ನವದೆಹಲಿ: ಹದಿನಾರನೇ ವಿಧಾನಸಭೆ ಕರ್ನಾಟಕ ರಾಜ್ಯ ವಿಧಾನಸಭೆಗೆ ಇಂದು ದಿನಾಂಕವನ್ನು ನಿಗದಿ ಮಾಡಲಾಗಿದೆ. ಒಟ್ಟು ಒಂದೇ ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯಕ್ತ ಸುನೀಲ್ ಅರೋರಾ ಅವರು ವೇಳಾಪಟ್ಟಿ ಪ್ರಕಟಿಸಿದರು.
ಮೊದಲ ಹಂತದ ಚುನಾವಣಾ ಪ್ರಕ್ರಿಯೆ ವಿವರ ಹೀಗಿದೆ
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: 20 ಏಪ್ರಿಲ್
ನಾಮಪತ್ರ ಪರಿಶೀಲನೆ ಕೊನೆಯ ದಿನ: 23 ಏಪ್ರಿಲ್
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಏಪ್ರಿಲ್
ಮತದಾನ ನಡೆಯುವ ದಿನಾಂಕ: 10 ಮೇ
ಮೇ 13 ಕ್ಕೆ ಫಲಿತಾಂಶ
224 ವಿಧಾನಸಭಾ ಕ್ಷೇತ್ರಗಳಿದ್ದು, ಪರಿಶಿಷ್ಟ ಜಾತಿಗೆ 36 ಮತ್ತು ಪರಿಶಿಷ್ಟ ಪಂಗಡಕ್ಕೆ 15 ಕ್ಷೇತ್ರಗಳನ್ನು ಮೀಸಲಿಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 5,21,76,579 ಕೋಟಿ ಮತದಾರರಿದ್ದಾರೆ. ಕರ್ನಾಟಕದಲ್ಲಿ ಒಟ್ಟು ಮತದಾರರ ಸಂಖ್ಯೆ 5,21,73,599 ಇದೆ. ಈ ಪೈಕಿ ಪುರುಷ ಮತದಾರರ ಸಂಖ್ಯೆ – 2,62,42,561 ಹಾಗೂ ಮಹಿಳಾ ಮತದಾರರ ಸಂಖ್ಯೆ 2,59,26,319 ಇದೆ. ರಾಜ್ಯದಲ್ಲಿ ಅಂದಾಜು 4,699 ತೃತೀಯ ಲಿಂಗಿಗಳಿದ್ದು, ಮೊದಲ ಬಾರಿ ಮತದಾನ ಮಾಡುವವರ ಸಂಖ್ಯೆ (18+) – 9,17,241ಇದೆ ಒಟ್ಟು ಮತಗಟ್ಟೆಗಳು -58,282 ಇವೆ ಈ ಪೈಕಿ ನಗರ ಪ್ರದೇಶದಲ್ಲಿ 24,063 ಇವೆ. ಮಹಿಳೆಯರಿಂದ ನಿರ್ವಹಣೆ ಮಾಡುವ ಮತಗಟ್ಟೆಗಳ ಸಂಖ್ಯೆ 1320 ಹಾಗೂ ಗ್ರಾಮೀಣ ಭಾಗದಲ್ಲಿ ಇರುವ ಮತಗಟ್ಟೆಗಳು 34,219 ಹಾಗೂ ಮಾದರಿ ಮತಗಟ್ಟೆಗಳ ಸಂಖ್ಯೆ 240 ಇವೆ.
ಇದೇ ಮೊದಲ ಬಾರಿಗೆ 80 ವರ್ಷ ಅದಕ್ಕಿಂತ ಮೇಲ್ಪಟ್ಟವರು ಹಾಗೂ ವಿಶೇಷ ಚೇತನ ಮತದಾರರಿಗೆ ಮೊದಲ ಬಾರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ. . ಮತದಾನ ಕೇಂದ್ರಗಳಲ್ಲಿ ಇವರಿಗೆ ವಿಶೇಷ ಸೌಲಭ್ಯ ಒದಗಿಸಲಾಗುವುದು. ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟ 12,15,763 ಮಂದಿ ಮತದಾರರಿದ್ದಾರೆ. 16,976 ಮಂದಿ 100 ವರ್ಷ ಮೇಲ್ಪಟ್ಟವರಿದ್ದಾರೆ. 5.55 ಲಕ್ಷ ಅಂಗವಿಕಲರಿದ್ದು, ಈ ಪೈಕಿ ಮತದಾನ ಕೇಂದ್ರಕ್ಕೆ ಬರಲಾಗದೆ ಮನೆಯಲ್ಲೇ ಮತದಾನ ಬಯಸುವವರಿಗೆ ಆಯೋಗ ಸೌಲಭ್ಯ ಕಲ್ಪಿಸಲಿದೆ.
ಇಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲ ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಮೇ 24, 2023ರಂದು ವಿಧಾನಸಭೆಯ ಕಾಲಾವಧಿ ಮುಕ್ತಾಯಗೊಳ್ಳಲಿದೆ.
ಅದರೊಳೆಗೆ ಚುನಾವಣೆಯ ಎಲ್ಲಾ ಪ್ರಕ್ರಿಯೆ ಮುಕ್ತಾಯಗೊಳಿಸಲಾಗುತ್ತದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ 36 ಎಸ್ಸಿ ಮೀಸಲು ಕ್ಷೇತ್ರ, 15 ಎಸ್ಟಿ ಮೀಸಲು ಕ್ಷೇತ್ರಗಳಾಗಿದ್ದಾವೆ ಎಂದರು.
5.2 ಕೋಟಿ ಮತದಾರರು ಕರ್ನಾಟಕದಲ್ಲಿ ಇದ್ದಾರೆ. ಇವರಲ್ಲಿ 2.62 ಕೋಟಿ ಪುರುಷ ಮತದಾರರು ಇದ್ದರೇ, 2.5 ಮಹಿಳಾ ಮತದಾರರು ಇದ್ದಾರೆ.
80 ವರ್ಷ ಮೇಲ್ಪಟ್ಟ 12.15 ಲಕ್ಷ ಮತದಾರರಿದ್ದಾರೆ. ಅವರಿಗೂ ಅವಕಾಶ ನೀಡಲಾಗುತ್ತಿದೆ. 2.55 ಲಕ್ಷ ಅಂಗವಿಕಲ ಮತದಾರರಿದ್ದಾರೆ. ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಈ ಬಾರಿಯ ಚುನಾವಣೆಗಾಗಿ 58,282 ಮತಗಟ್ಟೆಗಳನ್ನು ಸ್ಥಾಪಸಿಲಾಗಿದೆ. 20,866 ನಗರ ಪ್ರದೇಶಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಒಂದು ಮತಗಟ್ಟೆಯಲ್ಲಿ ಸರಾಸರಿ 883 ಮತದಾರರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. 1,320 ಮಹಿಳೆಯರಿಗಾಗಿಯೇ ಮತದಾನಕ್ಕೆ ಬೂತ್ ಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.