ಬಿ.ವೈ.ವಿಜಯೇಂದ್ರರಿಂದ ತು.ಗ್ರಾಮಾಂತರದ ಬೂತ್ ವಿಜಯ ಸಂಕಲ್ಪ ಅಭಿಯಾನ ಚಾಲನೆ

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಬೂತ್ ವಿಜಯ ಸಂಕಲ್ಪ ಅಭಿಯಾನವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕ್ಷೇತ್ರದ ಬೆಳ್ಳಾವಿಯಲ್ಲಿ ಚಾಲನೆ ನೀಡಲಿದ್ದಾರೆ ಎಂದು ಮಾಜಿ ಶಾಸಕ ಬಿ.ಸುರೇಶ್‍ಗೌಡ ತಿಳಿಸಿದರು.

ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ಮತ್ತು ಕೇಂದ್ರ ಸರ್ಕಾರಗಳ ರಾಜ್ಯ ಸರ್ಕಾರಗಳ ಸಾಧನೆಯನ್ನು ತಿಳಿಸಲು ಭಾರತೀಯ ಜನತಾ ಪಕ್ಷದ ವತಿಯಿಂದ ಬೂತ್ ವಿಜಯ ಸಂಕಲ್ಪ ಅಭಿಯಾನವನ್ನು ನಡೆಸಲಾಗುತ್ತಿದ್ದು, ಅದೇ ರೀತಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲೂ ನಡೆಯಲಿದೆ ಎಂದರು.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 2.3 ಲಕ್ಷ ಮತದಾರರಿದ್ದು, 35 ಪಂಚಾಯತಿಗಳನ್ನು ಒಳಗೊಂಡಿದೆ, ಕ್ಷೇತ್ರದಲ್ಲಿ 226 ಬೂತ್‍ಗಳನ್ನು ರಚಿಸಲಾಗಿದೆ,ಪ್ರತಿ ಬೂತ್ ವಹ ಸದಸ್ಯರಿಂದ ಪಕ್ಷದ ಸದಸ್ಯತ್ವ ಮಾಡಿಸುವ ಗುರಿ ಹೊಂದಲಾಗಿದ್ದು 67,000 ನೂತನ ಸದಸ್ಯರ ಸದಸ್ಯತ್ವ ಮಾಡಿಸಲಾಗುವುದು, 10 ಕಡೆ ಗೋಡೆ ಬರಹ, ಒಂದು ಕಡೆ ಡಿಜಿಟಲ್ ವಾಲ್ ಪೈಂಟಿಂಗ್ ಮಾಡಿಸಲಾಗುವುದು ಎಂದು ತಿಳಿದಿರು.
ಜನವರಿ 23 ಹಾಗೂ 24 ರಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಗೂಳೂರು, ನಾಗವಲ್ಲಿ ಮತ್ತು ಕಣಕುಪ್ಪೆ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಪ್ರವಾಸ ಕೈಗೊಳ್ಳಲಿದ್ದಾರೆ. 29ರಂದು ಅಭಿಯಾನ ಅಂತ್ಯವಾಗಲಿದ್ದು, ಡಬಲ್ ಎಂಜಿನ್ ಸರ್ಕಾರ ಏಕೆ ಬೇಕು ಎನ್ನುವುದು ಪ್ರತಿಯೊಬ್ಬರಿಗೂ ಅಭಿಯಾನದಲ್ಲಿ ತಿಳಿಸಲಾಗುವುದು ಎಂದರು.

ತುಮಕೂರು ಜಿಲ್ಲೆಯ ಬಗ್ಗೆ ಪ್ರಧಾನ ಮಂತ್ರಿಗಳು ವಿಶೇಷ ಒಲವು ಹೊಂದಿದ್ದು ಜಿಲ್ಲೆಯ ಸ್ಥಾಪಿಸಲಾಗುತ್ತಿರುವ ಇಸ್ರೋ .ಎಚ್.ಎ.ಎಲ್ ವಿಮಾನ ಘಟಕ, ಎತ್ತಿನ ಹೊಳೆ ಯೋಜನ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ತುಮಕೂರಿನ ತೆಂಗು ಆಯ್ಕೆ ಮಾಡಲಾಗಿದೆ. ತೆಂಗು ಉತ್ಪನ್ನಗಳ ರಫ್ತಿಗೆ ಕೇಂದ್ರ ಸರ್ಕಾರ ಹೆಚ್ಚು ಉತ್ತೇಜನ ನೀಡಲಿದೆ. ತುಮಕೂರು ಗ್ರಾಮಾಂತರ ಕ್ಷೇತ್ರ ಅತಿ ಹೆಚ್ಚು ತೆಂಗು ಬೆಳೆಯುವ ಪುದೇಶವಾಗಿದ್ದು, ಯೋಜನೆಯಿಂದ ಆಗುವ ಉಪಯೋಗವನ್ನು ಪ್ರತಿ ಮನೆಗೆ ತಲುಪಿಸಲಾಗುವುದು ಎಂದರು.

