ಸಂವಿಧಾನದ ಮೂಲಭೂತ ಕರ್ತವ್ಯಗಳನ್ನು ಪಾಲಿಸಬೇಕು

ತುಮಕೂರು: ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಬಳಸಿಕೊಳ್ಳುವ ನಾವುಗಳು ಮೂಲಭೂತ ಕರ್ತವ್ಯಗಳು ಸಹ ಪಾಲಿಸಿ-ಅನುಸರಿಸಿಕೊಳ್ಳುವ ಮೂಲಕ ದೇಶದ ಸಂಪನ್ಮೂಲಗಳನ್ನು ಕಾಪಾಡುವುದು, ಸಂವಿಧಾನದ ಆದರ್ಶಗಳನ್ನು ಪಾಲಿಸುವುದು ಹಾಗೂ ಜವಬ್ದಾರಿಗಳು ನಿರ್ವಹಿಸುವುದನ್ನು ಮರೆಯಬಾರದು ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳು ಆದ ಡಾ.ಜಿ. ಪರಮೇಶ್ವರ್ ಅವರು ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಮುದಾಯಕ್ಕೆ ಹೇಳಿದರು.

ನಗರದ ಸಮೀಪದ ಸಿದ್ದಾರ್ಥನಗರದ ಶ್ರೀ ಸಿದ್ಧಾರ್ಥ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಏರ್ಪಟ್ಟ ಗಣರಾಜ್ಯೋತ್ಸವದಲ್ಲಿಂದು ಧ್ವಜಾರೋಹಣ ನೆರವೇರಿಸಿ, ಶಾಲಾ ವಿದ್ಯಾರ್ಥಿಗಳ ಪಥ ಸಂಚಲನ ವಂದನೆಗಳನ್ನು ಸ್ವೀಕರಿಸಿದರು. ನಂತರ ಸಂವಿಧಾನ ಶಿಲ್ಪಿ ಡಾ.ಬಿ.ಅರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ನಾವು ಸಮಾನತೆಯಿಂದ, ಎಲ್ಲ ವರ್ಗದ ಜನರು ಸಮಾನವಾಗಿ ಶಿಕ್ಷಣ ಕಲಿಯುತ್ತಿರುವುದೇ ಸಂವಿಧಾನ ಜಾರಿಗೆ ಬಂದಿದ್ದರಿಂದ. ದೇಶದಲ್ಲಿ ಸಂವಿಧಾನ ಜಾರಿಗೆ ಬಂದಮೇಲೆಯೇ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವತಂತ್ರ, ಧರ್ಮ, ಸಂಸ್ಕøತಿ, ಶಿಕ್ಷಣ ಮತ್ತು ಇತರೆ ಹಕ್ಕುಗಳು ಸಿಕ್ಕಿರುವುದು. ಅವುಗಳೆಲ್ಲವನ್ನೂ ಮುಕ್ತವಾಗಿ ಬಳಸಿಕೊಳ್ಳುವ ಮೂಲಕ ದೇಶದ ಅಭಿವೃದ್ದಿಗೆ ನಾವೆಲ್ಲರೂ ಕಾರಣೀಭೂತರಾಗೋಣ ಎಂದು ಡಾ. ಜಿ ಪರಮೇಶ್ವರ ರವರು ಕರೆ ನೀಡಿದರು.

ಭಾರತದ ಪ್ರಜೆಗಳನ್ನು ಆಳುವ -ಶಾಸಕಾಂಗ, ನ್ಯಾಯ ಒದಗಿಸುವ ನ್ಯಾಯಾಂಗ ಹಾಗೂ ಜನರಿಗಾಗಿ ಕೆಲಸ ಮಾಡುವ ಕಾಯಾರ್ಂಗಗಳು ಹೇಗಿರಬೇಕು, ಯಾವೆಲ್ಲ ನೀತಿ ನಿಯಮಗಳನ್ನು ಕಟ್ಟಳೆಗಳನ್ನು ಅವರು ಪಾಲಿಸಬೇಕು ಎಂಬೆಲ್ಲಾ ಸೂಚನೆಗಳನ್ನು ಹಾಕಿಕೊಟ್ಟ ಸಮಗ್ರ ಮಾಹಿತಿಗಳ ಗುಚ್ಛವೇ ಸಂವಿಧಾನ. ಅದರ ಆಶಯಗಳನ್ನು ನಾವು ಅರ್ಥ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ಆಗ ಮಾತ್ರ ದೇಶ-ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೋಯ್ಯಲು ಸಾಧ್ಯ ಎಂದು ಡಾ. ಜಿ ಪರಮೇಶ್ವರ ಅವರು ಅಭಿಪ್ರಾಯ ಪಟ್ಟರು.
ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ನಂಜುಂಡಪ್ಪರವರು, ಶಿಕ್ಷಣಾಧಿಕಾರಿಗಳಾದ ದೇವರಾಜು , ತಿಪ್ಪೇಸ್ವಾಮಿ , ಸಮನ್ವಯಾಧಿಕಾರಿ ದಯಾನಂದ್ , ಅಧೀಕ್ಷಕರಾದ ನಾಗರಾಜು, ಡಿಎಲ್‍ಇಡಿ ಪ್ರಾಂಶುಪಾಲರಾದ ಈಶ್ವರಪ್ಪ , ಮುಖ್ಯ ಶಿಕ್ಷಕಿ ವಾಸಂತಿ ಕುಲಕರ್ಣಿ, ಸಂಸ್ಕøತ ಪಾಠ ಶಾಲಾ ಮುಖ್ಯಶಿಕ್ಷಕಿ ಅನಿತಾ, ಮತ್ತು ಶಿಕ್ಷಕರೇತರ ಸಿಬಂದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಡಾ. ಜಿ ಪರಮೇಶ್ವರರವರು ಬಹುಮಾನ ವಿತರಿಸಿದರು.

Leave a Reply

Your email address will not be published. Required fields are marked *