ತುಮಕೂರು: ವಿದೇಶದಲ್ಲಿ ದೇಶದ ಮಾನ ಹರಾಜು ಹಾಕಿರುವ ರಾಹುಲ್ ಗಾಂಧಿಗೆ ದೇಶವನ್ನು ಆಳುವ ಯೋಗ್ಯತೆ ಇಲ್ಲ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹಮೇಗೌಡ ಹೇಳಿದರು.
ತುಮಕೂರು ಗ್ರಾಮಾಂತರದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ ಅದು ಎಂದಿಗೂ ಸಾಧ್ಯವಿಲ್ಲ, ದೇಶವನ್ನು ಸುಭದ್ರಗೊಳಿಸಲು ರಾಹುಲ್ ಕೈಯಲ್ಲಿ ಆಗುವುದಿಲ್ಲ, ದೇಶಕ್ಕೆ ಬಿಜೆಪಿ ಮತ್ತೊಮ್ಮೆ ಅನಿವಾರ್ಯ ಎಂದರು.
ಹೊರದೇಶಕ್ಕೆ ಹೋಗಿ ದೇಶದ ಪ್ರಜಾಪ್ರಭುತ್ವ ಟೀಕಿಸುವ ವ್ಯಕ್ತಿಯಿಂದ ದೇಶವನ್ನು ಸುಭದ್ರಗೊಳಿಸಲು ಸಾಧ್ಯವಿಲ್ಲ, ಭಾರತ ಆರ್ಥಿಕವಾಗಿ ಇಂದು ಬಲಿಷ್ಠವಾಗಲು ನರೇಂದ್ರ ಮೋದಿ ಅವರು ಕಾರಣ ಅವರಿಂದಲೇ ನಮ್ಮ ದೇಶ ಬಲಿಷ್ಠವಾಗಿದೆ, ಪಕ್ಕದ ರಾಷ್ಟ್ರಗಳು ಸೇರಿದಂತೆ ರಷ್ಯಾ, ಅಮೇರಿಕ ದೇಶಗಳು ಸಹ ಆರ್ಥಿಕ ದುಸ್ಥಿತಿ ಎದುರಿಸುತ್ತಿದ್ದರೂ ಭಾರತ ಆರ್ಥಿಕ ಹಿಂಜರಿತ ಕಂಡಿಲ್ಲ ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸುಭದ್ರ ಮತ್ತು ಸಮರ್ಥ ಆಡಳಿತ ನಡೆಸುತ್ತಿದ್ದಾರೆ ಎಂದರು.
ಹೊನ್ನಾವರ-ಬೆಂಗಳೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವೆ ಶೋಭಾ ಕರಂದ್ಲಾಜೆ ಕಾರಣ, ಈ ಯೋಜನೆಗೆ ಬಿಎಸ್‍ವೈ ಅವರ ಬೆಂಬಲ ನೀಡಿದ್ದರಿಂದ ಇಂದು ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದರು.
ರಾಜ್ಯ ಮತ್ತು ರಾಷ್ಟ್ರ ದಲ್ಲಿ ಸುಭದ ಸರ್ಕಾರ ತಡೆಯಲು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು, ಸುರೇಶ್ ಗೌಡರು ಉತ್ತಮ ಕೆಲಸಗಾರರು, ದೆವ್ವದಂತೆ ಈಲನ ಮಾಡುವ ಮೂಲಕ ನನಗೆ ಮನಸ್ಸು ಗೆದ್ದಿದ್ದಾರ, ಮತ್ತೊಮ್ಮೆ ಗ್ರಾಮಾಂತರದಲ್ಲಿ ಕ್ರಿಯಾಶೀಲರಾಗಿರುವ ಸುರೇಶ್ ಗೌಡರು ಗೆಲ್ಲಬೇಕು ಎಂದು ಕರೆ ನೀಡಿದರು.