ದೇಶದಲ್ಲಿ ಬಡತನ,ಜಾತೀಯತೆ ಇರುವುದು ಶೋಚನೀಯ- ಗೃಹ ಸಚಿವ ಪರಮೇಶ್ವರ್, ಬರಗೂರು ಸಾಂಸ್ಕøತಿಕ ಕೇಂದ್ರಕ್ಕೆ ಚಾಲನೆ

ತುಮಕೂರು : ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಹಲವು ವರ್ಷಗಳು ಸಂದರೂ ಸಹ ಸಮಾಜದಲ್ಲಿ ದುರ್ಬಲ ವರ್ಗದವರ ಮೇಲೆ ನಿರಂತರವಾಗಿ ನಡೆಯುತ್ತಿರುವ ಶೋಷಣೆಯ ವಿರುದ್ಧ ಇಂದಿಗೂ ಯಾರು ಸಹ ಮಾತನಾಡುವುದಿಲ್ಲ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.

     ಶಿರಾ ತಾಲ್ಲೂಕಿನ ಬರಗೂರಿನಲ್ಲಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಪ್ರತಿμÁ್ಠನ, ಬೆಂಗಳೂರು ಸಹಯೋಗದಲ್ಲಿ ನಿರ್ಮಿಸಲುದ್ದೇಶಿಸಿರುವ ಬರಗೂರು ಸಾಂಸ್ಕೃತಿಕ ಕೇಂದ್ರ ಉದ್ಘಾಟನೆ ಹಾಗೂ ಕಟ್ಟಡದ ಶಂಕುಸ್ಥಾಪನೆಯನ್ನು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ನೆರವೇರಿಸಿದರು.

     ನಂತರ ಮಾತನಾಡಿದ ಸಚಿವ ಡಾ. ಜಿ ಪರಮೇಶ್ವರ್,  ಇಂದು ನಮ್ಮ ದೇಶದ ವಿಜ್ಞಾನಿಗಳು ಚಂದ್ರಯಾನವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ ಆದರೆ,  ಇಂದಿಗೂ ನಮ್ಮ ದೇಶದಲ್ಲಿ ಬಡತನ ನಿರ್ಮೂಲನೆ ಮತ್ತು ಜಾತೀಯತೆಯನ್ನು ನಿರ್ಮೂಲನೆ ಮಾಡಲು ಆಗದಿರುವುದು ಶೋಚನೀಯ ಸಂಗತಿ ಎಂದು ಹೇಳಿದರು.

 ಹಿಂದಿನ ಕಾಲದಲ್ಲಿದ್ದ ಬರಗೂರು ಗ್ರಾಮವನ್ನು ಒಮ್ಮೆ ಊಹಿಸಿಕೊಳ್ಳಬೇಕು, ಇಂತಹ ಗ್ರಾಮದ  ಶೋಷಿತ ವರ್ಗದ ಕುಟುಂಬದಲ್ಲಿ ಜನಿಸಿದ ಬರಗೂರು ರಾಮಚಂದ್ರಪ್ಪ ಅವರು ಸಾಹಿತ್ಯ ಮತ್ತು ಸಮಾಜಮುಖಿ ಚಿಂತನೆಗಳ ಮೂಲಕ  ರಾಜ್ಯ ಮತ್ತು ದೇಶದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅಪರೂಪದ ಸಾಹಿತಿ ಬರಗೂರು ರಾಮಚಂದ್ರಪ್ಪನವರು ತಾವು ಹುಟ್ಟಿ ಬೆಳೆದ ಬರಗೂರಿನ ಮನೆಯನ್ನು  ಮುಂದಿನ ಪೀಳಿಗೆಗಾಗಿ ನೀಡಿದ್ದಾರೆ ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಮಾತನಾಡಿ, ಮುಂದಿನ ಪೀಳಿಗೆಯ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಈ ಸಾಂಸ್ಕೃತಿಕ ಕೇಂದ್ರ ಕೆಲಸ ಮಾಡುತ್ತದೆ. ಬರಗೂರು ರಾಮಚಂದ್ರಪ್ಪ ಅವರು 1970ರ ದಶಕದ ಕಾಲಘಟ್ಟದಲ್ಲಿ  ಬಂಡಾಯ ಸಾಹಿತ್ಯದ ಮೂಲಕ  ಮುಂಚೂಣಿಯಲ್ಲಿದ್ದರು ಎಂದರು.

 ಕಾರ್ಯಕ್ರಮದಲ್ಲಿ  ಬರಗೂರು ರಾಮಚಂದ್ರಪ್ಪ ಅವರು ಮಾತನಾಡಿ, ನಾನು ಹುಟ್ಟಿ ಬೆಳೆದ ಊರಿನಿಂದಲೇ ನಮ್ಮ ಪ್ರತಿμÁ್ಟನದ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕು ಎಂಬ ಸದುದ್ದೇಶದಿಂದ ಇಲ್ಲಿ  ಸಾಂಸ್ಕೃತಿಕ ಕೇಂದ್ರವನ್ನು  ಪ್ರಾರಂಭಿಸಲಾಗಿದೆ. ಈ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ  ಸಾಹಿತ್ಯ, ಸಂಗೀತ, ನಾಟಕ ಹಾಗೂ ಹೊಸ ಹೊಸ ಸಿನಿಮಾಗಳನ್ನು ತೋರಿಸಲಾಗುವುದು ಎಂದು ಹೇಳಿದರು.

ಕರ್ನಾಟಕದಲ್ಲಿ ಶ್ರೀಗಂಧ ಮರಕ್ಕೆ ಎಷ್ಟು ಪ್ರಾಮುಖ್ಯತೆ  ಇದೆಯೋ ಅμÉ್ಟೀ ಪ್ರಾಮುಖ್ಯತೆ ಜಾಲಿಮರಕ್ಕೂ ಇರುತ್ತದೆ. ನಾವು ನೋಡುವ ಮತ್ತು ಅರ್ಥೈಸಿಕೊಳ್ಳುವ ರೀತಿ ಸರಿಯಾಗಿ ಇರಬೇಕು ಅμÉ್ಟೀ ಎಂದರು. 
 ಕಾರ್ಯಕ್ರಮದಲ್ಲಿ  ಶಿರಾ ಶಾಸಕ ಟಿ.ಬಿ. ಜಯಚಂದ್ರ, ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ, ವಿಧಾನ ಪರಿಷತ್ ಶಾಸಕ ಚಿದಾನಂದ ಗೌಡ, ಬರಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಮಂಜುಳಾ ಭೀಮರಾಜು, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಅಶೋಕ್ ಕೆ.ವಿ., ಮಧುಗಿರಿ ಉಪವಿಭಾಗಾಧಿಕಾರಿ ರಿಷಿ ಆನಂದ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *