ಕಾಂಗ್ರೆಸ್ ಸ್ಥಿತಿ ʻತಾನು ಕಳ್ಳ ಪರರನ್ನು ನಂಬʼಎಂಬಂತಾಗಿದೆ-ಬಿ.ವೈ.ವಿ.

ದೇಶದಲ್ಲಿ ಕ್ರಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ದೇಶದ ಪರಿಸ್ಥತಿ ಶೋಚನೀಯವಾಗಿತ್ತು, ಆದನ್ನು ಸರಿ ಪಡಿಸಲು ಮೋದಿಯವರು ಬರಬೇಕಾಯಿತು.ಪ್ರಸ್ತುತ ಕಾಂಗ್ರೆಸ್ ಪರಿಸ್ಥತಿ ʻತಾನು ಕಳ್ಳ ಪರರನ್ನು ನಂಬʼ ಎಂಬಂತಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಹೇಳಿದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೆಳ್ಳಾವಿ ಗ್ರಾಮದಲ್ಲಿ ಆಯೋಜಿಸಿದ್ದ ʻವಿಜಯ ಸಂಕಲ್ಪʼ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 1000 ಕೋಟಿಗೂ ಹೆಚ್ಚು ಅನುಧಾನ ತಂದು ರಸ್ತೆ , ಮೂಲಸೌಕರ್ಯ, ರೈತರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರು ಎಂದು ತಿಳಿಸಿದರು.

ಯಡಿಯೂರಪ್ಪನವರಿಗೆ ಕ್ಷೇತ್ರದ ಬಗ್ಗೆ ವಿಶೇಷ ಅಭಿಮಾನವಿದ್ದು, ಪ್ರತಿ ಕಾರ್ಯಕರ್ತರೂ ತಮ್ಮ ಬೂತ್ಗಳಲ್ಲಿ ಸುರೇಶ್ಗೌಡರಿಗೆ ಬಹುಮತ ತರಿಸುವತ್ತ ಗಮನಹರಿಸಬೇಕು ಎಂದು ತಿಳಿಸಿದರು.

ಸುರೇಶ್ ಗೌಡರ ಮಾತು ಕಠೋರವಾಗಿದ್ದರೂ ಹೃದಯ ಶ್ರೀಮಂತಿಕೆಯ ವ್ಯಕ್ತಿಯಾಗಿದ್ದು ಯಾವಾಗಲೂ ಜನಪರ ಕಾಳಜಿಯನ್ನು ಹೊಂದಿದವರಾಗಿದ್ದಾರೆ ಎಂದು ಬಿ.ವೈ ವಿಜಯೇಂದ್ರ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಸುರೇಶ್ ಗೌಡ ವಿಧಾನಸೌಧದಲ್ಲಿ ವಿಜೇಂದ್ರ ಅವರ ಜೊತೆಗೆ ಕೆಲಸ ಮಾಡಲು ಕಾರ್ಯಕರ್ತರು ಶ್ರಮವಹಿಸಬೇಕು , ಪ್ರತಿ ಚುನಾವಣೆಯಲ್ಲೂ ಬೆಳ್ಳಾವಿಯಲ್ಲಿ ನನಗೆ ಹೆಚ್ಚು ಮತ ಲಭಿಸುತ್ತಿದ್ದು ಈ ಬಾರಿಯೂ ಅದನ್ನೇ ಪುನರಾವರ್ತಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಹುಲಿನಾಯ್ಕರ್, ಮಾಜಿ ಐ.ಎ.ಎಸ್ ಅಧಿಕಾರಿ ಅನಿಲ್ ಕುಮಾರ್, ತುಮಕೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶಂಕರಣ್ಣ ಹಾಗು ಹಲವಾರು ಮುಖಂಡರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮೊದಲು ಬಿ.ವೈ ವಿಜಯೇಂದ್ರ ಅವರನ್ನು ಬೈಕ್ ರಾಲಿ ಮುಖಾಂತರ ವೇದಿಕೆಗೆ ಕರೆತರಲಾಯಿತು.

Leave a Reply

Your email address will not be published. Required fields are marked *