ತುಮಕೂರು : ಜಿಲ್ಲೆಯಲ್ಲಿ ಜಾನುವಾರಗಳು ಚರ್ಮಗಂಟು ರೋಗದಿಂದ ಸಾವನ್ನಪ್ಪಿದ ಜಾನುವಾರುಗಳ ಮಾಲೀಕರಿಗೆ 40 ಸಾವಿರದಿಂದ 50 ಸಾವಿರದವರೆಗೆ ಪರಿಹಾರ ನೀಡುವಂತೆ ಕೆಪಿಸಿಸಿ ಕಾರ್ಯದರ್ಶಿ ಮುರಳೀಧರ ಹಾಲಪ್ಪನವರು ಸರ್ಕಾರವನ್ನು ಒತ್ತಾಯಿಸಿದರು.
ಅವರು ಅಕ್ಕಟೋಬರ್ 20ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತರಬೇನಹಳ್ಳಿ ಗ್ರಾಮದಲ್ಲಿ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು ಹಾಗೂ ತುರುವೇಕೆರೆ ತಾಲ್ಲೂಕಿನ ರೈತರೊಂದಿಗೆ ಸಂವಾದ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಜಾನುವಾರುಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಚರ್ಮಗಂಟು ರೋಗ, ಕುರಿಗಳಲ್ಲಿ ನೀಲಿ ನಾಲಿಗೆ ರೋಗ ಮತ್ತು ಅಡಿಕೆ – ತೆಂಗು – ಬಾಳೆ ಬೆಳೆಗಾರರರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ದೇಶದ ಆರ್ಥಿಕ ಚಟುವಟಿಕೆಗೆ ಕೃಷಿ ಬೆನ್ನಲುಬಾದರೆ, ಕೃಷಿಗೆ ಜಾನುವಾರುಗಳೇ ಬೆನ್ನೆಲುಬು. ಜಾನುವಾರುಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟು (ಲಂಪಿಸ್ಕಿನ್) ರೋಗ ಕೇವಲ ಜಾನುವಾರುಗಳನ್ನμÉ್ಟೀ ಅಲ್ಲ, ರೈತರ ಬದುಕಿನ ಮೇಲೂ ಗದಾಪ್ರಹಾರ ಮಾಡಿದೆ ರೋಗಕ್ಕೆ ತುತ್ತಾಗಿ ಸಾವಿಗೀಡಾಗುತ್ತಿರುವ ರಾಸುಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ರೈತರಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ 3400 ಗ್ರಾಮಗಳಲ್ಲಿ 80,500 ಜಾನುವಾರುಗಳು(ರಾಸುಗಳು) ಚರ್ಮಗಂಟು (ಲಂಪಿಸ್ಕಿನ್) ರೋಗಕ್ಕೆ ತುತ್ತಾಗಿದ್ದು, 2,900 ಜಾನುವಾರುಗಳು ಮೃತಪಟ್ಟಿವೆ ಎಂದು ಸಂವಾದದಲ್ಲಿ ಭಾಗವಾಹಿಸಿದ್ದ ರೈತರುಗಳು ಆತಂಕ ವ್ಯಕ್ತ ಪಡಿಸಿ, ಮೃತ ಜಾನುವಾರುಗಳಿಗೆ ಸೂಕ್ತ ಪರಿಹಾರ ನೀಡುತ್ತಿಲ್ಲ, ಕೇವಲ 4ಸಾವಿರದಿಂದ 5ಸಾವಿರದವರೆಗ ನೀಡಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ರಾಸುಗಳಲ್ಲಿ ಚರ್ಮಗಂಟು ರೋಗ ಹಾಗೂ ಕುರಿಗಳಲ್ಲಿ ನೀಲಿ ನಾಲಿಗೆ ರೋಗ ವ್ಯಾಪಕವಾಗಿ ಹರಡುತ್ತಿವೆ. ಕಳೆದ ವರ್ಷ ತುಮಕೂರು ಜಿಲ್ಲೆಯಾದ್ಯಂತ 5,73,298 ರಾಸುಗಳಿದ್ದು, ಕೇವಲ 9,800 ರಾಸುಗಳಿಗೆ ಲಸಿಕೆ ಹಾಕಲಾಗಿದೆ. ರೋಗ ತಡೆಯಲು ಸೂಕ್ತ ಲಸಿಕೆ ಕಂಡುಹಿಡಿಯಬೇಕು. ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕುವ ಕಾರ್ಯಕ್ರಮ ಇನ್ನೂ ಮುಕ್ತಾಯವೇ ಆಗಿಲ್ಲ, ಅಷ್ಟರಲ್ಲೇ ಈ ಪಿಡುಗು ಕಾಡುತ್ತಿದೆ ಕಾಡುತ್ತಾ ಇದೆ ಎಂದು ರೈತರು ಆತಂಕ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ರೈತರನ್ನು ಕುರಿತು ಮಾತನಾಡಿದ ಮುರಳೀಧರ ಹಾಲಪ್ಪ ಮಕ್ಕಳಂತೆ ಸಾಕಿದ ಜಾನುವಾರುಗಳು ತಮ್ಮ ಕಣ್ಮುಂದೆ ಸಾವಿಗೀಡಾಗುತ್ತಿರುವುದನ್ನು ಕಂಡು ರೈತರು ಆಂತಕಕ್ಕೆ ಒಳಗಾಗಿದ್ದಾರೆ. ತಮ್ಮ ಕೃಷಿ ಹಾಗೂ ಕುಟುಂಬದ ನೊಗ ಹೊರುವ ಜಾನುವಾರುಗಳಿಗೆ ಬಂದಿರುವ ಈ ಪರಿಸ್ಥಿತಿ, ಆಧಾರ ಸ್ತಂಭವಾಗಿರುವ ಜಾನುವಾರುಗಳು ಕುಸಿದುಬಿದ್ದಾಗ ಕುಟುಂಬವನ್ನು ಮುನ್ನಡೆಸುವುದಾದರೂ ಹೇಗೆ, ಭಾವನಾತ್ಮಕವಾಗಿಯೂ ಜರ್ಝರಿತರಾಗಿದ್ದಾರೆ ಎಂದು ಹೇಳಿದ್ದಾರೆ.
