ಬೆಂಗಳೂರಿನ ಬಿಎಂಟಿಸಿಯ ಟ್ರಾಪಿಕ್ ಕಂಟ್ರೋಲರ್ ಎನ್.ಎಸ್.ರಮೇಶ್ ಅವರು ತಮ ಹುಟ್ಟೂರಾದ ಚಿಕ್ಕಮಗಳುರು ಜಿಲ್ಲೆ, ಕಡೂರು ತಾಲ್ಲೂಕಿನ ನಿಡವಳ್ಳಿಯಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಮನೆ (ಎಲ್.ಕೆ.ಜಿ.) ಮಕ್ಕಳಿಗೆ ಶಾಲಾ ಸಮವಸ್ತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀನಿವಾಸಮೂರ್ತಿ, ಶಿಕ್ಷಕರಾದ ಹೇಮಲತ, ಪ್ರಸನ್ನಕುಮಾರ್, ನಂಜುಂಡಪ್ಪ, ಓಂಕಾರಮ್ಮ, ಗಿರೀಶ್ ಹಾಗೂ ಗ್ರಾ.ಪಂ.ಸದಸ್ಯರಾದ ರೇವಣ್ಣ ಎನ್.ಡಿ., ಎಸ್‍ಡಿಎಂಸಿ ಅಧ್ಯಕ್ಷರಾದ ಮಂಜುನಾಥ.ಎ.ಎಂ., ಮಕ್ಕಳ ಮನೆ ಧ್ಯಕ್ಷರಾದ ವಿಶಾಲಾಕ್ಷಿ ಬಸವರಾಜು, ಶಾಲೆಯ ಹಳೆ ವಿದ್ಯಾರ್ಥಿ ರಂಗನಾಥ್ ಉಪಸ್ಥಿತರಿದ್ದರು.