ತುಮಕೂರು : ಕೊರಟಗೆರೆ ತಾಲ್ಲೂಕು ದಂಡಾಧಿಕಾರಿಗಳಾಗಿದ್ದ, ದಕ್ಷ ತಹಶೀಲ್ದಾರ್ ಎಂದು ಜನಮನ್ನಣೆ ಪಡೆದಿದ್ದ ನಹೀದಾ ಜಮ್ ಜಮ್ ಅವರು ತುಮಕೂರು ವಿಶ್ವವಿದ್ಯಾಲಯದ ಮೊದಲ ಮಹಿಳಾ ಕುಲ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಶಿರಾ ಹಾಗೂ ಕೊರಟಗೆರೆ ತಾಲೂಕಿನಲ್ಲಿ ತಾಹಶೀಲ್ದಾರ್ ಆಗಿದ್ದ ನಹೀದಾ ಜಮ್ ಜಮ್ ಅವರು ಜನ ಸಾಮಾನ್ಯರ ಕೆಲಸಗಳನ್ನು ಖುದ್ದಾಗಿ ತಾವೆ ಆಲಸಿ ಬಗೆಹರಿಸುತ್ತಿದ್ದರು.
ತಹಶೀಲ್ದಾರ್ ಆಗಿದ್ದ ನಹೀದಾ ಜಮ್ ಜಮ್ ರವರು ತುಮಕೂರು ವಿಶ್ವವಿದ್ಯಾಲಯದ ಮತ್ತು ಮೊದಲ ಮಹಿಳಾ ಕುಲ ಸಚಿವರಾಗಿ ಬಂದಿದ್ದು, ವಿಶ್ವವಿದ್ಯಾನಿಲಯ ಮೊದಲ ಮಹಿಳಾ ಕುಲಸಚಿವರು ಬಂದಿರುವುದರಿಂದ ಮಹಿಳಾ ಸಿಬ್ಬಂದಿ ಮತ್ತು ವಿಶ್ವವಿದ್ಯನಿಲಯದ ವಿದ್ಯಾರ್ಥಿನಿಯರಿಗೆ ಖುಷಿಯ ವಿಚಾರವಾಗಿದೆ.