ತುಮಕೂರು : ರಾಜ್ಯದಲ್ಲಿ ಇಂದಿನಿಂದ ‘ವಿಜಯ ಸಂಕಲ’್ಪ ಯಾತ್ರೆಯನ್ನು ಪ್ರಾರಂಭಿಸಿದ್ದು, ನಮ್ಮ ಪಕ್ಷ 130 ಸೀಟುಗಳನ್ನು ಗೆಲ್ಲುವುದರ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರೆ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು.
ಇಂದು ಸಿದ್ಧಗಂಗ ಮಠದ ಡಾ.ಶ್ರೀ ಶಿವಕುಮಾರಸ್ವಾಮಿಗಳ 4ನೇ ಪುಣ್ಯ ಸ್ಮರಣೆಯ ಅಂಗವಾಗಿ ಶ್ರೀಗಳ ಗದ್ದುಗೆಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ರಾಜ್ಯದ ವಿವಿಧೆಡೆ ವಿಜಯಸಂಕಲ್ಪಯಾತ್ರೆಯನ್ನು ಇಂದಿನಿಂದ 9 ದಿನಗಳವರೆಗೆ ಹಮ್ಮಿಕೊಂಡಿದ್ದೇವೆ, ನಮ್ಮ ಸಾಧನೆಗಳ ಬಗ್ಗೆ ಮನೆ ಮನೆಗೆ ತಿಳಿಸುವ ಅಭಿಯಾನ ಇದಾಗಿದೆ ಎಂದರು.
ನಡೆದಾಡುವ ದೇವರೆಂದೇ ಹೆಸರು ಪಡೆದಿರುವ ಶಿವಕುಮಾರಸ್ವಾಮಿಗಳು ಮತ್ತು ಬಸವಣ್ಣನವರು ಕಾಯಕವೆ ಕೈಲಾಸ ಎಂದು ಕಾಯಕ ಮಾಡಿ ತೋರಿಸಿದ್ದಾರೆ, ಈ ದಿನವನ್ನು ದಾಸೋಹದ ದಿನವನ್ನಾಗಿ ತಾತ್ಕಾಲಿವಾಗಿ ಆಚರಿಸುತ್ತಿದ್ದು, ಫೆಬ್ರವರಿಯಲ್ಲಿ ದಾಸೋಹ ದಿನವನ್ನು ಆಚರಿಸುವ ಬಗ್ಗೆ ತೀರ್ಮಾನ ಮಾಡಲಾಗುವುದು, ಈ ದಿನ ರಜೆ ಘೋಷಣೆ ಇರುವುದಿಲ್ಲ ಎಂದರು.
ಶ್ರೀಗಳ ಆಶೀರ್ವಾದ ನಾಡಿನ ಜನತೆಗಿದೆ ಎಂದ ಅವರು, ತುಮಕೂರಿನಲ್ಲಿ ವಿಜಯಸಂಕಲ್ಪ ಯಾತ್ರೆ ಮತ್ತು ರಾಷ್ಟ್ರೀಯ ಮಹಿಳಾ ಕಾರ್ಯಕಾರಿಣಿ ಸಭೆಗಳಲ್ಲಿ ಭಾಗವಹಿಸುವುದಾಗಿ ಮುಖ್ಯ ಮಂತ್ರಿಗಳು ತಿಳಿಸಿದರು.