ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ತುಮಕೂರಿಗೆ ಜ್ಯೋತಿಗಣೇಶ್-ಗುಬ್ಬಿಗೆ  ಯಾರ ಹೆಸರು ಇಲ್ಲ

ತುಮಕೂರು : ತೀವ್ರ ಪೈಪೋಟಿ, ಕುತೂಹಲ ಮೂಡಿಸಿದ್ದ ತುಮಕೂರು ಬಿಜೆಪಿ ಅಭ್ಯರ್ಥಿ ಯಾರಾಗುವರು ಎಂಬುದಕ್ಕೆ ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರಿಗೆ ನೀಡುವ ಮೂಲಕ ತೆರೆ ಎಳೆಯಲಾಗಿದೆ,  ಸೊಗಡು ಶಿವಣ್ಣನವರಿಗೆ ಹೈಕಮಾಂಡ್ ಅರ್ಧ ಚಂದ್ರ ತೋರಿಸಿದೆ.

ಇದರಿಂದ ತುಮಕೂರು ನಗರ ಕ್ಷೇತ್ರದಲ್ಲಿ    ಬಿಜೆಪಿಯಿಂದ  ಬಂಡಾಯ ತಾರಕಕ್ಕೇರುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತಾ ಇವೆ.
ಗುಬ್ಬಿ ಕ್ಷೇತ್ರದಲ್ಲಿ ,ಯಾರಿಗೂ ನೀಡಿಲ್ಲ,

ತೀವ್ರ ಪೈಪೆÇೀಟಿಯ ನಡುವೆಯು ಕುಣಿಗಲ್ ನಿಂದ ಡಿ.ಕೃಷ್ಣಕುಮಾರ್  ಅವರಿಗೆ ಟಿಕೆಟ್ ಪಡೆದಿದ್ದಾರೆ. ಮೂರು ಬಾರಿ ಸೋತಿರುವ ಕೃಷ್ಣಕುಮಾರ್ ಈ ಬಾರಿ ಅನುಕಂಪದ ಅಲೆಯ ಮೇಲೆ ಗೆಲ್ಲಬಹುದು ಎಂಬ ಲೆಕ್ಕಾಚಾರವಿರಬಹುದು, ಟಿಕೆಟ್ ಬಯಸಿ ಕಾಂಗ್ರೆಸ್‍ನಿಂದ ಬಿಜೆಪಿಗೆ ಬಂದಿದ್ದ ಮಾಜಿ  ಸಂಸದ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ನೀಡದಿರುವುದು, ಅವರಿಗೆ ತೀವ್ರ ನಿರಾಸೆ ಉಂಟಾಗಿದೆ

.

ಮುದ್ದಹನುಮೇಗೌಡರ ಸಾಪ್ಟ್ ಕಾರ್ನಾರ್  ಸ್ವಭಾವ ಅವರಿಗೆ ಮುಳುವಾಯಿತೆ ಎಂಬದು ಚರ್ಚೆಗೆ ಗ್ರಾಸವಾಗಿದೆ. ಮೂಂಬರುವ ಲೋಕಸಭಾ ಟಿಕೆಟ್‍ನ್ನು ಬೆಂಗಳೂರು ಗ್ರಾಮಾಂತರಕ್ಕೆ ನೀಡುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

ಇನ್ನುಳಿದಂತೆ ತುರುವೇಕೆರೆ ಮಸಾಲೆ ಜಯರಾಮ್, ಚಿಕ್ಕನಾಯಕನಹಳ್ಳಿ ಜೆ.ಸಿ.ಮಾಧುಸ್ವಾಮಿ, ತಿಪಟೂರು ಬಿ.ಸಿ.ನಾಗೇಶ್, ತುಮಕೂರು ಗ್ರಾಮಾಂತರ ಬಿ.ಸುರೇಶ್ ಗೌಡ, ಕೊರಟಗೆರೆ ಅನಿಲ್ ಕುಮಾರ್,  ಮಧುಗಿರಿ ಎಲ್.ಸಿ.ನಾಗರಾಜು, ಪಾವಗಡ ಕೃಷ್ಣನಾಯ್ಕ್,  ಶಿರಾ ಹಾಲಿ ಶಾಸಕ ರಾಜೇಶ್ ಗೌಡ, ಅವರುಗಳಿಗೆ ಟಿಕೆಟ್ ನೀಡಲಾಗಿದೆ.

