ತುಮಕೂರು: ಅಟ್ಟಿಕಾ ಬಾಬು ತುಮಕೂರು ನಗರದಿಂದ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಯಲು ಷಫಿ ಅಹ್ಮದ್ ಜೊತೆ ಚರ್ಚಿಸಿ ಆಶಿರ್ವಾದ ಪಡೆದಿದ್ದೇನೆ ಎಂದು ನಿನ್ನೆ ಹೇಳಿಕೆ ನೀಡಿರುವುದು ಶುದ್ದ ಸುಳ್ಳು. ಈ ರೀತಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುವುದು ಅಟ್ಟಿಕಾ ಬಾಬುಗೆ ಶೋಭೆ ತರುವುದಿಲ್ಲ ಎಂದು ಮಾಜಿ ಶಾಸಕ ಡಾ. ಷಫಿ ಅಹ್ಮದ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಜೆ.ಡಿ.ಎಸ್ ಪಕ್ಷದಿಂದ ಕಳಕ್ಕಿಯುವ ಇಂಗಿತ ವ್ಯಕ್ತಪಡಿಸಿರುವ ಅಟ್ಟಿಕಾ ಬಾಬು ನನ್ನ ಆಶೀರ್ವಾದವಿದೆ ಎಂದು ತಿಳಿಸಿದ್ದು, ಈ ಮಾತು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತೇನೆ. ಜೆಡಿಎಸ್ ಪಕ್ಷಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಮ್ಮ ಕುಟುಂಬದವರೇ ಆದ ಡಾ. ರಫೀಕ್ ಅಹ್ಮದ್ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿದ್ದು, ಈ ಹಿಂದೆ ಶಾಸಕರಾಗಿ ತುಮಕೂರು ನಗರವನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಿದ್ದಾರೆ. ಡಾ. ರಫೀಕ್ ಅಹ್ಮದ್ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಆಗಿರುವಾಗ, ಅಟ್ಟಿಕಾ ಬಾಬುಗೆ ನಾನು ಆಶೀರ್ವಾದ ಮಾಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಮಾಜಿ ಶಾಸಕ ಡಾ. ಷಫಿ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.