ಗ್ರಾಮಾಂತರ ಕ್ಷೇತ್ರದಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಾದ 256 ಕಿ.ಮಿ.ಉದ್ಯದ ರಸ್ತೆ, 20000 ರೈತರಿಗೆ ಉಚಿತ ಟ್ರಾನ್ಸ್ ಫಾರ್ಮರ್‍ಗಳ ವಿತರಣೆ, ಎಲ್ಲಾ 35 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳು,ಹಲವಾರು ಗ್ರಾಮಗಳಲ್ಲಿ ಕೈಗೊಂಡ ಉಪವಿದ್ಯುತ್ ಸ್ಥಾವರಗಳು,ಶುದ್ಧ ಕುಡಿಯುವ ನೀರಿನ ಘಟಕ, ಚೆಕ್ ಡಾಂಗಳ ನಿರ್ಮಾಣ, 220 ಗ್ರಾಮಗಳಿಗೆ ಹೇಮಾವತಿ ನೀರು ಒದಗಿಸುವ ಯೋಜನ, ಗುಡಿಸಲು ಮುಕ್ತ ಕ್ಷೇತ್ರಕ್ಕಾಗಿ ಕೈಗೊಂಡ ಯೋಜನೆಗಳು,ದೇವಸ್ಥಾನಗಳ ಪುನರ್ ನಿರ್ಮಾಣ, ಹೈಟೆಕ್ ಸರ್ಕಾರಿ ಶಾಲೆಗಳು ಸೇರಿದಂತೆ ಹತ್ತು ಹಲವು ಕಾರ್ಯಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಕೊರೊನಾ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಾಣಪಣಕ್ಕಿಟ್ಟು ಜನರ ಸೇವೆ ಮಾಡಿದ್ದಾರೆ. ಹದಿನೈದು ಸಾವಿರಕ್ಕೂ ಹೆಚ್ಚು ಕುಟುಂಬಕ್ಕೆ ಕಿಟ್ ಗಳನ್ನು ಹಂಚಿದ್ದೇನೆ ಕೊರೊನಾ ಸಮಯದಲ್ಲಿ ನನ್ನ ಕೆಲಸಕ್ಕೆ ಕ್ಷೇತ್ರದ ಜನರು ಮಚ್ಚುಗೆ ವ್ಯಕ್ತಪಡಿಸಿದ್ದು ಗ್ರಾಮಾಂತರ ಕ್ಷೇತ್ರದಲ್ಲಿ 25 ಸಾವಿರ ಮತಗಳ ಅಂತರದಿಂದ ನಾನು ಗೆಲುವು ಸಾಧಿಸಬೇಕೆಂಬುದು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಇಂಗಿತವಾಗಿದೆ. ಇದಕ್ಕಾಗಿ ಕಾರ್ಯಕರ್ತರ ಪಡೆ ಕೆಲಸ ಮಾಡುತ್ತಿದೆ.

ನಾನು ಶಾಸಕನಾದ ಕಾಲದಲ್ಲಿ ಕಟ್ಟಿದ ಸರ್ಕಾರಿ ಶಾಲೆಗಳು, ಗುಣಮಟ್ಟದ ರಸ್ತೆಗಳು, ಗೂಳೂರು- ಹೆಬ್ಬೂರು ಏತ ನೀರಾವರಿ ಯೋಜನೆಗಳು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹೀಗೆ ಪ್ರತಿ ಮನೆ, ಮನಸ್ಸನ್ನು ಮುಟ್ಟಿದ್ದು, ಜನರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ನರಸಿಂಹಮೂರ್ತಿ, ಗೂಳೂರು ಶಿವಕುಮಾರ್, ಶಂಕರಣ್ಣ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *