ತುಮಕೂರು: ಅಕ್ಷರದವ್ವ ಸಾವಿತ್ರಿ ಬಾಯಿ ನಮ್ಮೆಲ್ಲರಿಗೆ ಅರಿವು ಕೊಟ್ಟ ಅವ್ವ ಎಂದು ಅತ್ತಿಮಬ್ಬೆ ವಿದ್ಯಾ ಮಂದಿರದ ಅಧ್ಯಕ್ಷೆ ಬ್ರಹ್ಮಚಾರಿಣಿ ಜಲಜಾ ಜೈನ್ ಹೇಳಿದರು.
ಅವರು ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆ ಮತ್ತು ಅತ್ತಿಮಬ್ಬೆ ವಿದ್ಯಾ ಮಂದಿರ ಚಿಕ್ಕಪೇಟೆ ತುಮಕೂರು ಸಹಯೋಗದಲ್ಲಿ ,ಅತ್ತಿಮಬ್ಬೆ ವಿದ್ಯಾಮಂದಿರದಲ್ಲಿ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ರವರ ಜನ್ಮ ದಿನಾಚರಣೆಯ ಆದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಲೇಖಕಿಯರ ಸಂಘದ ಅಧ್ಯಕ್ಷರಾದ ಜಿ.ಮಲ್ಲಿಕಾ ಬಸವರಾಜು ರವರು ಪ್ರಾಸ್ವಾವಿಕವಾಗಿ ಮಾತನಾಡಿ ಹದಿನೆಂಟನೆಯ ಶತಮಾನದಲ್ಲಿಯೇ ಹೆಣ್ಣುಮಕ್ಕಳಿಗೆ ,ದಲಿತರಿಗೆ ,ಅಕ್ಷರ ವಂಚಿತರಿಗೆ ಅಕ್ಷರ ಕಲಿಸಿದ ಮಹಾತಾಯಿ ಸಾವಿತ್ರಿ ಬಾಯಿ ಫುಲೆರವರಿಗೆ ನಾವು ಋಣಿಯಾಗಿರಬೇಕು . ಸಾವಿತ್ರಿ ಬಾಯಿ ಫುಲೆ ರವರು ಭಾರತದ ಮೊದಲ ಮಹಿಳಾ ಶಿಕ್ಷಕಿ, ಜಾತಿಪದ್ದತಿ , ಬಾಲ್ಯ ವಿವಾಹ , ವಿಧವೆಯರ ಕೇಶಮುಂಡನ ಮೊದಲಾದ ಸಾಮಾಜಿಕ ಅನಿಷ್ಠಗಳ ವಿರುದ್ದ ಹೋರಾಟ ಮಾಡಿದರು.ಕಾರ್ಮಿಕರಿಗೆ ರಾತ್ರಿ ಶಾಲೆಗಳನ್ನು ತೆರೆದರು .ಮಹಿಳೆಯರನ್ನು ಸಂಘಟಿಸಿ ಮಹಿಳಾ ಮಂಡಲಗಳನ್ನು ಕಟ್ಟಿದರು ಎಂದು ಹೇಳಿದರು.
ಉಪನ್ಯಾಸ ನೀಡಿದ ಸಿ .ಎಲ್.ಸುನಂದಮ್ಮ ನವರು ,ಸಾವಿತ್ರಿ ಬಾಯಿ ಫುಲೆ ಸಮಾಜದ ಎಲ್ಲಾ ವರ್ಗದವರಿಗೂ ಶಿಕ್ಷಣ ಪಡೆವ ಅವಕಾಶವನ್ನು ಫುಲೆ ದಂಪತಿಗಳು ಒದಗಿಸಿಕೊಟ್ಟರು. ವೈಜ್ಞಾನಿಕ ಮತ್ತು ನೈತಿಕ ಶಿಕ್ಷಣವನ್ನು ಕೊಟ್ಟರು .ಮೌಡ್ಯವನ್ನು ವಿರೋಧಿಸಿದರು .
ಪುರೋಹಿತರು ಇಲ್ಲದ ಮದುವೆಗಳನ್ನು ಮಾಡಿಸಿದರು. ಇವರು ತೆರೆದ ಶಾಲೆಗಳಲ್ಲಿ ಕಲಿಯುತ್ತಿದ್ದ ಮಕ್ಕಳಿಗೆ ಸ್ಟೈಫಂಢ್ ಕೊಟ್ಟರು. ಗುಣ ಮಟ್ಟದ ಶಿಕ್ಷಣ ಕೊಟ್ಟರು. ಮೋಸಕ್ಕೆ ಒಳಗಾದ ಮಹಿಳೆಯರಿಗೆ ಅದರಲ್ಲೂ ವಿಧವೆಯರಿಗೆ ಆಸರೆ ನೀಡಲು ಅಬಲಾಶ್ರಮ ಸ್ಥಾಪಿಸಿದರು. ವಿಧವೆಯರ ಮಕ್ಕಳಿಗಾಗಿಯೇ ಬಾಲಹತ್ಯಾ ಪ್ರತಿಬಂಧಕ ಗೃಹಗಳ್ನು ತೆರೆದರು . ವಿಧವೆಯೊಬ್ಬರ ಮಗನನ್ನು ಸ್ವತಃ ತಾವೇ ದತ್ತು ಪಡೆದು ,ಸಾಕಿ ಚೆನ್ನಾಗಿ ಓದಿಸಿದರು . ಅವರು ಹಾಕಿ ಕೊಟ್ಟ ದಾರಿಯಲ್ಲಿ ನೀವು ನಡೆದು ಉತ್ತಮ ಶಿಕ್ಷಣವನ್ನು ಪಡೆಯಿರಿ,ಉತ್ತಮ ಮನುಷ್ಯರಾಗಿರಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಅತಿಥಿಗಳಾಗಿದ್ದ ಕಲಾಶ್ರೀ ಮಾತನಾಡಿದರು, ಕಾರ್ಯಕ್ರಮ ದಲ್ಲಿ ಶಾಲೆಯ ಭೋಧಕ ವರ್ಗದವರು ,ಶಾಲಾ ಆಡಳಿತ ಮಂಡಳಿ ಸದಸ್ಯರು , ಸಂಘದ ಸದಸ್ಯರಾದ ಮರಿಯಂಬಿರವರು, ಪತ್ರಕರ್ತೆ ಕವಿತಾ ಕಮ್ಮನಕೋಟೆರವರು ಉಪಸ್ಥಿತರಿದ್ದರು.