ಮಾರ್ಚ್ 5ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ
ಸುಸಜ್ಜಿತ ಕ್ರೀಡಾಂಗಣ ಲೋಕಾರ್ಪಣೆ

ತುಮಕೂರು : ತುಮಕೂರಿನಲ್ಲಿ ಸ್ಮಾರ್ಟ್‍ಸಿಟಿ ಮತ್ತು ಇತರೆ ಅನುದಾನದಿಂದ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.


ಅವರಿಂದು ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ನಗರ ಈ 5ವರ್ಷದಲ್ಲಿ ಯಾರೂ ನಿರೀಕ್ಷೆ ಮಾಡದಷ್ಟು ಅಭಿವೃದ್ಧಿ ಕಂಡಿದ್ದು, ಮಹಾತ್ಮಗಾಂಧಿ ಕ್ರೀಡಾಂಗಣ, ಡಿಜಿಟಲ್ ಲೈಬ್ರರಿ, ಅಮಾನಿಕೆರೆ ಅಭಿವೃದ್ಧಿ, ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಒತ್ತು ನೀಡಿ ಅಭಿವೃದ್ಧಿ ಮಾಡಲಾಗಿದೆ ಎಂದು ತಿಳಿಸಿದರು.

ಕ್ಯಾತ್ಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಸರ್ಕಾರಿ ಪ್ರೌಢಶಾಲೆ, ಹಾಗೂ ಸಿದ್ಧಗಂಗಾ ಮಠದ ವಸ್ತುಪ್ರದರ್ಶನ ಆವರಣದಲ್ಲಿ ಶಾಲಾ ಕಟ್ಟಡ ನಿರ್ಮಾಣ, ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾ ಸಂಕೀರ್ಣ, ತುಮಕೂರು ನಗರದಲ್ಲಿ ಜಿಮ್ನಾಸ್ಟಿಕ್ ಸೆಂಟರ್, ನಗರದ ಸರ್ಕಾರಿ ಪಿ.ಯು ಕಾಲೇಜಿನ ಆವರಣದಲ್ಲಿ ಹಿರಿಯ ನಾಗರೀಕರಿಗೆ ಮತ್ತು ಮಕ್ಕಳಿಗೆ ಜಿಮ್ ಮತ್ತು ಆಟೋಪಕರಣ ಅಳವಡಿಕೆ ಕೋರ್ಟ್ ಸೇರಿದಂತೆ ಒಟ್ಟು 6605.65 ಲಕ್ಷ ಅನುದಾನದಲ್ಲಿ 14 ಸ್ಥಳಗಳ ಅಭಿವೃದ್ಧಿಗೊಳಿಸಲಾಗಿದೆ ಎಂದು ತಿಳಿಸಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿಗೆ ನೂತನ ಕಟ್ಟಡ, ಎಂಪ್ರೆಸ್ ಬಾಲಕಿರ ಶಾಲೆಗೆ ಹೊಸ ಕೊಠಡಿಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿ, ತುಮಕೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ಸ್ಮಾರ್ಟ್ ಸಿಟಿ ಪಾರ್ಕ್ ನಿರ್ಮಾಣ, ನಗರದ ರಿಂಗ್ ರಸ್ತೆಯ ಪುನರ್ ನಿರ್ಮಾಣ ಮತ್ತು ಉನ್ನತೀಕರಣ ಸೇರಿದಂತೆ ವಿವಿಧ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು ಸರಬರಾಜು ಯೋಜನೆಗಳು, ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿವತಿಯಿಂದ ಒಟ್ಟು 20 ನೂತನ ಅಂಗನವಾಡಿಗಳ ನಿರ್ಮಾಣ, ಕೌಶಲ್ಯಾಭಿವೃದ್ಧಿ ಯೋಜನೆಯ ಕಾಮಗಾರಿಗಳು, ಬೀದಿ ದೀಪಗಳ ನಿರ್ವಹಣೆ ಮತ್ತು ಸೌರ ವಿದ್ಯುತ್ ಉತ್ಪಾದನೆ ಕಾಮಗಾರಿಗಳು , ಬೀದಿ ಬದಿ ವ್ಯಾಪಾರಿಗಳ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳು,ಕೊಳಗೇರಿ ಅಭಿವೃದ್ಧಿ ಕಾಮಗಾರಿಗಳು, ದೇವಾಲಯಗಳ ಜೀರ್ಣೋದ್ದಾರ ಅಭಿವೃದ್ಧಿ ಕಾಮಗಾರಿಗಳು, ಸಮುದಾಯ ಭವನಗಳ ಮುಂದುವರೆದ ಕಾಮಗಾರಿಗಳ ಅಭಿವೃದ್ಧಿ, ಮತ್ತು ಒಳಚರಂಡಿ ವ್ಯವಸ್ಥೆ 2ನೇ ಹಂತದ ಕಾಮಗಾರಿ ಮತ್ತು ಸ್ಮಶಾನಗಳ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ 300 ಕೋಟಿ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ನಗರದಲ್ಲಿ ಹಿಂದೆ ಇದ್ದ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ (ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ) ರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಯನ್ನು ತಯಾರಿಸಿ ಕೈಗೆತ್ತಿಕೊಳ್ಳಲಾಗಿದ್ದು, ಸುಮಾರು ರೂ.54.65 ಕೋಟಿಗಳ ಅನುದಾನದಲ್ಲಿ, ಮಾತೃಗಾಂಧಿ, ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಇದ್ದ ಆಟದ ಮೈದಾನದಲ್ಲಿ. ನಡೆಸಲಾಗುತ್ತಿದ್ದ. ಎಲ್ಲಾ ಕ್ರೀಡೆಗಳನ್ನು ಪೆÇ್ರೀತ್ಸಾಹಿಸುವ ಸಲುವಾಗಿ ಅದನ್ನೂ ಸಹ ಒಳಾಂಗಣ ಕ್ರೀಡಾಂಗಣವನ್ನಾಗಿ ಪಲವರ್ತಿಸಿ, ತುಮಕೂರು ಜಿಲ್ಲೆಯಲ್ಲಿ ಕ್ರೀಡಾಸಕ್ತರಿಗೆ ಮತ್ತು ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಮಹಾತ್ಮಗಾಂಧಿ ಕ್ರೀಡಾಂಗಣವು ಎಂಟು ಪ್ರೇಕ್ಷಕರ ಗ್ಯಾಲರಿಯನ್ನು ಹೊಂದಿದ್ದು, 6000 ಪ್ರೇಕ್ಷಕರು ಆಸೀನರಾಗಬಹುದಾಗಿದೆ. ಎಲ್ಲಾ ಗ್ಯಾಲರಿಗಳನ್ನು ಆರ್‍ಸಿಸಿಯಿಂದ ನಿರ್ಮಿಸಲಾಗಿದ್ದು, ಇದರ ಕೆಳಭಾಗದಲ್ಲಿ ಕಾರು ಮತ್ತು ಬೈಕ್‍ಗಳ ಪಾರ್ಕಿಂಗ್ ಗಾಗಿ ಕಾಯ್ದಿರಿಸಲಾಗಿದೆ. ಈ ಕ್ರೀಡಾಂಗಣದ ಮುಂದಿನ ನಿರ್ವಹಣೆಯನ್ನು ಸುಸೂತ್ರವಾಗಿ ನಿರ್ವಹಿಸುವ ಸಲುವಾಗಿ ಆದಾಯದ ಮೂಲವನ್ನು ಸಹ ಕಲ್ಪಿಸಲು ದೂರದೃಷ್ಟಿಯಿಂದಾಗಿ ಮೂರು ಮಹಡಿಗಳ ವಾಣಿಜ್ಯ ಸಂಕೀರ್ಣವನ್ನು ಸಹ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ನಗರದ ಎಲ್ಲಾ ಕ್ರೀಡಾಪಟುಗಳು ಮತ್ತು ಕ್ರೀಡಾಸಕ್ತರು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಿಸಿರುವ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಿರುವ ದೂರದೃಷ್ಟಿಗೆ ಮೆಚ್ಚುಗೆ ವ್ಯಕ್ತವಾಗಿದ್ದು ಕ್ರೀಡಾಂಗಣವು ಸಕಲ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *