
ತುಮಕೂರು: ವೀರಶೈವ ಸಮಾಜ ಒಗ್ಗಟ್ಟಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು.ನಮ್ಮಲ್ಲಿ ನಾವೇ ಭಿನ್ನಮತ ಮೂಡಿಸಿಕೊಂಡರೆ ಏನನ್ನು ಸಾಧಿಸು ಸಾಧ್ಯವಿಲ್ಲ.ಸ್ವಲ್ಪ ಯಾಮಾರಿದರೂ ಇದದ್ದನ್ನು ಕಿತ್ತುಗೊಂಡು ಬಿಡುತ್ತಾರೆ.ಇದು ನಾನು ನಿಮಗೆ ನೀಡುತ್ತಿರುವ ಎಚ್ಚರಿಕೆ.ನನ್ನ ಕಾಲ ಮುಗಿಯಿತು.ಈಗಾಗಲೇ ಪಕ್ಷದ ಹೈಕಮಾಂಡ್‍ಗೆ ಮುಂದಿನ ಬಾರಿ ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿದ್ದೇನೆ.ಮುಂದೆ ಯಾರೇ ಬರಲಿ ಅವರ ಸಹಾಯ ಪಡೆದು, ಸಮಾಜವನ್ನು ಅಭಿವೃದ್ದಿಯ ಕಡೆಗೆ ತೆಗೆದುಕೊಂಡು ಹೋಗಿ ಎಂದು ಸಂಸದ ಜಿ.ಎಸ್ ಬಸವರಾಜು ಮಾರ್ಮಿಕವಾಗಿ ಹೇಳಿದರು.
ಅವರು ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿವತಿಯಿಂದ ನಗರದ ಗಂಗಸಂದ್ರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ವೀರಶೈವ-ಲಿಂಗಾಯಿತ ರುದ್ರಭೂಮಿ ಲೋಕಾರ್ಪಣೆ ಹಾಗೂ ಶ್ರೀಸಿದ್ದೇಶ್ವರಸ್ವಾಮಿ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ,ಅಟವಿ ಸುಕ್ಷೇತ್ರದ ಶ್ರೀ ಅಟವಿ ಶಿವಲಿಂಗಸ್ವಾಮೀಜಿ, ಹಿರೇಮಠದ ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಾಕನಹಳ್ಳಿ ಜಂಗಮ ಮಠದ ಶ್ರೀಗಂಗಾಧರಸ್ವಾಮೀಜಿ,ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿಸಿ ಮಾತನಾಡುತ್ತಿದ್ದರು.
ಭಾರತೀಯ ಸನಾತನ ಸಂಸ್ಕøತಿಯಲ್ಲಿ ರುದ್ರಭೂಮಿಗಳಿಗೆ ವಿಶೇಷ ಸ್ಥಾನವಿದೆ.ಎಲ್ಲರೂ ಕೊನೆಗೆ ಒಂದು ದಿನ ಹೋಗಲೇಬೇಕು.ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಯ ಅಧ್ಯಕ್ಷರಾದ ಟಿ.ಬಿ.ಶೇಖರ್, ಉಪಾಧ್ಯಕ್ಷರಾದ ಚಂದ್ರಮೌಳಿ ಅವರುಗಳು ರುದ್ರಭೂಮಿಯ ಪ್ರಸ್ತಾಪ ಮಾಡಿದ್ದರ ಹಿನ್ನೇಲೆಯಲ್ಲಿ ಗಂಗಸಂದ್ರದ ಶಿಂಷಾ ನದಿಯ ದಡದಲ್ಲಿ ಸುಮಾರು 5 ಎಕರೆ ಜಾಗದಲ್ಲಿ ತಲೆ ಎತ್ತಿರುವ ವೀರಶೈವ-ಲಿಂಗಾಯಿತ ರುದ್ರಭೂಮಿ ನಿರ್ಮಾಣಗೊಂಡಿದೆ. ವೀರಶೈವರಿ ಗಲ್ಲದೆ ಬೇರೆ ಸಮುದಾಯಗಳಿಗೂ ಇದರ ಅಕ್ಕ,ಪಕ್ಕದಲ್ಲಿ ಭೂಮಿ ನೀಡಲಾಗಿದೆ.ಇದರ ಸದ್ಬಳಕೆಯಾಗಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಟಿ.ಬಿ.ಶೇಖರ್,ಊರು ಬೆಳೆದು,ಜನಸಂಖ್ಯೆ ಹೆಚ್ಚಾದಂತೆ ಈಗಿರುವ ರುದ್ರಭೂಮಿ ಕಿರಿದಾದ ಹಿನ್ನೆಲೆಯಲ್ಲಿ ಊರಿನ ಹೊರವಲಯದಲ್ಲಿ ದೊಡ್ಡದಾದ ರುದ್ರಭೂಮಿಯ ಅಗತ್ಯವಿತ್ತು.ಹಾಗಾಗಿ ಇಂದು ಗಂಗಸಂದ್ರದಲ್ಲಿ ಸಂಸದ ಜಿ.ಎಸ್.ಬಸವರಾಜು, ಮಾಜಿಸಚಿವ ಸೊಗಡು ಶಿವಣ್ಣ ಅವರ ಸಹಕಾರದಿಂದ ಈ ಭೂಮಿಯನ್ನು ಪಡೆದು ವೀರಶೈವ ರುದ್ರಭೂಮಿಗೆ ಚಾಲನೆ ನೀಡಲಾಯಿತು. ಸಂಸದರು,ಶಾಸಕರ ನಿಧಿ ಹಾಗೂ ಸಾರ್ವಜನಿಕರ ಧೇಣಿಯಿಂದ ಇಂದು ಸುಸಜ್ಜಿತ ರುದ್ರಭೂಮಿ ತಲೆ ಎತ್ತಿದೆ.ಇಲ್ಲಿಗೆ ಬಂದವರಿಗೆ ಒಂದು ಆಹ್ಲಾದಕರ ವಾತಾವರಣ ನಿರ್ಮಾಣಕ್ಕೆ ರುದ್ರವನ, ಶ್ರೀಸಿದ್ದೇಶ್ವರಸ್ವಾಮಿ ದೇವಾಲಯ ಇದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ.ಶ್ರೀಶಿವಾನಂದಶಿವಾಚಾರ್ಯ ಸ್ವಾಮೀಜಿ, ಗಡಿನಾಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ,ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿದರು.
ವೇದಿಕೆಯಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್,ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷ ಚಂದ್ರಮೌಳಿ, ಮುಖಂಡರಾದ ಸಿ.ವಿ.ಮಹದೇವಯ್ಯ, ಕೆ.ಜೆ.ರುದ್ರಪ್ಪ, ಮೋಹನ್‍ಕುಮಾರ್ ಪಟೇಲ್, ಎಸ್.ಎಂ.ರಾಜು, ವೀಣಾ, ಕೋರಿ ಮಂಜುನಾಥ್, ಭಸ್ಮಾಂಗಿ ರುದ್ರಯ್ಯ, ಓಹಿಲೇಶ್ವರ್, ಪಾಲಿಕೆ ಸದಸ್ಯರಾದ ಮಂಜುಳ ಆದರ್ಶ, ಮಹೇಶ್, ದೀಪಶ್ರೀ ಮಹೇಶ್ ಸೇರಿದಂತೆ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನಿದೇರ್ಶಕರುಗಳು ಉಪಸ್ಥಿತರಿದ್ದರು.