
ತುಮಕೂರು : ತುಮಕೂರಿನ ಆರ್.ಟಿ. ನಗರದಲ್ಲಿರುವ ಮೈಸೂರಿನ ಕೆ.ಐ.ಎ.ಡಿ.ಬಿ ಇ ಇ ಆಗಿ ಕಾರ್ಯನಿರ್ವಹಿಸುತ್ತಿರುವ ನರಸಿಂಹಮೂರ್ತಿ ಎಂಬುವರ ತುಮಕೂರಿನ ಆರ್ ಟಿ ನಗರದಲ್ಲಿರುವ ಮನೆ ಮೇಲೆ ಲೋಕಯುಕ್ತ ಅಧಿಕಾರಿಗಳ ದಾಳಿ ನಡೆಸಲಾಗಿದೆ.
ಲೋಕಯುಕ್ತ ಅಧಿಕಾರಿಗಳು ಸುದೀರ್ಘವಾಗಿ ಕಾಗದ ಪತ್ರಗಳು ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿರುವ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಇಲಾಖೆ ಅಧಿಕಾರಿಗಳು ಅವುಗಳನ್ನು ತೂಕ ಮಾಡುವಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ ಸುಮಾರು ಐದು ವಾಹನಗಳಲ್ಲಿ ದಿಢೀರ್ ಆಗಮಿಸಿದ ಲೋಕಾಯುಕ್ತ ಡಿಎಸ್‍ಪಿಗಳಾದ ಮಂಜುನಾಥ್ ಹಾಗೂ ಹರೀಶ್ ತಂಡದಿಂದ ಶೋಧ ನಡೆಯುತ್ತಿದೆ. ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮಧ್ಯಾಹ್ನದವರೆಗೆ ಪರಿಶೀಲನೆ ಕಾರ್ಯ ಮುಂದುವರೆಯಲಿದೆ ಎಂದು ಲೋಕಾಯುಕ್ತ ಪೆÇಲೀಸ್ ಇಲಾಖೆ ಮೂಲಗಳು ತಿಳಿಸಿವೆ. ಹಲವು ದಿನಗಳಿಂದ ಅಧಿಕಾರಿ ನರಸಿಂಹಮೂರ್ತಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿದ್ದವು. ಪದೇ ಪದೇ ಇಂತಹ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.