ಕೆಲವು ಕಡೆ ರೋಗದಿಂದ ಮೃತಪಟ್ಟ ಜಾನುವಾರುಗಳ ಅಂತ್ಯಕ್ರಿಯೆ ಮಾಡಲು ಕೂಡ ರೈತರು ಪರದಾಡಿದ್ದಾರೆ. ಕಳೇಬರವನ್ನು ಹೂಳಲು ದೊಡ್ಡ ಗುಂಡಿ ತೆಗೆಸಬೇಕಾಗುತ್ತದೆ. ಇದಕ್ಕಾಗಿ ₹ 4,000 ದಿಂದ ₹ 5,000 ರವರೆಗೆ ಖರ್ಚಾಗುತ್ತದೆ. ಮೃತ ರಾಸುಗಳ ಮಾಲೀಕರಿಗೆ ತಲಾ 40,000, ಎತ್ತುಗಳಿಗೆ ತಲಾ 50,000 ಮತ್ತು ಕರುಗಳಿಗೆ ತಲಾ 16,000 ಪರಿಹಾರ ನೀಡಬೇಕು.
ಹೈನೋದ್ಯಮಕ್ಕೆ ಹೊಡೆತ: ಹಸು ಮತ್ತು ಎಮ್ಮೆಗಳಲ್ಲಿ ಈ ರೋಗ ಕಂಡುಬಂದಿರುವುದರಿಂದ ಹೈನೋದ್ಯಮಕ್ಕೆ ಪೆಟ್ಟು ಬಿದ್ದಿದೆ. ಇದು ಕೆಲವು ಪ್ರದೇಶಗಳಲ್ಲಿ ಹಾಲು ಮಾರಾಟದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸದ್ಯ 4,212 ಪಶು ಆಸ್ಪತ್ರೆಗಳಿದ್ದು, ಸದ್ಯ 2,100 ವೈದ್ಯರು ಮಾತ್ರ ಇದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ವೈದ್ಯರ ಕೊರತೆ ನೀಗಿಸಬೇಕು. ರೋಗ ಬಂದ ನಂತರ ಲಸಿಕೆ ಹಾಕುವುದಿಲ್ಲ. ಇದಕ್ಕೆ ಪರಿಹಾರ ತಕ್ಷಣ “ಚರ್ಮ ಗಂಟು ರೋಗ ಮುಕ್ತ ಲಸಿಕೆ” ಹಾಕಿಸಬೇಕು. ರೈತರು ಪಾಲಿಸಬೇಕಾದ ಮುನ್ನೆಚ್ಚರಿಕೆಗಳನ್ನು ಮತ್ತು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ರೈತರಿಗೆ ತಿಳಿಸಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಂವಾದದಲ್ಲ್ಲಿ ಹೊನ್ನಗಿರಿಗೌಡ, ಕಾಂತರಾಜು, ಚಂದ್ರಶೇಖರ್, ಕೃμÉ್ಣಗೌಡ, ರೈತರಾದ ಷಡಕ್ಷರಿ, ಮಹಾಲಿಂಗಯ್ಯ, ರಂಗಸ್ವಾಮಿ, ಉಮೇಶ್ ಗೌಡ, ಲೋಕೇಶ್, ಮಂಜುನಾಥ್, ಪುಟ್ಟಕಾಮಣ್ಣ, ಶಂಕರಣ್ಣ, ಸ್ವರ್ಣಕುಮಾರ್, ಗಂಗಾಧರ್, ಗೋವಿಂದರಾಜು, ಚಿದಾನಂದಮೂರ್ತಿ, ಆಶ್ವತ್ಥನಾರಾಯಣ ಹಲವರು ಉಪಸ್ಥಿತರಿದ್ದರು.