ತುಮಕೂರು : ಸರ್ಕಾರಿ ಶಾಲೆಗಳು ಮುಚ್ಚಿತ್ತಿರುವುದಕ್ಕೆ ಇಂಗ್ಲೀಷ್ ವ್ಯಾಮೋಹವೇ ಕಾರಣವಾಗಿದ್ದು, ಒಂದೆರಡು ಮಕ್ಕಳಿದ್ದರೆ, ಶಿಕ್ಷಕರು ಪಾಠ ಮಾಡುತ್ತಾರ, ಮಕ್ಕಳು ಕಲಿಯುತ್ತವೆಯೇ, ಪೋಷಕರು ಇತರೆ ಮಕ್ಕಳನ್ನು ಕಳಿಸುತ್ತಾರ ಎಂಬುದರ ಮೇಲೆ ಸರ್ಕಾರಿ ಶಾಲೆಗಳ ಸ್ಥಿತಿ ನಿಂತಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಂದು ಧ್ವಜಾರೋಹಣ ನೆರವೇರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಂದು ತರಗತಿಯಲ್ಲಿ ಒಂದು ಮಗು ಇದ್ದರೆ ಅಲ್ಲಿ ಏನಾದರೂ ಕಲಿಕೆ ಆಗುತ್ತಾ ವಿಚಾರ ಮಾಡಿ, ಅಥವಾ ಅಲ್ಲಿ ಪಾಠ ಮಾಡುತ್ತಾರ, ಐದಾರು ಮಕ್ಕಳಿದ್ದರೆ ಯಾರಾದರೂ ಪೋಷಕರೂ ತಿರುಗಿ ನೋಡ್ತಾರ, ಅಥವಾ ಶಿಕ್ಷಕರು ಅಲ್ಲಿ ಓದ್ತಾ ಇದ್ದಾರ ಇಲ್ವ, ಕಲಿಸುತ್ತಾರ ಎಂಬ ಖಾತರಿ ಇರುತ್ತಾ, ಆ ಶಿಕ್ಷಕರು ಶಾಲೆಗೆ ಹೋಗುತ್ತಿದ್ದಾರೋ, ಅವರ ಪರವಾಗಿ ಯಾರು ಹೋಗುತ್ತಿದ್ದಾರೋ ಎಂದು ಸಚಿವರೆ ಸರ್ಕಾರಿ ಶಾಲೆಗಳ ಬಗ್ಗೆ, ಮಕ್ಕಳ ಬಗ್ಗೆ ಆತಂಕದಲ್ಲಿ ತಿಳಿಸಿದರು.

ಯಾರು, ಯಾವ ಪಾಠ ಮಾಡುತ್ತಿದ್ದಾರೆ, ಯಾರು ಪಾಠ ಮಾಡುತ್ತಿದ್ದಾರೆ, ಆ ಐದಾರು ಮಕ್ಕಳಿದ್ದರೆ ಕಲಿಯುವ ಆಸಕ್ತಿ ಇರುತ್ತಾ, ಕನಿಷ್ಟ ಶಾಲೆಗೆ ಬರುತ್ತಾ ಇದ್ದಾರಾ, ಏನು ಕಲಿಕೆ ಆಗುತ್ತಾ ಇದೆ, ಅವರ ಕಡೆಯಿಂದ ಮಕ್ಕಳಿಗೆ ಕಲಿಕೆ ಆಗಬೇಕು, ಮಕ್ಕಳು ಕಲಿಬೇಕು, ಬರೀ ಭಾಷೆ ಕಲಿಯುವುದಷ್ಟೇ ಅಲ್ಲ, ಭಾಷೆಯ ಜೊತೆಗೆ ಮಕ್ಕಳ ಬುದ್ದಿ ಶಕ್ತಿ ಬೆಳಿಬೇಕು, ನಾಲ್ಕೈದು ಮಕ್ಕಳಿರುವ ಶಾಲೆಯಲ್ಲಿ ಯಾವ ರೀತಿ ಕಲಿಕೆ ಆಗುತ್ತಾ ಎಂಬ ವಿಚಾರ ಗೊತ್ತಾಗ ಬೇಕು ಎಂದು ಹೇಳಿ, ಈ ಸ್ಥಿತಿಗೆ ಕಾರಣವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಸಚಿವರ ಅದನ್ನು ಶಿಕ್ಷಣ ಸಚಿವರು ತಿಳಿಸುತ್ತಾರೆ ಎಂದು ಹೇಳಿದರು.
