ತುಮಕೂರು : ತೀವ್ರ ಪೈಪೋಟಿ, ಕುತೂಹಲ ಮೂಡಿಸಿದ್ದ ತುಮಕೂರು ಬಿಜೆಪಿ ಅಭ್ಯರ್ಥಿ ಯಾರಾಗುವರು ಎಂಬುದಕ್ಕೆ ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರಿಗೆ ನೀಡುವ ಮೂಲಕ ತೆರೆ ಎಖೆಯಲಾಗೆದೆ, ಸೊಗಡು ಶಿವಣ್ಣನವರಿಗೆ ಹೈಕಮಾಂಡ್ ಅರ್ಧ ಚಂದ್ರ ತೋರಿಸಿದೆ.
ಇದರಿಂದ ತುಮಕೂರು ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಂಡಾಯ ತಾರಕಕ್ಕೇರುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತಾ ಇವೆ.
ಗುಬ್ಬಿ ಕ್ಷೇತ್ರದಲ್ಲಿ ಹೊಸ ಮುಖ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಶ್ರೀ ಮತಿ ನವ್ಯಾಬಾಬು ಅವರಿಗೆ ಟಿಕೆಟ್ ನೀಡಿ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆಯಲಾಗಿದೆ.
ತೀವ್ರ ಪೈಪೋಟಿಯ ನಡುವೆಯು ಕುಣಿಗಲ್ ನಿಂದ ಡಿ.ಕೃಷ್ಣಕುಮಾರ್ ಟಿಕೆಟ್ ಪಡೆದಿದ್ದಾರೆ. ಮೂರು ಬಾರಿ ಸೋತಿರುವ ಕೃಷ್ಣಕುಮಾರ್ ಈ ಬಾರಿ ಅನುಕಂಪದ ಮೇಲೆ ಗೆಲ್ಲಬಹುದು ಎಂಬ ಲೆಕ್ಕಾಚಾರ ವಿರಬಹುದು, ಟಿಕೆಟ್ ಬಯಸಿ ಕಾಂಗ್ರೆಸ್ ನಿಂದ ಬಿಜೆಪಿ ಗೆ ಬಂದಿದ್ದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ನೀಡದಿರುವುದು, ಅವರಿಗೆ ತೀವ್ರ ನಿರಾಸೆ ಉಂಟಾಗಿದೆ.
ಮುದ್ದಹನುಮೇಗೌಡರ ಸಾಪ್ಟ್ ಕಾರ್ನಾರ್ ಸ್ವಭಾವ ಅವರಿಗೆ ಮುಳುವಾಯಿತೆ ಎಂಬ ಚರ್ಚೆ ಗೆ ಗ್ರಾಸವಾಗಿದೆ.
ಇನ್ನುಳಿದಂತೆ ತುರುವೇಕೆರೆ ಮಸಾಲೆ ಜಯರಾಮ್, ಚಿಕ್ಕನಾಯಕನಹಳ್ಳಿ ಜೆ.ಸಿ.ಮಾಧುಸ್ವಾಮಿ, ತಿಪಟೂರು ಬಿ.ಸಿ.ನಾಗೇಶ್, ತುಮಕೂರು ಗ್ರಾಮಾಂತರ ಬಿ.ಸುರೇಶ್ ಗೌಡ, ಕೊರಟಗೆರೆ ಅನಿಲ್ ಕುಮಾರ್, ಮಧುಗಿರಿ ಎಲ್.ಸಿ.ನಾಗರಾಜು, ಪಾವಗಡ ಜನಾರ್ಧನಸ್ವಾಮಿ, ಶಿರಾ ಹಾಲಿ ಶಾಸಕ ರಾಜೇಶ್ ಗೌಡ, ಅವರುಗಳಿಗೆ ಟಿಕೆಟ್ ನೀಡಲಾಗಿದೆ.
ಮಾಜಿ ಸಚಿವ ಸೊಗಡು ಶಿವಣ್ಣನವರು ಈ ಬಾರಿ ನನಗೆ ಟಿಕೆಟ್ ದೊರೆಯುತ್ತದೆ, ಪಕ್ಷವನ್ನು ಕಟ್ಟಿ ಬೆಳೆಸಿದ ಪ್ರಮುಖನಾಗಿದ್ದು, ಆರ್.ಎಸ್.ಎಸ್.ನನ್ನ ಬೆಂಬಲಕ್ಕೆ ನಿಲ್ಲಲಿದೆ ಎಂಬುದು ಹುಸಿಯಾಗಿದೆ.
ಈಗಾಗಲೇ ಸೊಗಡು ಶಿವಣ್ಣನವರು ಜೋಳಿಗೆ ಹಿಡಿದು ಪ್ರಚಾರ ಆರಂಭಿಸಿದ್ದು, ಬಿಜೆಪಿಯ ಬಂಡಾಯ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ಅವರು ಹೇಳಿಕೊಂಡಿದ್ದಾರೆ, ಅವರ ಅಭಿಮಾನಿಗಳು ಹೇಳಿದ್ದಾರೆ.