ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ತುಮಕೂರು ನಗರದಲ್ಲಿ ಸ್ಪರ್ಧೆ ಬಯಸಿದ್ದು, ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹೀಂ ಆಶ್ವಾಸನೆ ನೀಡಿದ್ದಾರೆ ಎಂದು ತುಮಕೂರು ನಗರ ವಿಧಾನಸಭಾ ಜೆಡಿಎಸ್ ಪ್ರಭಲ ಆಕಾಂಕ್ಷಿ ಬೊಮ್ಮನಹಳ್ಳಿ ಬಾಬು (ಅಟ್ಟಿಕಾ ಬಾಬು) ಸ್ಪಷ್ಟಪಡಿಸಿದರು.
ನಗರದಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರದಲ್ಲಿ ಸ್ಪರ್ಧೆ ಕುರಿತಂತೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಜೊತೆ ಚರ್ಚೆ ನಡೆಸಿದ್ದು, ಟಿಕೇಟ್ ನೀಡುವ ಭರವಸೆ ನೀಡಿ ತುಮಕೂರು ನಗರದಲ್ಲಿ ಪಕ್ಷ ಸಂಘಟಿಸಲು ಸೂಚಿಸಿದ್ದಾರೆ ಎಂದರು.
ತುಮಕೂರು ನಗರದಲ್ಲಿ ಜೆಡಿಎಸ್‍ನ ಎಲ್ಲಾ ಮುಖಂಡರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಸಲಾ ಗುವುದು ಎಂದರು.
ತುಮಕೂರನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮನಹಳ್ಳಿ ಬಾಬು, ಈಗಾಗಲೇ ರಾಜ್ಯದಲ್ಲಿ ಕೊರೋನ ಸಂದರ್ಭದಲ್ಲಿ ಮತ್ತು ಪ್ರವಾಹ ಸಂದರ್ಭದಲ್ಲಿ ಕೋಟ್ಯಾಂತರ ರೂ.ಗಳನ್ನು ಬಡವರಿಗೆ ಹಂಚಿದ್ದೇನೆ. ಕೊರೋ ನ ಸಂದರ್ಭದಲ್ಲಿ ಸುಮಾರು 4 ಕೋಟಿ ಆಹಾರದ ಕಿಟ್‍ಗಳನ್ನು ಹಂಚಿದ್ದೇನೆ. ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ಸೇವೆ ಸಲ್ಲಿಸುತ್ತೇನೆ. ನನ್ನ ಸೇವೆಯನ್ನು ತುಮಕೂರು ನಗರಕ್ಕೂ ಕೂಡ ವಿಸ್ತರಿಸಬೇಕೆಂದು ಇಚ್ಚೆಪಟ್ಟಿದ್ದೇನೆ. ಸಣ್ಣ ಉದ್ಯಮವನ್ನು ಸ್ಥಾಪಿಸಿ ಇಡೀ ದೇಶ ತಿರುಗಿನೋಡುವಂತೆ ಮಾಡಿದ್ದೇನೆ. ನನಗೆ ಹಣ ಮಾಡುವ ಅವಶ್ಯಕತೆ ಇಲ್ಲ, ನಿರುದ್ಯೋಗಿಗಳಿಗೆ ಅನೇಕ ಯೋಜನೆಗಳನ್ನು ಹಾಕಿಕೊಂಡು ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗುವುದರ ಜೊತೆಗೆ ಬಡವರಿಗೆ ತಲುಪಬೇಕಾದ ಸವಲತ್ತುಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸು ವುದಾಗಿ ತಿಳಿಸಿದರು.
ತುಮಕೂರು ನಗರದಲ್ಲಿ ಮನೆ ಮತ್ತು ಕಚೇರಿ ಆರಂಭಿಸಿ ಪಕ್ಷದ ಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು ಎಂದ ಅವರು, ನಗರದ 35 ವಾರ್ಡುಗಳಲ್ಲೂ ಸಂಚರಿಸಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋ ನ್ಮುಖನಾಗುವುದಾಗಿ ತಿಳಿಸಿದರು.
ನಾನು ಕೇವಲ ಜಿಲ್ಲೆಗೆ ಮಾತ್ರವಲ್ಲದೆ ಇಡೀ ರಾಜ್ಯದ ಜನತೆಗೆ ನನ್ನ ಸೇವೆ ಏನೆಂಬುದು ತಿಳಿದಿದೆ. ಆದರೆ ತುಮಕೂರಿ ನಿಂದಲೇ ಸ್ಪರ್ಧೆಬಯಸಿರುವುದರ ಹಿಂದೆ ಬೆಂಗಳೂರಿಗೆ ಹತ್ತಿರವಿದೆ ಎಂಬ ಒಂದೇ ಕಾರಣಕ್ಕಾಗಿ. ಜೊತೆಗೆ ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್ ಅವರ ಬೆಂಬ ಲವೂ ಸಹ ನನಗಿದೆ ಎಂದು ಹೇಳಿದರು.
ತುಮಕೂರು ನಗರದಲ್ಲಿ ಮಾಜಿ ಶಾಸಕರಾದ ಎಸ್.ಷಫಿಅಹಮದ್ ಅವರನ್ನು ಭೇಟಿ ಮಾಡಿ ನನಗೆ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದೇನೆ. ಅವರೂ ಸಹ ಬೆಂಬಲಿಸುವ ಭರವಸೆಯನ್ನು ನೀಡಿದ್ದಾರೆ ಎಂದರು.