ಐಟಿ-ಬಿಟಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷಿಕರಿಗೆ ಉದ್ಯೋಗದಲ್ಲಿ ಆದ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನ ಸಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಜಿಎಸ್ಟಿ ವ್ಯವಸ್ಥೆಯಲ್ಲಿ ಬದಲಾವಣೆ ತಂದ ನಂತರ ರಾಜ್ಯದ ಆದಾಯ ಕಡಿತಗೊಂಡಿದೆ. ದೇಶದಲ್ಲೇ ಕರ್ನಾಟಕ ರಾಜ್ಯವು ಹೆಚ್ಚಿನ ಪ್ರಮಾಣದಲ್ಲಿ ಜಿಎಸ್ಟಿ ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾಗಿದೆ. ಬೆಂಗಳೂರು ನಗರವು ಅತಿ ಹೆಚ್ಚು ಆದಾಯ ತೆರಿಗೆ ಸಂಗ್ರಹವಾಗುವ ನಗರಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ರಾಜ್ಯಕ್ಕೆ ದೊರೆಯುವ ತೆರಿಗೆಯ ಪಾಲು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಅಭಿಪ್ರಾಯಪಟ್ಟರು.
ಕೇಂದ್ರವು ಅಭಿವೃದ್ಧಿಯಲ್ಲಿ ಹಿಂದುಳಿದಿರುವ ರಾಜ್ಯಗಳಿಗೂ ಅಗತ್ಯ ನೆರವು ನೀಡಬೇಕು. ಆದರೆ, ಕರ್ನಾಟಕದಿಂದ ಸಂಗ್ರಹವಾಗುವ ತೆರಿಗೆ ಹಣದ ಸಮರ್ಪಕ ಪಾಲು ರಾಜ್ಯಕ್ಕೆ ದೊರೆಯುವುದು ಅತ್ಯಗತ್ಯ. ಇತರ ರಾಜ್ಯಗಳ ಅಭಿವೃದ್ಧಿಗೆ ಕರ್ನಾಟಕದ ತೆರಿಗೆ ಹಣವನ್ನು ವ್ಯಯಿಸಲಾಗುತ್ತಿದೆ. ಹೆದ್ದಾರಿಗಳ ನಿರ್ಮಾಣ ಸೇರಿದಂತೆ ದೇಶದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯದ ತೆರಿಗೆ ಆದಾಯ ಬಳಕೆಯಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಆರ್ಥಿಕವಾಗಿ ಬಲಿಷ್ಠವಾದರೆ ದೇಶದ ಆರ್ಥಿಕ ಬೆಳವಣಿಗೆಗೂ ಹೆಚ್ಚಿನ ಶಕ್ತಿ ದೊರೆಯುತ್ತದೆ. ಆದ್ದರಿಂದ ರಾಜ್ಯವು ಪಾವತಿಸುವ ತೆರಿಗೆಗೆ ಅನುಗುಣವಾಗಿ ಹೆಚ್ಚಿನ ಪಾಲು ದೊರೆಯಬೇಕು. ಇದರಿಂದ ಕರ್ನಾಟಕಕ್ಕೆ ನ್ಯಾಯ ಸಿಕ್ಕಂತಾಗುವುದರ ಜೊತೆಗೆ ದೇಶದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದರು.
ಭಾμÉ ಮತ್ತು ಸಂಸ್ಕøತಿಯ ಆಧಾರದಲ್ಲಿ ಜನರನ್ನು ವಿಭಜಿಸುವ ಬದಲು ಎಲ್ಲ ಭಾμÉ ಹಾಗೂ ಸಂಸ್ಕೃತಿಗಳಿಗೆ ಸಮಾನ ಗೌರವ ನೀಡಬೇಕು. ಪರಸ್ಪರ ಗೌರವ ಮತ್ತು ಸಹಬಾಳ್ವೆಯಿಂದ ಮಾತ್ರ ಎಲ್ಲರೂ ಒಗ್ಗಟ್ಟಿನಿಂದ ಬದುಕಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಶೀಘ್ರ ಗುಣಮುಖರಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಹೇಳಿದರು.