ತುಮಕೂರು : ಕಳ್ಳಂಬೆಳ್ಳ ಹೋಬಳಿಯ ಭದ್ರಾ ಮೇಲ್ದಂಡೆ ನೀರಾವರಿ ವತಿಯಿಂದ ‘ನೀರು ನಮ್ಮ ಹಕ್ಕು ಅದನ್ನು ಪಡೆದೇ ತೀರುತ್ತೇವೆ’ ಎಂಬ ಹೋರಾಟದ ಸ್ಲೋಗನ್ ಇಟ್ಟುಕೊಂಡು ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ ದೊಡ್ಡಾಲದಮರದಲ್ಲಿ ನವೆಂಬರ್ 4ರಂದು ರೈತರ ಸಭೆ ಕರೆಯಲಾಗಿದೆ.
ಸಭೆಯ ಅಧ್ಯಕತೆಯನ್ನು ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ಅವರು ವಹಿಸಲಿದ್ದು, ಸಭೆಯು ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನ.4ರಂದು ಬೆಳಿಗ್ಗೆ 11ಗಂಟೆಗೆ ನಡೆಯಲಿದ್ದು, ನೀರು ನಮ್ಮ ಹಕ್ಕು ಅದನ್ನು ಪಡೆದೇ ತೀರುತ್ತೇವೆ ಎಂಬ ಸ್ಲೋಗನ್ ನಡಿ ಹೋಬಳಿಯ ಸಾವಿರಾರು ರೈತರು, ರೈತ ಮಹಿಳೆಯರು ಈ ಸಭೆಗೆ ಆಗಮಿಸಲಿದ್ದಾರೆಂದು ಭದ್ರ ಮಾಲ್ದಂಡೆ ಹೋರಾಟ ಸಮಿತಿಯು ತಿಳಿಸಿದ್ದು, “ಭದ್ರಾ ಮೇಲ್ದಂಡೆ ಶೀಘ್ರ ಅನುಷ್ಠಾನಕ್ಕಾಗಿ”ಎಂದು ಸಮಿತಿ ತಿಳಿಸಿದೆ.