
ತುಮಕೂರು : ಜರ್ನಿ ಥ್ರೂ ಲೈಫ್ ತಂಡದಿಂದ ಜುಲೈ 8 ರಂದು ಶನಿವಾರ ಸಂಜೆ 6 ಗಂಟೆಗೆ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕಿರಗೂರಿನ ಗಯ್ಯಾಳಿಗಳು ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧರಿಸಿದ ಈ ಕಥೆಯನ್ನು ಅ.ನಾ. ರಾವ್ ಜಾದವ್ ರಂಗ ರೂಪ ಮಾಡಿದ್ದಾರೆ. ಈ ನಾಟಕವನ್ನು ಪಲ್ಲವಿ ನಾಗೇಂದ್ರ ನಿರ್ದೇಶಿಸಿದ್ದಾರೆ.
ನಾಟಕ ಪ್ರದರ್ಶನವನ್ನು ತುಮಕೂರು ವಿವಿ ವಿe್ಞÁನ ಕಾಲೇಜಿನ ಪ್ರಾಂಶುಪಾಲರು ಡಾ. ಪ್ರಕಾಶ್ ಎಂ ಶೇಟ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಝೆನ್ ಟೀಮ್‍ನ ಉಗಮ ಶ್ರೀನಿವಾಸ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿರಿ ಕಲಾವಿದ ಸತೀಶ್ ಕೃಷ್ಣನ್, ಚಿಂತಕ ಹಾಗೂ ವಾಗ್ಮಿ ನಿಕೇತರಾಜ್ ಮೌರ್ಯ, ವ್ಯಕ್ತಿ ವಿಕಸನ ಸಂಪನ್ಮೂಲ ವ್ಯಕ್ತಿ ಹೆಚ್.ಎನ್. ಚಂದ್ರಶೇಖರ್, ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರು ಪೆÇ್ರ. ಕರಿಯಣ್ಣ, ನಿವೃತ್ತ ಪ್ರಾಂಶುಪಾಲ ಎಸ್. ಸಿದ್ದಪ್ಪ ಆಗಮಿಸಲಿದ್ದಾರೆ. ಈ ನಾಟಕಕ್ಕೆ ಉಚಿತ ಪ್ರದರ್ಶನವಿದೆ ಎಂದು ಜರ್ನಿ ಥ್ರೂ ಲೈಪ್ ಪ್ರಕಟಣೆ ತಿಳಿಸಿದೆ.