ಟುಕೊಂಡು ಮಾತನಾಡಲಿ ಎಂದು ಚುಚ್ಚಿದರು.
ಹೈ ಕೋರ್ಟ್ ಪೂರ್ಣ ಪ್ರಮಾಣದ ತೀರ್ಪು ನೀಡಿರುವುದಿಲ್ಲ, ಭಾಗಶಃ ತೀರ್ಪಾಗಿದೆ, ಅರ್ಜಿದಾರರು ತೀರ್ಪಿನ ಬಗ್ಗೆ ಅವರ ವಕೀಲರಿಂದ ಸರಿಯಾದ ಮಾಹಿತಿ ಪಡೆದುಕೊಂಡು ತಿಳಿದುಕೊಳ್ಳಲಿ ಎಂದು ತಾಕೀತು ಮಾಡಿದರು.
ಮಾಜಿ ಶಾಸಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಗಾಳಿಯಲ್ಲಿ ಗುಂಡು ಹೊಡೆಯ ಬಾರದು, ನೀವು ಹತ್ತು ವರ್ಷ ಶಾಸಕರಾಗಿದ್ದಿರಿ, ಯಾರೂ ಕೆಲಸ ಮಾಡಲು ಅಡ್ಡಿ ಪಡಿಸಲಿಲ್ಲ, ನಮ್ಮ ಸರ್ಕಾರ ಬಿದ್ದ ಕೂಡಲೇ ಕ್ಷೇತ್ರ ಕ್ಕೆ ಬಂದಿದ್ದ ಅನುದಾನ ನೀಡದಂತೆ ಮುಖ್ಯ ಮಂತ್ರಿ, ಮಂತ್ರಿಗಳ ಬಳಿ ಅಂಗಲಾಜಿ ಅನುದಾನ ರದ್ದು ಪಡಿಸಲು ಮುಂದಾದವರು ಯಾರು, ನಾನು ಶಾಸಕ ಆದ ಕೂಡಲೇ ನಮ್ಮ ಕಾರ್ಯಕರ್ತರ ಮೇಲೆ ಗೂಂಡಗಿರಿ, ದಬ್ಬಾಳಿಕೆ, ದೌರ್ಜನ್ಯ ಮಾಡಿದ್ದು ನಿಮಗೆ ಘನತೆ ತರುವುದಿಲ್ಲ ಎಂದರು.
ನೀವೊಬ್ಬರೆ ಶಾಸಕರಾಗಿರಬೇಕೇ, ಬೇರೆಯವರು ಶಾಸಕರಾಗಿ ಅಭಿವೃದ್ಧಿ ಮಾಡಬಾರದೆ ಎಂದು ಪ್ರಶ್ನಿಸಿದರು.
ಅಂಕಪಟ್ಟಿಗಳನ್ನೇ ನಕಲಿ ಮಾಡಿದವರು, ಬಾಂಡ್‍ಗಳನ್ನು ನನ್ನ ಹೆಸರಿನಲ್ಲಿ ನಕಲಿ ಬಾಂಡ್ ಮುದ್ರಿಸಿ ನನ್ನ ಮೇಲೆ ಹಾಕಿದ್ದರೂ ಹಾಕಿರಬಹುದು ಎಂದು ಪ್ರತ್ರಕರ್ತ ಪ್ರಶ್ನೆಗೆ ಉತ್ತರಿಸಿದ ಅವರು,ಗ್ರಾಮಾಂತರ ಕ್ಷೇತ್ರ ರಾಮ ರಾಜ್ಯವಾಗಿರಬೇಕು ಎಂದು ಬಯಸುವವನು ನಾನು ಎಂದರು.
ಹೈಕೋರ್ಟ್ ತೀರ್ಪು ಬರುವ ಹಿಂದಿನ ರಾತ್ರಿ ವ್ಯಕ್ತಿ ಯೊಬ್ಬರು ಕರೆ ಮಾಡಿ ನಾಳೆ ನಿಮ್ಮ ಶಾಸಕ ಸ್ಥಾನ ಅಸಿಂಧು ಆಗುವ ತೀರ್ಪು ಬಂದರೂ ಬರಬಹುದು ಎಂದು ತಿಳಿಸಿದರು,ಒಬ್ಬ ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿಯನ್ನೆ ಬಿಟ್ಟಿಲ್ಲ, ನನ್ನಂತಹ ಸಾಮಾನ್ಯ ಶಾಸಕನನ್ನು ಬಿಡುತ್ತಾರೆಯೇ ಇವರು ಎಂದು ವ್ಯಂಗ್ಯವಾಡಿ ಅವರು, ಮಾಜಿ ಶಾಸಕರ ಮೇಲೆ ಲೋಕಾಯುಕ್ತದಲ್ಲಿ 420 ಕೇಸಿದೆ, ನಮ್ಮ ಮೇಲೆ ಆ ತರಹದ ಯಾವ ಕೇಸುಗಳಿಲ್ಲ ಎಂದ ಅವರು, ಬಾಂಡ್ ಹಂಚಿಕೆಗೂ, ನನಗೂ ಸಂಬಂಧವಿಲ್ಲ ಎಂದರು.
ನಾನು ಚುನಾವಣೆಗೆ ನಿಲ್ಲಬಾರದು ಎಂದು ನ್ಯಾಯಾಲಯದ ಆದೇಶದಲ್ಲಿ ಎಲ್ಲೂ ಹೇಳಿಲ್ಲ, ಅದ್ದರಿಂದ ಯಾರೂ ದೇವೇಗೌಡರ ಕುಟುಂಬದವರು ನಿಲ್ಲುತ್ತಾರೆ, ನನ್ನ ಕುಟುಂಬದವರು ನಿಲ್ಲುತ್ತಾರೆ ಎಂಬುದು ಊಹಪೆÇೀಹವμÉ್ಟ, ನಾನೇ ಗ್ರಾಮಾಂತರಕ್ಕೆ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದರು.
ಮಾಜಿ ಶಾಸಕರು ಗೆದ್ದೆ ಎಂಬುದು ತಿರುಕನ ಕನಸ್ಸು, ವಾಮಮಾರ್ಗದಲ್ಲಿ ಇಲ್ಲಸಲ್ಲದ ಕೆಲಸ ಮಾಡಿದರೆ ಗೆಲ್ಲುವುದು ಅಷ್ಟು ಸುಲಭವಲ್ಲ ಎಂದರು. ನಾನು ಜನರಿಗೋಸ್ಕರ ಬದುಕಿದ್ದೇನೆ, ನನ್ನ ಮನೆಗೆ ಜನ ಬಾರದ ದಿನ ನನ್ನ ಸಾವು ಖಚಿತ ಎಂದರು.
ಸುದ್ದಿಗೋಷ್ಟಿಯಲ್ಲಿ ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಸುದ್ದಿಗೋಷ್ಟಿಯಲ್ಲಿ ರಾಜ್ಯ ವಕ್ತಾರರಾದ ಡಾ.ಹಾಲನೂರು ಲೇಪಾಕ್ಷ, ಬೆಳಗುಂಬ ವೆಂಕಟೇಶ್, ಹಾಲನೂರು ಅನಂತ್, ನಾಗವಲ್ಲಿ ದೀಪಕ್ ಮತ್ತಿತರು ಉಪಸ್ಥಿತರಿದ್ದರು.
-ವೆಂಕಟಾಚಲ.ಹೆಚ್.ವಿ.