ಆಹಾರ ಧಾನ್ಯಗಳನ್ನು ರೈತರಿಂದ ನೇರವಾಗಿ ಖರೀದಿಸಿ-ಎಸ್.ಪಿ.ಚಿದಾ ನಂದ್

ತುಮಕೂರು:ಕಳೆದ ಮೂರ್ನಾಲ್ಕು ದಶಕಗಳಲ್ಲಿಯೇ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬಹುದೊಡ್ಡ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಕರುನಾಡ ವಿಜಯಸೇನೆ ಆಯೋಜಿಸಿರುವ ಕರುನಾಡ ಸಾಂಸ್ಕøತಿಕ ಹಬ್ಬವೂ ಒಂದಾಗಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.

ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕರುನಾಡ ವಿಜಯಸೇನೆವತಿಯಿಂದ ಆಯೋಜಿಸಿದ್ದ ಸಾಂಸ್ಕøತಿಕ ಹಬ್ಬ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತಿದ್ದ ಅವರು,ನಮ್ಮ ಊರಿನವರೇ ಆದ ಹೆಚ್.ಎನ್.ದೀಪಕ್ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ, ಇಂತಹ ದೊಡ್ಡ ಸಂಘಟನೆಯನ್ನು ಕಟ್ಟಿ, ಸಾಮಾಜಿಕ ಸೇವೆಯ ಜೊತೆಗೆ,ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿದ್ದಾರೆ. ಅವರಿಗೆ ಡಾ.ಶ್ರೀಶಿವಕುಮಾರ ಸ್ವಾಮಿಜಿ ಅವರ ಆಶೀರ್ವಾದ ಜೊತೆಗೆ, ನಿಮ್ಮಗಳ ಆಶೀರ್ವಾದವು ದೊರೆಯಲಿದೆ. ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಸ್ಪೂರ್ತಿ ಡೆವಲಪರಸ್‍ನ ಎಸ್.ಪಿ.ಚಿದಾ ನಂದ್ ಮಾತನಾಡಿ,ಕನ್ನಡ ನಾಡು,ನುಡಿ,ನೆಲ,ಜಲದ ವಿಚಾರದ ಹೋರಾಟದಲ್ಲಿ ನಾವೆಲ್ಲರೂ ಕರುನಾಡ ವಿಜಯಸೇನೆ ಯೊಂದಿಗೆ ಕೈಜೋಡಿಸಬೇಕಿದೆ.ನಮ್ಮ ಹೆಮ್ಮೆಯ ಪುನಿತ್ ರಾಜ್ ಕುಮಾರ್ ನಂದಿನಿ ಹಾಲಿನ ಅಂಬಾಸಿಡರ್ ಆಗಿ, ನಮ್ಮ ರೈತರಿಗೆ ನೆರವಾದಂತೆ, ನೀವುಗಳು ತರಕಾರಿ,ಹಣ್ಣು, ಆಹಾರ ಧಾನ್ಯಗಳನ್ನು ರೈತರಿಂದ ನೇರವಾಗಿ ಖರೀದಿಸುವ ಮೂಲಕ ಅವರ ನೆರವಿಗೆ ನಾವೆಲ್ಲರೂ ಬರಬೇಕಿದೆ.ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಗೀತ,ನಾಟಕ,ಸ್ವಯಂ ರಕ್ಷಣಾ ಕಲೆಗಳನ್ನು ಕಲಿಸುವ ಮೂಲಕ ಅವರನ್ನು ಮತ್ತಷ್ಟು ಸಮಗ್ರ ವಿಕಾಸಕ್ಕೆ ತಂದೆ ತಾಯಿಗಳು ಮುಂದಾಗುವಂತೆ ಕರೆ ನೀಡಿದರು.

ಕರುನಾಡ ವಿಜಯಸೇನೆಯ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್ ಮಾತನಾಡಿ,ತುಮಕೂರಿನಿಂದ ಆರಂಭವಾದ ನನ್ನ ಹೋರಾಟ ಇಂದು ರಾಜ್ಯಾಧ್ಯಂತ ವಿಸ್ತರಿಸಿದೆ. ನನ್ನ ಜೊತೆಗೆ ನನ್ನ ಸಂಘಟನೆಯ ಪದಾಧಿಕಾರಿಗಳು ಕೈಜೋಡಿಸಿದ್ದಾರೆ. 8 ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ.ಇಡೀ ವಿಶ್ವದ ಜನತೆಗೆ ಕನ್ನಡ ನಾಡು ಆಶ್ರಯ ನೀಡಿದೆ.ಇಲ್ಲಿ ಬದುಕುವ ಎಲ್ಲರೂ ಕನ್ನಡ ಭಾಷೆಯನ್ನು ಕಲಿಯಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್.ಬಸವರಾಜು, ಮೇಯರ್ ಶ್ರೀಮತಿ ಪ್ರಭಾವತಿ ಸುಧೀಶ್ವರ್,ಮಾಜಿ ಶಾಸಕ ಡಾ.ರಫೀಕ್ ಅಹಮದ್, ಅಟಿಕ್ ಗೋಲ್ಡ್‍ನ ಬೊಮ್ಮನಹಳ್ಳಿ ಬಾಬು,ದಿಲೀಪ್ ಕುಮಾರ್, ಕರುನಾಡ ವಿಜಯಸೇನೆಯ ರಾಜ್ಯ ಮುಖ್ಯ ಸಲಹೆಗಾರರು ಡಾ.ಸುದೀಪ್,ರಾಜ್ಯ ಉಪಾಧ್ಯಕ್ಷ ಸೋಮಶೇಖರ್,ರಾಜ್ಯ ಸಂಚಾಲಕ ರಂಜನ್, ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ,ಜಿಲ್ಲಾ ಗೌರವಾಧ್ಯಕ್ಷ ಬಿ.ಬಿ.ಮಹದೇವಯ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ವೇಳೆ ಡಾ.ರವಿಕುಮಾರ್ ನೀಹ,ಪ್ರೊ.ರೇವಣ್ಣ ಸಿದ್ದಪ್ಪ,ಎಎಸ್‍ಐ ಸಿದ್ದಪ್ಪ ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *