ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ದೆಗಳ ಉಲ್ಲಂಘನೆ ವಿರುದ್ದ ಕಠಿಣ ಕ್ರಮ: ಡಿ.ಹೆಚ್.ಒ.

ತುಮಕೂರು : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 139 ಸ್ಕ್ಯಾನಿಂಗ್ ಸೆಂಟರ್‍ಗಳು ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ದೆಗಳ ರೀತ್ಯ ಕಾರ್ಯನಿರ್ವಹಿಸಬೇಕು, ಕಾಯ್ದೆ ಉಲ್ಲಂಘಿಸುವ ಕೇಂದ್ರಗಳ ಪರವಾನಗಿ ರದ್ದುಪಡಿಸಿ, ಮುಚ್ಚಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ್ ಡಿ.ಎನ್. ಹೇಳಿದರು.

  ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗಪತ್ತೆ ತಂತ್ರವಿಧಾನಗಳ ನಿμÉೀಧ ಕಾಯ್ದೆ ಅನುμÁ್ಠನದ ಕುರಿತು ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

 ಪುರುಷ ಹಾಗೂ ಮಹಿಳೆಯರ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಈ ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿ ಅನುμÁ್ಠನಗೊಳಿಸಲು ಕ್ರಮಕೈಗೊಳ್ಳಲಾಗಿದೆ, ಸ್ಕ್ಯಾನಿಂಗ್ ಕೇಂದ್ರದವರು ಸ್ಕ್ಯಾನಿಂಗ್ ಯಂತ್ರ ಖರೀದಿಸುವ ಪೂರ್ವದಲ್ಲಿ ಇಲಾಖೆಯಿಂದ ಅನುಮತಿ ಪಡೆಯಬೇಕು, ಖರೀದಿಸಿದ ನಂತರ ಯಂತ್ರಗಳ ಅನುಸ್ಥಾಪನೆ ಮಾಡುವ ಮುನ್ನ ಅನುಮತಿ ಪಡೆಯುವುದು ಕಡ್ಡಾಯವಾಗಿದೆ, ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ಡೆ ಕಾನೂನನ್ನು ಅನುμÁ್ಠನಗೊಳಿಸದೆ ಇರುವುದು ಶಿಕ್ಷಾರ್ಹ ಅಪರಾಧವಾಗಿದೆ, ಅಧಿಕಾರಿಗಳು ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಸಂಸ್ಥೆಗಳನ್ನು ಭೇಟಿ ಮಾಡಿ ತಪಾಸಣೆ ಹಾಗೂ ಮೇಲ್ವಿಚಾರಣೆ ನಡೆಸಿ, ಕಾಯ್ದೆಯನ್ನು ಅನುμÁ್ಠನ ಮಾಡದ ಸಂಸ್ಥೆಗಳಿಗೆ ನೊಟೀಸ್ ನೀಡುವಂತೆ ಅವರು ಸೂಚಿಸಿದರು.

 ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷೆ ಡಾ. ರೇಖಾ ಮಾತನಾಡಿ, ಜಾಗತಿಕವಾಗಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು, ಗರ್ಭದಲ್ಲಿ ಇರುವ ಮಗು ಗಂಡು ಅಥವಾ ಹೆಣ್ಣು ಎಂದು ಪತ್ತೆ ಹಚ್ಚುವಂತಿಲ್ಲ, ಮಹಿಳೆ, ಆಕೆಯ ಪತಿ, ಅವರ ಸಂಬಂಧಿಕರು ಭ್ರೂಣಲಿಂಗ ಪತ್ತೆಗೆ ಒತ್ತಾಯಿಸಿದರೆ ಶಿಕ್ಷಗೆ ಒಳಪಡುತ್ತಾರೆ.  ಹುಟ್ಟುವಂತಹ ಮಕ್ಕಳು ಆರೋಗ್ಯಯುತವಾಗಿರಬೇಕು, ಮಗುವಿನ ಅಂಗವಿಕಲತೆ ಪತ್ತೆಗೆ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಕೆಲವರು ಲಿಂಗ ಪತ್ತೆಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ, ಭ್ರೂಣ ಲಿಂಗ ಪತ್ತೆ ಮಾಡುವುದಿಲ್ಲ ಎಂದು ಕಡ್ಡಾಯವಾಗಿ ನಾಮಫಲಕಗಳನ್ನು ಹಾಕಬೇಕು. ಭ್ರೂಣ ಲಿಂಗ ಪತ್ತೆ ಮಾಡುತ್ತಿರುವ ಬಗ್ಗೆ ಸಾಕ್ಷಾಧಾರಗಳ ಸಹಿತ ದೂರು ನೀಡಿದರೆ ಬಹುಮಾನ ನೀಡಲಾಗುವುದು ಎಂದರು.

ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ.ಲೋಕೆಶ್ ರೆಡ್ಡಿ, ಮಕ್ಕಳ ತಜ್ಞೆ ಡಾ.ಮುಕ್ತಾಂಭ ವಕೀಲರಾದ ಕುಮಾರಸ್ವಾಮಿ ಎಂ.ಎನ್, ಎನ್.ಜಿ.ಒ ರಾಣಿ ಚಂದ್ರಶೇಖರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರವಿಧಾನಗಳು :
ಜನಸಂಖ್ಯೆಯೊಂದರಲ್ಲಿ ಲಿಂಗಾನುಪಾತ ಎಂಬುದು ಪ್ರತಿ 1000 ಪುರುಷರ ಸಂಖ್ಯೆಗೆ ಇರುವ ಸ್ತ್ರೀಯರ ಸಂಖ್ಯೆಯನ್ನು ತಿಳಿಸುವ ಒಂದು ಮಾಪನ. ಹೆಣ್ಣು ಮತ್ತು ಗಂಡು ಸಮಾನ ಸ್ಥಾನಮಾನವನ್ನು ಅನುಭವಿಸುವ ಅಭಿವೃದ್ಧಿ ಹೊಂದಿದ ಸಮಾಜಗಳಲ್ಲಿ, ಸ್ತ್ರೀಯರು ಸಾಮಾನ್ಯವಾಗಿ ಪುರುಷರಿಗಿಂತ ಹೆಚ್ಚು ಸಂಖ್ಯೆಯಲ್ಲಿರುತ್ತಾರೆ. ಪ್ರತಿಕೂಲ ಲಿಂಗಾನುಪಾತವು ಸುಸ್ಥಿರ ಸಾಮಾಜಿಕ ಅಭಿವೃದ್ಧಿಯನ್ನು ಹೊಂದುವಲ್ಲಿ ಅಡಚಣೆಯೂ ಆಗಿರುತ್ತದೆ. ತಂತ್ರಜ್ಞಾನದ ದುರ್ಬಳಕೆಯು ಮಗುಗಳ ಲಿಂಗಾನುಪಾತವನ್ನು ವಿಕೃತಗೊಳಿಸುವಲ್ಲಿ ಮಹತ್ತರ ಕಾರಣವಾಗಿದೆ. ತಂತ್ರಜ್ಞಾನದ ಬಳಕೆಯನ್ನು ನಿಯಂತ್ರಿಸಲು, ದುರ್ಬಳಕೆಯನ್ನು ಹತ್ತಿಕ್ಕಲು, 1994ರಲ್ಲಿ ಜಾರಿಗೆ ತಂದ 2003ರಲ್ಲಿ ತಿದ್ದುಪಡಿ ಮಾಡಿ ಗರ್ಭಧಾರಣಾಪೂರ್ವ ಮತ್ತು ಪ್ರಸವಪೂರ್ವ ವರ್ಗೀಕರಣ ತಂತ್ರಗಳು (ಪಿಸಿ & ಪಿಎನ್ ಡಿಟಿ) ಅಧಿನಿಯಮವು ಲಿಂಗ ಆಯ್ಕೆ ತಪ್ಪಿಸಲು ಒಂದು ಪ್ರಮುಖ ಉಪಕರಣವಾಗಿದೆ.

ಪಿಸಿ & ಪಿಎನ್ ಡಿಟಿ ಅಧಿನಿಯಮದ ಶಿಕ್ಷೆ ಹಾಗೂ ದಂಡಗಳು: ನೊಂದಾಯಿತ ವೈದ್ಯಕೀಯ ವೃತ್ತಿ ಪರರು ವ್ಯತಿರಿಕ್ತವಾಗಿ ನಡೆದುಕೊಂಡಲ್ಲಿ, ಇವರ ಹೆಸರನ್ನು ಸಕ್ಷಮ ಪ್ರಾಧಿಕಾರಿಯು ಸೂಕ್ತ ಕ್ರಮಕ್ಕೆ ರಾಜ್ಯ ವೈದ್ಯಕೀಯ ಮಂಡಳಿಗೆ ವರದಿ ಸಲ್ಲಿಸಲಾಗುವುದು. ಘನ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದಾಗ, ಪ್ರಕರಣವು ಇತ್ಯರ್ಥವಾಗುವವರೆಗೂ ನೋಂದಣಿಯನ್ನು ಅಮಾನತ್ತಿನಲ್ಲಿದಲಾಗುವುದು. ಭ್ರೂಣದ ಲಿಂಗ ಪತ್ತೆ, ಭ್ರೂಣ ಲಿಂಗ ಆಯ್ಕೆ ಸಂಬಂಧ ಯಾವುದೇ ಜಾಹಿರಾತುಗಳ ಹಾಕಿದರೆ ಅವರಿಗೆ ಮೂರು ವರ್ಷಗಳ ಕಾಲದವರೆಗೆ ಜೈಲು ಶಿಕ್ಷೆ ಹಾಗೂ ರೂ.10,000 ದಂಡ ವಿಧಿಸಬಹುದು. ಭ್ರೂಣಲಿಂಗ ಪತ್ತೆ ಪ್ರಕರಣದಲ್ಲಿ ಮೊದಲ ಬಾರಿಯ ಅಪರಾಧಕ್ಕೆ 3 ವರ್ಷ ಜೈಲು ರೂ. 10,000 ದಂಡ ವೈದ್ಯಕೀಯ ಮಂಡಳಿಯಿಂದ ಐದು ವರ್ಷಗಳವರೆಗೆ ನೊಂದಣಿಯ ಅಮಾನತು, ಎರಡನೇ ಬಾರಿ ಅಪರಾಧ ಎಸಗಿದರೆ 5 ವರ್ಷಗಳವರೆಗೆ ಜೈಲು, ಶಾಶ್ವತವಾಗಿ ಅಮಾನತು, ರೂ 50,000 ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ್ ಡಿ.ಎನ್ ಹೇಳಿದರು.

ಪಿಸಿ&ಪಿಎನ್ ಡಿಟಿ ಅಧಿನಿಯಮ ನಿಯಂತ್ರಣ: ರಾಜ್ಯದಲ್ಲಿ ಪಿಸಿ&ಪಿಎನ್ ಡಿಟಿ ಅಧಿನಿಯಮವನ್ನು ಅನುμÁ್ಠನಗೊಳಿಸುವ ಉಸ್ತುವಾರಿಯನ್ನು ಕಾಯ್ದುಕೊಳ್ಳುವ ಸಲುವಾಗಿ, ರಾಜ್ಯ ಮತ್ತು ಜಿಲ್ಲಾಮಟ್ಟದ ಸೂಕ್ತ ಪ್ರಾಧಿಕಾರಗಳು ಮತ್ತು ಸಲಹಾ ಸಮಿತಿಗಳನ್ನು ರಚಿಸಲಾಗಿರುತ್ತದೆ. ಅಧಿನಿಯಮದ ಪ್ರಮುಖ ಉದ್ದೇಶವೆಂದರೆ ಗರ್ಭಧಾರಣೆಯ ನಂತರ ಅಥವಾ ಮೊದಲು ಲಿಂಗ ಆಯ್ಕೆಯ ಬಳಕೆಯನ್ನು ನಿμÉೀಧಿಸುವುದು ಮತ್ತು ಲಿಂಗ ಆಯ್ಕೆಯಿಂದ ಗರ್ಭಪಾತ ಮಾಡಿಸಿಕೊಳ್ಳುವ ಪ್ರಸವಪೂರ್ವ ವರ್ಗೀಕರಣ ತಂತ್ರದ ದುರ್ಬಳಕೆಯನ್ನು ನಿವಾರಿಸುವುದಾಗಿದೆ, ಅಲ್ಟ್ರಾಸೌಂಡ್ ಯಂತ್ರಗಳನ್ನು ಕೇವಲ ನೋಂದಾಯಿತ ಅಂಗಸಂಸ್ಥೆಗಳಿಗೆ ಮಾರಾಟ ಮಾಡುವ ನಿಯಂತ್ರಣ, ಜೆನೆಟಿಕ್ ಸಮಾಲೋಚನಾ ಕೇಂದ್ರಗಳು, ಜೆನೆಟಿಕ್ ಪ್ರಯೋಗಾಲಯಗಳು ಮತ್ತು ಜೆನೆಟಿಕ್ ಚಿಕಿತ್ಸಾ ಕೇಂದ್ರಗಳ ನಿಯಂತ್ರಣ ಮಾಡುವುದಾಗಿದೆ.

