
ಭಾರತ್ ಜೋಡೋ ಯಾತ್ರೆಯು ಹಾದು ಹೋಗುವ ಮತ್ತು ರಾಹುಲ ಗಾಂಧಿ ಊಟ, ತಿಂಡಿ ಮತ್ತು ಉಳಿದುಕೊಳ್ಳುವ ಪ್ರದೇಶ ಗಳನ್ನು ಸಂಸದ ಡಿ.ಕೆ.ಸುರೇಶ್ ಅವರು ಮಾಯಸಂದ್ರದಲ್ಲಿ ಪರಿಶೀಲನೆ ನಡೆಸಿದರು.
ಅಕ್ಟೋಬರ್ 8ರಂದು ತುಮಕೂರು ಜಿಲ್ಲೆಗೆ ಭಾರತ್ ಜೋಡೋ ಯಾತ್ರೆಯು ಪ್ರವೇಶಿಸಲಿದ್ದು, ಈ ಹಿನ್ನಲೆಯಲ್ಲಿ ಡಾ.ಪರಮೇಶ್ವರ್ ಅವರು ತುರುವೇಕೆರೆ ಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಲ್ಲಿ ಪರಿಶೀಲಿಸಿ ದರು.
ಈ ಸಂದರ್ಭದಲ್ಲಿ ಮಾಜಿ ಶಾಕರುಳಾದ ಕೆ.ಷಡಕ್ಷರಿ, ಮಾಜಿ ವಿಧಾನಪರಿಷತ್ ಸದಸ್ಯ ಬೆಮಲ್ ಕಾಂತರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ರಾಮಕೃಷ್ಣ, ಪ್ರದೇಶದ ಕಾಂಗ್ರೆಸ್ ಕಾರ್ಯದರ್ಶಿ ಮುರಳಿಧರ ಹಾಲಪ್ಪ, ಕಾಂಗ್ರೆಸ್ ಯುವ ಮುಖಂಡರಾದ ಜಿ.ಎಸ್.ಪ್ರಸನ್ನಕುಮಾರ್, ರಾಯಸಂದ್ರ ರವಿಕುಮಾರ್, ಡಾ.ಅರುಂಧತಿ , ಚೌದ್ರಿರಂಗಪ್ಪ, ಮುಂತಾದವರಿದ್ದರು.