
ತುಮಕೂರು : ಶಿರಾದಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಣ್ಣ ಇಂದು ಹೃದಯಾಘಾತ ದಿಂದ ನಿಧನ ಹೊಂದಿದ್ದಾರೆ.
ಮೃತ ಗಂಗಣ್ಣನವರು 93ನೇ ಇಸವಿ ಬ್ಯಾಚಿನವರಾಗಿದ್ದು, ಶಿರಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಣ್ಣ, ಈ ದಿನ ಹೃದಯಘಾತವಾದ ಕೂಡಲೇ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.
ಮೃತರು ಜನಪನಹಳ್ಳಿಯವರಾಗಿದ್ದು, ಎರಡು ಹೆಣ್ಣು, ಒಂದು ಮಕ್ಕಳಿದ್ದಾರೆ.
ಎಸ್.ಪಿ.ಸಂತಾಪ : ತಮ್ಮ ಇಲಾಖೆಯ ಸಿಬ್ಬಂದಿ ಗಂಗಣ್ಣ ಹೃದಯಾಘಾತದಿಂದ ನಿಧನವಾಗಿರುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿಗಳಾದ ರಾಹುಲ್ ಕುಮಾರ್ ಶಹಪೂರ್ ವಾಡ್, ಹೆಚ್ಚುವರಿ ಎಸ್.ಪಿ. ಮರಿಯಪ್ಪ ಅವರುಗಳು ತೀವ್ರ ಸಂತಾಪ ಸೂಚಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿ, ಮೃತರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.