ಕಡ್ಡಾಯ ನೋಂದಣಿ: ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಸೌಲಭ್ಯ ಹೊಂದಿರುವ ಚಿಕಿತ್ಸಾಲಯಗಳು, ಜೆನೆಟಿಕ್ ಕ್ಲಿನಿಕ್‍ಗಳು, ಪ್ರಯೋಗಾಲಯಗಳು ಹಾಗೂ ವ್ಯೆದ್ಯಕೀಯ ತಳಿಶಾಸ್ತಜ್ಞ, ಸ್ತ್ರೀ ರೋಗತಜ್ಞ, ನೊಂದಾಯಿತ ವೈದ್ಯಕೀಯ ವೃತ್ತಿ ನಿರತರು, ರೇಡಿಯೋಲಾಜಿಸ್ಟ್, ಸೋನಾಲಾಜಿಸ್ಟ್ ಗಳು, ಈ ರೀತಿಯ ಪರೀಕ್ಷೆಗಳನ್ನು ಕೈಗೊಳ್ಳಬೇಕಾದರೆ ಸಂಬಂಧಪಟ್ಟ ಜಿಲ್ಲಾ ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

  ಯಾವುದೇ ವ್ಯಕ್ತಿಯು ಯಾವುದೇ ತೆರನಾದ ಚಿಕಿತ್ಸಾಲಯಗಳನ್ನು (ಜೆನೆಟಿಕ್ ಸಮಾಲೋಚನಾ ಕೇಂದ್ರಗಳು, ಜೆನೆಟಿಕ್ ಪ್ರಯೋಗಾಲಯಗಳು, ಜೆನೆಟಿಕ್ ಚಿಕಿತ್ಸಾಲಯ) ಅತ್ಯಾಧುನಿಕ ಯಂತ್ರೋಪಕರಣಗಳಾದ ಅಲ್ಟ್ರಾ ಸೋನೋಗ್ರಫಿ, ಇಮೇಜ್ ಮಿಷನ್, ಸ್ಕ್ಯಾನರ್ ಅಥವಾ ಭ್ರೂಣದಲ್ಲಿ ಲಿಂಗಪತ್ತೆ ಮಾಡುವ ಯಾವುದೇ ತೆರನಾದ ಯಂತ್ರೋಪಕರಣಗಳನ್ನು ಸ್ಥಾಪಿಸಬೇಕೆಂದರೆ ಆ ಕೇಂದ್ರ -ಚಿಕಿತ್ಸಾಲಯ-ಪ್ರಯೋಗಾಲಯವು ಕಡ್ಡಾಯವಾಗಿ ನೋಂದಣಿಯಾಗಿರಬೇಕು.  

Leave a Reply

Your email address will not be published. Required fields are marked *