ಡಾ.ಜಿ.ಪರಮೇಶ್ವರ್ ಪರವಾಗಿ ಪ್ರಚಾರ ಮಾಡಿದ ಸಿನಿಮಾ ನಿರ್ದೇಶಕ ಎಸ್,ನಾರಾಯಣ್

ಕೊರಟಗೆರೆ : ಡಾ.ಜಿ.ಪರಮೇಶ್ವರ ರಾಜ್ಯ ಕಂಡಂತಹ ಸಜ್ಜನ ರಾಜಕಾರಣಿಗಳು, ತಮ್ಮದೇ ಆದ ರಾಜಕೀಯ ಉತ್ತಮ ಚಾರಿತ್ರೆಯನ್ನು ಹೊಂದಿದವರು ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರಾದ ಅವರ ಗುಣಕ್ಕೆ ಮನಸೋತು ಸ್ವಯಂ ಇಚ್ಚೆಯಿಂದ ಅವರ ಪರ ಪ್ರಚಾರ ಮಾಡಲು ಬಂದಿದ್ದೇನೆ ಎಂದು ಕನ್ನಡ ಚಲನಚಿತ್ರದ ಹೆಸರಾಂತ ನಿದೇರ್ಶಕ, ನಿರ್ಮಾಪಕ ನಟರಾದ ಎಸ್.ನಾರಾಯಣ್ ತಿಳಿಸಿದರು.

ಅವರು ಕೊರಟಗೆರ ಪಟ್ಟಣದ ಸಂತೆಮೈದಾನದಲ್ಲಿ ಸೋಮವಾರದ ಸಂತೆಯಲ್ಲಿ ನೆರೆದಿದ್ದ ವ್ಯಾಪಾರಸ್ಥರು ಮತ್ತು ವರ್ತಕರಿಗೆ ಡಾ.ಜಿ.ಪರಮೇಶ್ವರ್ ಪರವಾಗಿ ಮತವನ್ನು ಯಾಚಿಸಿ ಮತನಾಡಿ ಡಾ.ಜಿ.ಪರಮೇಶ್ವರ್ ರಂತಹ ಶಾಸಕರು ಸಿಗುವುದು ಅಪರೂಪ, ರಾಜ್ಯದ ನಾಯಕರು ಕ್ಷೇತ್ರದ ಶಾಸಕರಾಗುತ್ತಾರೆಂದರೆ ಅದು ಆ ಕ್ಷೇತ್ರದ ಮತದಾರರು ಪಡೆದಂತಹ ಭಾಗ್ಯ, ಇದರಿಂದ ಕ್ಷೇತ್ರವು ಅಭಿವೃಧ್ದಿಯಾಗುತ್ತದೆ, ಜನರಿಗೂ ಹಲವು ವಿಶೇಷ ಸೇವೆ, ಅನುದಾನ ಮತ್ತು ಸೌಲಭ್ಯಗಳು ದೊರೆಯುತ್ತವೆ, ನಾನು ಇಲ್ಲಿ ಚಲನ ಚಿತ್ರ ನಟನಾಗಿ ಬಾರದೆ, ಅವರ ಅಭಿಮಾನಿಯಾಗಿ ಮತ್ತು ಸಾಮಾನ್ಯ ವ್ಯಕ್ತಿಯಾಗಿ ಕೊರಟಗೆರೆ ಕ್ಷೇತ್ರದ ಜನರಲ್ಲಿ ಮತ ಯಾಚಿಸುತ್ತಿದ್ದೇನೆ, ಕ್ಷೇತ್ರದ ಜನರು ಡಾ.ಜಿ.ಪರಮೇಶ್ವರ್ ರವರು ಮಾಡಿರುವ ಅಭಿವೃದ್ದಿ. ಜನಸೇವೆಯನ್ನು ಸ್ಮರಿಸುತ್ತಿದ್ದು ಮತ್ತೆ ಅವರನ್ನೆ ಶಾಸಕರನ್ನಾಗಿ ಮಾಡುತ್ತೇವೆಂದು ಹೇಳುತ್ತಿದ್ದಾರೆ ಇದರಿಂದ ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ್ ಜಯಗಳಿಸಿ ಮತ್ತೆ ಶಾಸಕರಾಗುತ್ತಾರೆ ಎಂದರು.

ಈ ಸಂದರ್ಭದಲ್ಲಿ ಪ.ಪಂ.ಸದಸ್ಯ ಕೆ.ಆರ್.ಓಬಳರಾಜು, ಮಾಜಿ ಉಪಾಧ್ಯಕ್ಷ ಕೆ.ವಿ.ಮಂಜುನಾಥ್, ಮಾಜಿ ಸದಸ್ಯ ಕೆ.ಬಿ.ಲೋಕೇಶ್, ಮುಖಂಡರುಗಳಾದ ರಾಘವೇಂದ್ರ, ದೊಡ್ಡಯ್ಯ, ಚನ್ನಕೇಶವ,  ಸೇರಿದಂತೆ ಇತರರು ಹಾಜರಿದ್ದರು. 

Leave a Reply

Your email address will not be published. Required fields are marked *