ತುಮಕೂರು: ಬಲಿಜ ಯುವಕ ಸಂಘ ಹಾಗೂ ಶ್ರೀ ಲಕ್ಷ್ಮೀಕಾಂತಸ್ವಾಮಿ ಗಜೇಂದ್ರ ಮೋಕ್ಷ ಪೂಜಾ ಸಮಿತಿ ವತಿಯಿಂದ ನಗರದ ಚಿಕ್ಕಪೇಟೆಯ ಪುರತನ ಶ್ರೀ ಲಕ್ಷ್ಮೀಕಾಂತಸ್ವಾಮಿ ದೇವಾಲಯದಲ್ಲಿ ಶ್ರೀಸ್ವಾಮಿಯ ಮಹಾರಥೋತ್ಸವದ ಅಂಗವಾಗಿ ಜ.26 ರಂದು ಗುರುವಾರ ಗಜೇಂದ್ರಮೋಕ್ಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಲಕ್ಷ್ಮೀಕಾಂತಸ್ವಾಮಿಗೆ ಅಭಿಷೇಕ, ಪೂಜೆ ಹಾಗೂ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ಶ್ರೀಸ್ವಾಮಿಯ ಗರುಡ ವಾಹನ ಉತ್ಸವ ನಡೆಯಲಿದೆ.
ಜ.28 ರಂದು ರಥಸಪ್ತಮಿ ಅಂಗವಾಗಿ ಶ್ರೀಲಕ್ಷ್ಮೀಕಾಂತಸ್ವಾಮಿಯ ಮಹಾರಥೋತ್ಸವವು ಮಧ್ಯಾಹ್ನ 12 ಗಂಟೆಗೆ ನೇರವೇರಲಿದೆ.
ಈ ಪೂಜಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಧಿಗಳು ಆಗಮಿಸಿ ಶ್ರೀಸ್ವಾಮಿಯ ದರ್ಶನ ಪಡೆಯಬಹುದಾಗಿದೆ ಎಂದು ಗಜೇಂದ್ರ ಮೋಕ್ಷ ಪೂಜಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.