“ಗ್ಯಾರಂಟಿ” ಎಂಬುದು ಭ್ರಷ್ಟಚಾರವಾಗಿದೆ-ಪ್ರಧಾನಿ ನರೇಂದ್ರ ಮೋದಿ

ಭೋಪಾಲ್ (ಮಧ್ಯ ಪ್ರದೇಶ) : ಇದೀಗ ಹೊಸ ಪದವೊಂದು ಜನಪ್ರಿಯವಾಗುತ್ತಿದೆ. ಅದು ‘ಗ್ಯಾರಂಟಿ’ ಎಂಬ ಪದ. ಪ್ರತಿಪಕ್ಷಗಳು ಏನು ಭರವಸೆ ನೀಡುತ್ತಿವೆ ಎಂಬುದನ್ನು ಜನರಿಗೆ ತಿಳಿಸುವ ಗುರುತರ ಜವಾಬ್ದಾರಿ ಬಿಜೆಪಿ ಕಾರ್ಯಕರ್ತರ ಮೇಲಿದೆ. ಈ ಎಲ್ಲ ಪಕ್ಷಗಳ ಗ್ಯಾರಂಟಿ ಭ್ರμÁ್ಟಚಾರವಾಗಿದೆ. ಲಕ್ಷಾಂತರ ಕೋಟಿ ರೂಪಾಯಿಗಳ ಹಗರಣ ಮಾಡುವುದು ಗ್ಯಾರಂಟಿಯಾಗಿದೆ ಎಂಬುದನ್ನು ಬಿಜೆಪಿ ಕಾರ್ಯಕರ್ತರು ಜನರಿಗೆ ತಿಳಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.


2024ರಲ್ಲಿ ನಡೆಯಲಿರುವ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕೆಲವು ದಿನಗಳ ಹಿಂದೆ ಈ ಎಲ್ಲ ನಾಯಕರೂ ಒಟ್ಟಾಗಿ ಫೆÇೀಟೊ ತೆಗೆಸಿಕೊಳ್ಳುವ ಕಾರ್ಯಕ್ರಮ ಮಾಡಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿದ ಪಕ್ಷಗಳ ಇತಿಹಾಸ ನೋಡಿದರೆ ಇವರೆಲ್ಲ ಸೇರಿ ಕನಿಷ್ಠ 20 ಲಕ್ಷ ಕೋಟಿ ರೂಪಾಯಿಗಳ ಹಗರಣ ಮಾಡುವುದು ಗ್ಯಾರಂಟಿ ಎಂಬುದು ಗೊತ್ತಾಗುತ್ತದೆ. ಕಾಂಗ್ರೆಸ್‍ನ ಹಗರಣವು ಲಕ್ಷ ಕೋಟಿ ಮೌಲ್ಯದ್ದಾಗಿದೆ ಎಂದು ಮೋದಿ ಹೇಳಿದರು.

ಪ್ರತಿಪಕ್ಷ ನಾಯಕರ ಒಗ್ಗಟ್ಟಿನ ಬಗ್ಗೆ ವಾಗ್ದಾಳಿ ನಡೆಸಿದರು. ಆದರೆ ಈ ಬಾರಿ ಎನ್‍ಸಿಪಿ ಹಾಗೂ ಅದರ ಮುಖ್ಯಸ್ಥ ಶರದ್ ಪವಾರ್ ಅವರನ್ನು ಗುರಿಯಾಗಿಸಿ ಟೀಕಾಸ್ತ್ರ ಪ್ರಯೋಗಿಸಿದ್ದು ವಿಶೇಷವಾಗಿತ್ತು. ಕುಟುಂಬ ರಾಜಕಾರಣದ ಬಗ್ಗೆ ಪ್ರಸ್ತಾಪಿಸಿ, ಗಾಂಧಿ ಕುಟುಂಬದೊಂದಿಗೆ ಪವಾರ್ ಹೆಸರನ್ನೂ ಉಲ್ಲೇಖಿಸಿದರು.


ಪಾಟ್ನಾದಲ್ಲಿ ನಡೆದ ವಿಪಕ್ಷ ನಾಯಕರ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ತಮ್ಮ ಮೊದಲ ವಾಗ್ದಾಳಿ ನಡೆಸಿದರು. ಮಧ್ಯಪ್ರದೇಶದ ಭೋಪಾಲ್‍ನಲ್ಲಿ ನಡೆದ ‘ಮೇರಾ ಬೂತ್, ಸಬ್ಸೆ ಸೋಂಬಾ’ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಿದರು. ಈ ಬಾರಿ ಅವರು ನೇರವಾಗಿ ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಶರದ್ ಪವಾರ್ ಮತ್ತು ಎನ್‍ಸಿಪಿಗೆ ತಿರುಗೇಟು ನೀಡಿದರು.

