ಹೆಬ್ಬಾಕ : ಮನೆ ಕುಸಿತ -ಸ್ಥಳಕ್ಕೆ ಬಾರದ ಗ್ರಾ.ಪಂ. ಅಧಿಕಾರಿಗಳು-ಬೀದಿಪಾಲಾದ ಕುಟುಂಬ

ತುಮಕೂರು: ತುಮಕೂರು ತಾಲ್ಲೂಕಿನ ಹೆಬ್ಬಾಕದಲ್ಲಿ ವಾರದಿಂದ ಬಿದ್ದ ಮಳೆಗೆ ಮನೆಯೊಂದು ಕುಸಿದು ಬಿದ್ದ ಪರಿಣಾಮ ಕುಟುಂಬವೊಂದು ಬೀದಿ ಪಾಲಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ನಿರ್¯ಕ್ಷ್ಯ ತೋರಿದ್ದರಿಂದ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ತುಮಕೂರು ತಾಲ್ಲೂಕಿನ ದಲಿತ ಕಾಲೋನಿಯ ದೊಡ್ಡಯ್ಯ – ಲಕ್ಷ್ಮಮ್ಮ ಅವರ ಮನೆಯು ವಾರದಿಂದ ಬಿದ್ದ ವಿಪರೀತ ಮಳೆಗೆ ಮಂಗಳವಾರ ರಾತ್ರಿ ಕುಸಿದು ಬಿದಿದ್ದು, ದಂಪತಿಗಳಿಬ್ಬರು ಆ ರಾತ್ರಿ ಮಗನ ಮನೆಗೆ ಹೋಗಿದ್ದರಿಂದ ಪ್ರಾಣಾಪಯದಿಂದ ಪಾರಾಗಿದ್ದಾರೆ.

ಮಂಗಳವಾರ ರಾತ್ರಿಯೇ ಮನೆ ಕುಸಿದಿದ್ದರೂ, ಈ ಸಂಬಂಧ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದರೂ ಇದುವರೆವಿಗೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ದಂಪತಿಗಳಿಬ್ಬರೂ ಈಗ ಬೀದಿ ಪಾಲಾಗಿದ್ದು, ಮನೆಯ ವಸ್ತುಗಳೆಲ್ಲಾ ಮಣ್ಣಿನಡಿಯಲ್ಲಿ ಸೇರಿ ಹೋಗಿವೆ.

ಸಂಬಂಧ ಪಟ್ಟ ಅಧಿಕಾರಿಗಳು ಬುಧವಾರ ಬೆಳಿಗ್ಗೆಯಿಂದ ಸ್ಥಳಕ್ಕೆ ಆಗ ಬರುತ್ತೇವೆ-ಈಗ ಬರುತ್ತೇವೆ ಎಂದು ಕಾಲ ದೂಡುತ್ತಿದ್ದಾರೆ.

ಜಿಲ್ಲಾಧಿಕಾರಿಗಳು ಎಲ್ಲಿಯೇ ಮಳೆಗೆ ಅನಾಹುತ ಸಂಬಂಧಿಸಿರೂ ಕೂಡಲೇ ಸ್ಪಂಧಿಸಲು ಸೂಚಿಸಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ತೋರಿದ್ದರಿಂದ ದೊಡ್ಡಯ್ಯ-ಲಕ್ಷ್ಮಮ್ಮ ಬೀದಿಪಾಲಾಗಿದ್ದಾರೆ. ಅವರಿಗೆ ಅಧಿಕಾರಿಗಳು ಕನಿಷ್ಟ ಭೇಟಿ ನೀಡಿ ಧೈರ್ಯ ತುಂಬುವ ಕೆಲಸವನ್ನೂ ಮಾಡಿಲ್ಲ.
ಇದೂವರೆವಿಗೂ ಯಾವ ಜನಪ್ರತಿನಿಧಿಗಳು ಸಹ ಸ್ಥಳಕ್ಕೆ ಭೇಟಿ ನೀಡಿಲ್ಲ.

Leave a Reply

Your email address will not be published. Required fields are marked *