ಶಿಕ್ಷಣ ಕ್ಷೇತ್ರ ಕೃತಕ ಬುದ್ಧಿಮತ್ತೆಯ ಸವಾಲನ್ನು ಮೀರಬೇಕು: ಪ್ರೊ. ಚಿದಾನಂದಗೌಡ

ತುಮಕೂರು: ಕೃತಕ ಬುದ್ಧಿಮತ್ತೆಯ ಕೈಗೊಂಬೆಯಾಗದೆ, ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆಗಳನ್ನು ಶಿಕ್ಷಕರೇ ಅಳವಡಿಸಿಕೊಂಡರೆ ಯಂತ್ರದ ಮನಸ್ಥಿತಿಯ ಚೌಕಟನ್ನೂ ಮೀರಿ ಜ್ಞಾನವನ್ನು ಧಾರೆಯಾಗಿ ಎರೆಯಬಹುದು ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿದಾನಂದಗೌಡ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯ ಸೋಮವಾರ ಆಯೋಜಿಸಿದ್ದ 20ನೇ ಸಂಸ್ಥಾಪನಾ ದಿನವನ್ನು ಉದ್ಘಾಟಿಸಿ ಮಾತನಾಡಿದರು.

ಮುಂದಿನ 10 ವರ್ಷದಲ್ಲಿ ವಿದ್ಯಾಸಂಸ್ಥೆಗಳ ಸಂಪೂರ್ಣ ಅಭಿವೃದ್ಧಿಯ ಕ್ರಮ ಹೇಗಿರಬೇಕು ಎಂಬ ಅವಶ್ಯಕ ಮಾಹಿತಿಯನ್ನು ಹೊಸ ತಂತ್ರಜ್ಞಾನವಾದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನೀಡುತ್ತಿರುವುದು ಶೈಕ್ಷಣಿಕ ಮಟ್ಟದ ಬೆಳವಣಿಗೆಯ ದಾಪುಗಾಲು ಎಂದು ಪ್ರೊ. ಕೆ. ಚಿದಾನಂದಗೌಡ ಹೇಳಿದರು.
ಕೃತಕ ಬುದ್ಧಿಮತ್ತೆಯ ಕೈಗೊಂಬೆಯಾಗದೆ, ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆಗಳನ್ನು ಶಿಕ್ಷಕರೇ ಅಳವಡಿಸಿಕೊಂಡರೆ ಯಂತ್ರದ ಮನಸ್ಥಿತಿಯ ಚೌಕಟನ್ನೂ ಮೀರಿ ಜ್ಞಾನವನ್ನು ಧಾರೆಯಾಗಿ ಎರೆಯಬಹುದು ಎಂದರು.

ಮಾನವ ನಿರ್ಮಿತ ತಂತ್ರಜ್ಞಾನಕ್ಕೆ ಅಳತೆಯಿದೆ. ಅದರದೇ ಆದ ಕೆಲವು ನಿರ್ಬಂಧಗಳಿವೆ. ಮಾನವನ ಸಾಮಥ್ರ್ಯವನ್ನು ಪರೀಕ್ಷಿಸುವ ತಂತ್ರಜ್ಞಾನವೆಂದರೆ ಅದುವೇ ಶಿಕ್ಷಕ. ವಿದ್ಯಾರ್ಥಿಗಳನ್ನು ವಿಜ್ಞಾನಿಗಳನ್ನಾಗಿ ರೂಪಿಸುವ ಸಾಮಥ್ರ್ಯ ಶಿಕ್ಷಕನಿಗಿದೆ ಎಂದು ಹೇಳಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸುವುದು ಶಿಕ್ಷಕನ ಕರ್ತವ್ಯ. ಶಿಕ್ಷಕರು ಜ್ಞಾನದ ವಾಹಿನಿಗಳಾಗಿರಬೇಕು. ಹೆಚ್ಚಿನ ಸಮಯ ಅವರೊಟ್ಟಿಗೆ ಜ್ಞಾನಾರ್ಜನೆಯಲ್ಲಿ ತೊಡಗಬೇಕು. ಆಗಲೇ ಶಿಕ್ಷಕನಿಗೆ ಧನ್ಯತೆ ಸಿಗುವುದು. ಶಿಕ್ಷಣವು ಫಲಿತಾಂಶದ ಆಧಾರವಾಗದೇ, ಜ್ಞಾನ ಮತ್ತು ವಿವೇಕದ ಸಂಕೇತವಾಗಬೇಕು ಎಂದರು.

ತುಮಕೂರು ವಿವಿ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು ಮಾತಾನಾಡಿ, 19ನೇ ವರ್ಷದಿಂದ 20ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜವಾಬ್ದಾರಿಯುತ ಕೆಲಸಗಳು ಮುಂದಿನ ವμರ್Áಚರಣೆಗೆ ಮಾದರಿಯಾಗಬೇಕು. ನಾವು ಮಾಡುವ ಕೆಲಸ ನಮಗೆ ಆತ್ಮತೃಪ್ತಿ ನೀಡಬೇಕು. ಪ್ರಶಂಸೆಗಾಗಿ ಕೆಲಸ ಮಾಡಬಾರದು. ತುಮಕೂರು ಜಿಲ್ಲೆಯಲ್ಲಿ ಮೂರು ಪಿಜಿ ಕ್ಯಾಂಪಸ್‍ಗಳು, ತುಮಕೂರು ವಿವಿಯ ಹೊಸ ಕ್ಯಾಂಪಸ್ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರುವುದು ಹಾಗೂ ಶಿಕ್ಷಣದಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಲಾಗುವುದು ಎಂದು ಭರವಸೆ ನೀಡಿದರು.

ತುಮಕೂರು ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಮುಂದಿನ ದಿನಗಳಲ್ಲಿ ಆಡಳಿತ ವಿಭಾಗದಿಂದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅವಶ್ಯಕತೆ ಇರುವ ಸೌಲಭ್ಯಗಳನ್ನು ಒದಗಿಸುವುದಾಗಿಯೂ ಹಾಗೂ ವಿಶ್ವವಿದ್ಯಾಲಯದಲ್ಲಿ ಸಕಾರಾತ್ಮಕ ಬದಲಾವಣೆ ತರುವುದಾಗಿಯೂ ಆಶ್ವಾಸನೆ ನೀಡಿದರು.
ಶೈಕ್ಷಣಿಕ ಸಾಧನೆ ಮಾಡಿದ ಅಧ್ಯಾಪಕರು ಹಾಗೂ ವಿಭಾಗಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತುಮಕೂರು ವಿವಿ ಹಣಕಾಸು ಅಧಿಕಾರಿ ರೇವಣ್ಣ ಆರ್., ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಸಂಚಾಲಕ ಡಾ. ಎ. ಎಂ. ಮಂಜುನಾಥ್ ಭಾಗವಹಿಸಿದ್ದರು.

ಕಾರ್ಯಕ್ರಮದ ಸಂಯೋಜಕ ಪ್ರೊ. ಪರಶುರಾಮ ಕೆ. ಜಿ. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಡಾ. ಗೀತಾ ವಸಂತ ನಿರೂಪಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ. ವಂದಿಸಿದರು.

Leave a Reply

Your email address will not be published. Required fields are marked *