ಕಲ್ಲಿದ್ದಲು ಹಗರಣ 1 ಲಕ್ಷದ 86 ಸಾವಿರ ಕೋಟಿ, 2ಜಿ ಹಗರಣ 1 ಲಕ್ಷದ 74 ಕೋಟಿ, ಕಾಮನ್‍ವೆಲ್ತ್ ಹಗರಣ 70 ಸಾವಿರ ಕೋಟಿ ರೂ. 10,000 ಕೋಟಿಯ ಮನರೇಗಾ ಹಗರಣ, ಹೆಲಿಕಾಪ್ಟರ್‍ಗಳಿಂದ ಯುದ್ಧ ನೌಕೆಗಳವರೆಗೆ ಕಾಂಗ್ರೆಸ್ ಹಗರಣ ಮಾಡದ ಯಾವುದೇ ಕ್ಷೇತ್ರವಿಲ್ಲ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರು.

ರಾಷ್ಟ್ರವಾದಿ ಕಾಂಗ್ರೆಸ್ ಬಗ್ಗೆ ಮಾತನಾಡುವುದಾದರೆ, ಎನ್‍ಸಿಪಿ ಸುಮಾರು 70 ಸಾವಿರ ಕೋಟಿ ಹಗರಣದ ಆರೋಪವನ್ನು ಹೊಂದಿದೆ. ಮಹಾರಾಷ್ಟ್ರ ಶಿಖರ ಬ್ಯಾಂಕ್ ಹಗರಣ, ನೀರಾವರಿ ಹಗರಣ, ಅಕ್ರಮ ಗಣಿಗಾರಿಕೆ ಹಗರಣ.. ಇವರ ಪಟ್ಟಿಯೂ ಬಹಳ ದೊಡ್ಡದಿದೆ. ಈ ಪಕ್ಷದ ಹಗರಣಗಳ ಮೀಟರ್ ಕಡಿಮೆಯಾಗುವುದಿಲ್ಲ ಎಂದು ಮೋದಿ ಎನ್‍ಸಿಪಿಯ ಭ್ರμÁ್ಟಚಾರದ ಪಟ್ಟಿಯನ್ನು ಮುಂದಿಟ್ಟರು.

ಗಾಂಧಿ ಕುಟುಂಬದ ಪುತ್ರ-ಪುತ್ರಿಯರ ಅಭಿವೃದ್ಧಿ ಬೇಕಾದರೆ ಕಾಂಗ್ರೆಸ್‍ಗೆ ಮತ ನೀಡಿ. ಮುಲಾಯಂ ಸಿಂಗ್ ಅವರ ಮಗನಿಗೆ ಲಾಭವಾಗಬೇಕಾದರೆ ಸಮಾಜವಾದಿ ಪಕ್ಷಕ್ಕೆ ಮತ ನೀಡಿ. ನೀವು ಲಾಲು ಕುಟುಂಬದ ಪುತ್ರರು ಮತ್ತು ಪುತ್ರಿಯರನ್ನು ಅಭಿವೃದ್ಧಿಪಡಿಸಲು ಬಯಸಿದರೆ ಆರ್‍ಜೆಡಿಗೆ ಮತ ನೀಡಿ. ಶರದ್ ಪವಾರ್ ಅವರ ಪುತ್ರಿಗೆ ಲಾಭವಾಗಬೇಕಾದರೆ ಎನ್‍ಸಿಪಿಗೆ ಮತ ನೀಡಿ. ಚಂದ್ರಶೇಖರ್ ರಾವ್ ಅವರ ಪುತ್ರಿಯರ ಕಲ್ಯಾಣ ಬೇಕಾದರೆ ಬಿಆರ್‍ಎಸ್‍ಗೆ ಮತ ನೀಡಿ. ಆದರೆ ನಿಮ್ಮ ಮಗ, ಮಗಳು, ಮೊಮ್ಮಕ್ಕಳ ಕ್ಷೇಮ ಬೇಕಾದರೆ ಬಿಜೆಪಿಗೆ ಮತ ನೀಡಿ ಎಂದು ಮೋದಿ ಕರೆ ನೀಡಿದರು.

Leave a Reply

Your email address will not be published. Required fields are marked *