ಆಂಧ್ರ ಪೊಲೀಸರು ನನ್ನ ಬಂಧಿಸಿಲ್ಲ-ಅಟ್ಟಿಕಾ ಬಾಬು

ತುಮಕೂರು: ಆಂಧ್ರಪ್ರದೇಶದ ಪೊಲೀಸರು ನನ್ನನ್ನು ಕಳ್ಳತನದ ಬಂಗಾರವನ್ನು ಖರೀದಿಸಿದ್ದಾರೆಂದು ಬಂಧಿಸಿ ಕರೆದುಕೊಂಡು ಹೋಗಿರಲಿಲ್ಲ ಎಂದು ಬೊಮ್ಮನಹಳ್ಳಿ ಬಾಬು (ಆಟಿಕಾ ಗೋಲ್ಡ್ ಬಾಬು) ಸ್ಪಷ್ಟನೆ ನೀಡಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಸಾಕು ಮಗನ ಕೇಸೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಆಂಧ್ರ ಪೊಲೀಸರು ನಮ್ಮ ಮನೆಗೆ ಬಂದಿದ್ದರು, ಆ ವೇಳೆ ನೀವು ನಮ್ಮ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಬೇಕೆಂದು ಕೇಳಿದಾಗ ನಾನೇ ಅವರ ಜೊತೆ ಹೋಗಿದ್ದೆ, ಕೆಲವು ಮಾಧ್ಯಮಗಳಲ್ಲಿ ಕಳ್ಳತನದ ಬಂಗಾರವನ್ನು ಖರೀದಿಸಿದ್ದಕ್ಕೆ ಆಂಧ್ರ ಪೊಲೀಸರು ಕರೆದುಕೊಂಡು ಹೋಗಿಲ್ಲ, ಎರಡನೇ ಹೆಂಡತಿಯ ದೂರಿನ ಮೇಲೆ ಬಂಧಿಸಿದ್ದಾರೆ ಎಂಬುದೆಲ್ಲಾ ಸುಳ್ಳು, ನನಗೆ ಎರಡನೇ ಪತ್ನಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ನನಗೆ ಮಕ್ಕಳು ಆಗುವುದು ತಡವಾದ ಕಾರಣ ಒಬ್ಬ ಹುಡುಗನನ್ನು ನಾನೇ ದತ್ತು ತೆಗೆದುಕೊಂಡು ಸಾಕಿದ್ದೆ, ಆತನನ್ನು ಡಾಕ್ಟರ್ ಮಾಡಿ ಮದುವೆಯನ್ನು ಸಹ ಮಾಡಿದ್ದೇನೆ, ನನಗೆ ಯಾವುದೇ ಎರಡನೇ ಪತ್ನಿ ಇಲ್ಲ, ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸುಳ್ಳು ಎಂದು ಹೇಳಿದರು.

ಆಂಧ್ರದ ಏಲೂರು ಪೊಲೀಸ್ ಠಾಣೆಗೆ ಖುದ್ದಾಗಿ ಭೇಟಿ ನೀಡಿ ಹೇಳಿಕೆ ನೀಡಿದ್ದೇನೆ ಅಲ್ಲಿಗೆ ಆ ಕೇಸು ಮುಗಿಯಿತು, ಯಾವುದೇ ಕಳ್ಳತನದ ಬಂಗಾರವನ್ನು ನಮ್ಮ ಗೋಲ್ಡ್ ಕಂಪನಿಗಳಲ್ಲಿ ತೆಗೆದುಕೊಂಡಿಲ್ಲ, ನಮ್ಮಲ್ಲಿ ಎಲ್ಲವೂ ಪಾರರ್ಶಕವಾದ ವಹಿವಾಟು ಎಂದು ತಿಳಿಸಿದರು.

Leave a Reply

Your email address will not be published. Required fields are marked *