ತುಮಕೂರು : ಬಿಜೆಪಿ ನೇತೃತ್ವದ ಕೇಂದ್ರದ ಎನ್.ಡಿ.ಎ. ನೇತೃತ್ವದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಆಡಳಿತ ಬಗ್ಗೆ ಸೆಪ್ಟಂಬರ್ 17ರಿಂದ ಅಕ್ಟೋಬರ್ 2ರವರೆಗೆ ಬಿಜೆಪಿ ಸೇವಾ ಪಾಕ್ಷಿಕ ಹಮ್ಮಿಕೊಂಡು ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ತಿಳಿಸಿದರು.
ಸೆಪ್ಟಂಬರ್ 17 ಪ್ರಧಾನ ನರೇಂದ್ರ ಮೋದಿರವರ ಹುಟ್ಟು ಹಬ್ಬವಾಗಿದ್ದು, ಅವರು 12 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಧಾನಿಮಂತ್ರಿಯಾಗಿ ಅವರು ಸಲ್ಲಿಸಿದ್ದ ಸೇವೆ ಜೀವನಶೈಲಿ ದೂರದೃಷ್ಟಿ ಯೋಜನೆಗಳು ಎಲ್ಲಾ ಸಮುದಾಯ, ವರ್ಗಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ದೇಶದ ಸಮಗ್ರ ಮತ್ತು ಸರ್ವಾಗೀಣ ಅಭಿವೃದ್ಧಿಗೆ ಒತ್ತು ನೀಡಿದ್ದು ಈ ಹಿನ್ನಲೆಯಲ್ಲಿ ಸೆಪ್ಟಂಬರ್ 17ರಂದು ರಕ್ತದಾನ ಶಿಬಿರ, ಸೆಪ್ಟಂಬರ್ 17ರಿಂದ ಅಕ್ಟೋಬರ್ 2ರವರೆಗೆ ಜೀವ ರಕ್ಷಕ ಲಸಿಕಾ ಆಭಿಯಾನ, ಸೆಪ್ಟಂಬರ್ 20ರಂದು ಮೋದಿಯವರ ಜೀವನ ಕುರಿತು ಪ್ರದರ್ಶನ, ಸೆಪ್ಟಂಬರ್21ರಂದು ಆರೋಗ್ಯ ತಪಾಸಣಾ ಶಿಬಿರ, 22, 23ರಂದು ಅರಳಿ ಸಸಿ ನೆಡುವ ಅಭಿಯಾನ, 24, 25ರಂದು ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ ಮತ್ತು ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ, 25ರಿಂದ 29ರವರೆಗೆ ಕೇಂದ್ರ ಸರ್ಕಾರದ ಫಲಾನುಭವಿಗಳ ನೋಂದಣಿ ಅಭಿಯಾನ, 26, 27ರಂದು ಅಮೃತ ಸರೋವರ, 28,29ರಂದು ಅಂಗನವಾಡಿ ಸೇವಾ ದಿವಸ, 30ರಂದು ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ, ಕ್ಷಯರೋಗ ನಿರ್ಮೂಲನಾ ಅಭಿಯಾನ ಮತ್ತು ಅಕ್ಟೋಬರ್ 2ರಂದು ಸ್ವಚ್ಛತಾ ಅಭಿಯಾನ ಮತ್ತು ಖಾದಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.