ಮಾಜಿ ಸಚಿವ ಸೊಗಡು ಶಿವಣ್ಣನವರು ಈ ಬಾರಿ ನನಗೆ ಟಿಕೆಟ್ ದೊರೆಯುತ್ತದೆ, ಪಕ್ಷವನ್ನು ಕಟ್ಟಿ ಬೆಳೆಸಿದ ಪ್ರಮುಖನಾಗಿದ್ದು, ಆರ್.ಎಸ್.ಎಸ್.ನನ್ನ ಬೆಂಬಲಕ್ಕೆ ನಿಲ್ಲಲಿದೆ ಎಂಬುದು ಹುಸಿಯಾಗಿದೆ.
ಈಗಾಗಲೇ ಸೊಗಡು ಶಿವಣ್ಣನವರು ಜೋಳಿಗೆ ಹಿಡಿದು ಪ್ರಚಾರ ಆರಂಭಿಸಿದ್ದು, ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ಅವರು ಹೇಳಿಕೊಂಡಿದ್ದಾರೆ, ಅವರ ಅಭಿಮಾನಿಗಳು ಹೇಳಿದ್ದಾರೆ.

ಈಗ ತುಮಕೂರು ನಗರದ ಬಿಜೆಪಿಗೆ ಬಂಡಾಯವೇ ದೊಡ್ಡ ತಲೆ ನೋವಾಗಿದ್ದು, ಮಾಜಿ ಸಚಿವ ಸೊಗಡು ಶಿವಣ್ಣನವರಿಗೆ ಇದು ಕೊನೆಯ ಚುನಾವಣೆಯಾಗಿದ್ದು, ಮಾಡು ಇಲ್ಲವೆ ಮಡಿ ಎನ್ನುವಂತಾಗಿದ್ದು, ತಮ್ಮ ಜನಪ್ರಿಯತೆಯನ್ನು ಬಂಡಾಯವಾಗಿ ನಿಂತು ಒರೆಗಲ್ಲಿಗೆ ಹಚ್ಚಲಿದ್ದಾರೆಯೆ ಎಂಬುದನ್ನು ಕಾದು ನೋಡಬೇಕಾಗಿದೆ.

ಒಟ್ಟು 189 ಕ್ಷೇತ್ರಗಳಿಗೆ ತನ್ನ ಹುರಿಯಾಳುಗಳನ್ನು ಅಂತಿಗೊಳಿಸಿ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. 224 ಕ್ಷೇತ್ರಗಳ ಟಿಕೆಟ್ ಹಂಚಿಕೆಯಲ್ಲಿ ತೊಂದರೆ ಇಲ್ಲ ಅಂತಲೂ ಹೇಳಿಕೊಂಡಿದೆ.

35 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಾಕಿ ಉಳಿಸಿಕೊಂಡಿರುವ ಬಿಜೆಪಿ. 52 ಹೊಸ ಮುಖಗಳಿಗೆ ಮಣೆ, 32 ಒಬಿಸಿ, 16 ಎಸ್‌ಟಿ, 30ಪರಿಶಿಷ್ಟ ಜಾತಿ,

9 ವೈದ್ಯರು, 1ಐಪಿಎಸ್, 1 ಐಎಎಸ್, 31 ಸ್ನಾತಕ ಪದವಿಧರರು, 8 ಮಹಿಳೆಯರು 5, ವಕೀಲರು, 3 ನಿವೃತ್ತ ಸರ್ಕಾರಿ ನೌಕರರಿಗೆ ಟಿಕೆಟ್ ನೀಡಲಾಗಿದೆ.

-ವೆಂಕಟಾಚಲ. ಹೆಚ್.ವಿ.

Leave a Reply

Your email address will not be published. Required fields are marked *