ಶಿರಾ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಗುರುವಾರ ಮತ್ತು ಶುಕ್ರವಾರ ಕರ್ನಾಟಕ ಭಾಗದ ಪ್ರಮುಖ ಭಾಗಗಳಿಗೆ ಭೇಟಿ ನೀಡುತ್ತಿದ್ದು, ಅದರಂತೆ ಶಿರಾ ನಗರದಲ್ಲಿ ಪಕ್ಷದ ಶಕ್ತಿ ಕೇಂದ್ರದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಇದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನವರಿ 6ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಸೇರಿದಂತೆ ನಾನಾ ಕಡೆ ತರಾತರಿಯಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ಬಾಜಪ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಸಿಎಂ ಹಾದು ಹೋಗುವ ರಸ್ತೆಗಳು ಹಾಗೂ ರಸ್ತೆ ಬದಿಯನ್ನು ಸ್ವಚ್ಛಗೊಳಿಸಲಾಗುತ್ತಿದೆ.
ಈ ಪ್ರದೇಶಗಳು ಸ್ವಚ್ಛಗೊಳ್ಳಲು ಅವರೇ ಬರಬೇಕಾಯಿತು ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಪ್ರಮುಖವಾಗಿ ನಗರದ ರಸ್ತೆಗಳು ಇದೀಗ ಹೊಸ ರೂಪ ಪಡೆಯುತ್ತಿವೆ. ಇದಕ್ಕೆ ಕಾರಣ ವೇದಿಕೆ ಕಾರ್ಯಕ್ರಮ ನಡೆಯುತ್ತಿರುವುದರಿಂದ ಗಬ್ಬೆದ್ದು ಹೋಗಿದ್ಧ ರಸ್ತೆಗಳು ಸ್ವಚಗೊಳ್ಳತ್ತಾ ಇವೆ.
ತಾಲ್ಲೂಕು ಬಿಜೆಪಿಗರಲ್ಲಿ ಹುರುಪು ತುಂಬಿದ ಗುಜರಾತ್ ಚುನಾವಣಾ ಫಲಿತಾಂಶ, ಸಿಎಂ ಸಮಾರಂಭಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು ಹೆಲಿಪ್ಯಾಡ್ ನಿಂದ ವೇದಿಕೆಗೆ ಬಂದು ಸೇರುವ ರಸ್ತೆ ಹಾಗೂ ಅವುಗಳ ಬದಿಗಳು ಸ್ವಚ್ಛಗೊಳ್ಳುತ್ತಿರುವುದು ವಿಶೇಷ. ಇನ್ನು ಹಾಳಾಗಿದ್ದ ರಸ್ತೆಗಳಿಗೂ ತರಾತುರಿಯಲ್ಲಿ ಡಾಂಬರ್ ಹಾಕುವ ಕಾಯಕಲ್ಪ ನೀಡಲಾಗುತ್ತಿದೆ. ಆದರೆ, ಎಷ್ಟರ ಮಟ್ಟಿಗೆ ಗುಣಮಟ್ಟದಿಂದ ಕೂಡಿದೆ ಎಂಬುದು ತಿಳಿಯುತ್ತಿಲ್ಲ.
ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲವೂ ಅಚ್ಚು ಕಟ್ಟಾಗಿರಬೇಕು. ಯಾವುದೇ ಲೋಪದೋಷಕ್ಕೆ ಎಡೆಮಾಡಿಕೊಡದಂತೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಸ್ಥಳಿಯ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎಲ್ಲ ಸಿದ್ಧತೆಗಳ ಹೊಣೆಯನ್ನು ಸ್ಥಳಿಯ ಅಧಿಕಾರಿಗಳಿಗೆ ನೀಡಲಾಗಿದೆ. ಹೀಗಾಗಿ ಎಲ್ಲಕಾರ್ಯಗಳು ಭರದಿಂದ ಸಾಗಿವೆ. ಎಲ್ಲ ಇಲಾಖೆಗಳು ತಮ್ಮ ವ್ಯಾಪ್ತಿಯ ಮಾಹಿತಿಗಳನ್ನು ಸಿದ್ಧಪಡಿಸಿಕೊಂಡಿವೆ.
ತುಮಕೂರಿನಲ್ಲಿ ಕಾರ್ಯಕ್ರಮ : ಜನವರಿ 5ರಂದು ತುಮಕೂರಿನ ಸಿದ್ಧಿವಿನಾಯಕ ಕಲ್ಯಾಣ ಮಾಂಟಪದಲ್ಲಿ ಶಕ್ತಿ ಕೇಂದ್ರದ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಪತ್ರಿಕಾಗೋಷ್ಠೀಯಲ್ಲಿ ತಿಳಿಸಿದರು.
ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ.ನಡ್ಡಾ, ಅರುಣ್ ಸಿಂಗ್, ನಳೀನ್‌ಕುಮಾರ್ ಕಟೀಲ್, ಕೇಂದ್ರ ಸಚಿವ ನಾರಾಯಣಸ್ವಾಮಿ, ರಾಜ್ಯ ಸಚಿವರುಗಳಾದ ಜೆ.ಸಿ.ಮಾಧುಸ್ವಾಮಿ, ಅರಗಜ್ಞಾನೇಂದ್ರ, ಬಿ.ಸಿ.ನಾಗೇಶ್ ಸೇರಿದಂತೆ ಪಕ್ಷದ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.