ತುಮಕೂರು : 100ಕ್ಕೆ ನೂರರಷ್ಟು ಟಿಕೆಟ್ ನನಗೆ ದೊರಯಲಿದೆ ಎಂಬ ವಿಶ್ವಾಸವಿದೆ ಎಂದು ಮಾಜಿ ಸಚಿವರಾದ ಸೊಗಡು ಶಿವಣ್ಣನವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮೀಕ್ಷೆಗಳು ನನ್ನ ಪರವಾಗಿ ಹೋಗಿವೆ, ಭ್ರμÁ್ಟಚಾರ ರಹಿತ ಎಂಬ ವರದಿ ಹೋಗಿದೆ. 75 % ಜನರೊಂದಿಗೆ ಒಡನಾಟವಿದೆ ಟಿಕೆಟ್ ನೀಡಲು ಇದಕ್ಕಿಂತ ಮತ್ತಿನ್ನೇನು ಬೇಕು, ಬಡವ, ಮಧ್ಯಮ, ಶ್ರೀಮಂತರೆಲ್ಲರನ್ನೂ ಒಳಗೊಂಡಂತೆ ಈ ಬಾರಿ ನೀವು ಚುನಾವಣೆಗೆ ನಿಲ್ಲಬೇಕೆಂಬ ಒತ್ತಾಸೆಯನ್ನು ವ್ಯಕ್ತಪಡಿಸಿದ್ದಾರೆ, ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ನಾನು ವಿದ್ಯಾಭ್ಯಾಸದ ಕಾಲದಿಂದ ಇಲ್ಲಿಯವರೆಗೆ ಜನರೊಂದಿಗೆ ಇರುವವನು, ಇಂದು ಪ್ರಜಾಪ್ರಭ್ರುತ್ವ ವಿರೋಧಿಗಳು ಮಾಡಬಾರದನ್ನು ಮಾಡುತ್ತಿದ್ದಾರೆ ಅದರಿಂದ ಜನ ಬೇಸತ್ತು ನನಗೆ ಚುನಾವಣೆಗೆ ನಿಲ್ಲುವಂತೆ ಪ್ರೀತಿ ತೋರಿಸುತ್ತಿದ್ದಾರೆ, ನಾನು ಜೋಳಿಗೆ ಹಿಡಿದು ಹೊರಟಾಗ, ಕ್ರಿಶ್ಚಿಯನ್ನರು, ಮುಸ್ಲಿಂರು, ಎಲ್ಲರೂ ಬಂದು ನನಗೆ ಅರಸಿದ್ದಾರೆ, 4 ಬಾರಿ ಶಾಸಕನಾಗಿದ್ದಾಗ ತುಮಕೂರಿಗೆ ನೀರು, ಶಿಕ್ಷಣ, ರಸ್ತೆ ಅಭಿವೃದ್ಧಿಗೆ ಒತ್ತು ನೀಡಿದ್ದಲ್ಲದೆ ನನ್ನ ಕಾಲದಲ್ಲಿ ಜನ ನೆಮ್ಮದಿಯಿಂದ ಇದ್ದರು ಎಂದರು.
ಯಾವ ಪಕ್ಷಕ್ಕೂ ಹೋಗಲ್ಲ, ಪಾಪದ ಕೆಲಸಕ್ಕೆ ಕೈ ಹಾಕುವುದಿಲ್ಲ, ಜಿಲ್ಲೆಯ ಎಲ್ಲಾ ಊರುಗಳು ಗೊತ್ತಿವೆ, ಈಗ ಆ ಜನ ನನ್ನನ್ನು ಸ್ಪರ್ಧೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಜೀವ ಉಳಿಸಿದ್ದೇನೆ, ಔಷಧಿ ವಿತರಣೆ, ಅಂತಿಮ ಸಂಸ್ಕಾರ, ಶ್ರಾದ್ಧ ಮಾಡಿದ್ದೇನೆ.
ಪಕ್ಷವು ನನ್ನನ್ನು ಗರುತಿಸಿ ಟಿಕೆಟ್ ಕೊಡಲಿದ್ದು, ನಾಮಪತ್ರ ಸಲ್ಲಿಸಲು ಎಲ್ಲಾ ತಯಾರಿಯನ್ನು ಮಾಡಿಕೊಂಡಿರುವುದಾಗಿ ಶಿವಣ್ಣನವರು ತಿಳಿಸಿದರು.
ನನ್ನ ಮನೆಯ ಬಾಗಿಲು ಸದಾ ತೆರೆದಿರುತ್ತದೆ, ಬೇರೆಯವರಂತೆ ಬಾಗಿಲು ಮುಚ್ಚಿರುವುದಿಲ್ಲ ಎಂದ ಅವರು, ಚುನಾವಣೆಗೆ ನಿಲ್ಲುವುದು ಸತ್ಯ, ಆಕಾಶ ನೋಡಲು ನೂಕು ನುಗ್ಗಲು ಏಕೆ, ಯಾರು ಬೇಕಾದರೂ ನಿಲ್ಲಲಿ ನಾನು 2023ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುತ್ತೇನೆ ಎಂದರು.
ಯಡಿಯೂರಪ್ಪನವರು ನಮ್ಮ ನಾಯಕರು, ಅವರನ್ನು ಬಿಟ್ಟು ಪಕ್ಷ ಕಟ್ಟುವುದು ಕಷ್ಟ, ಇಡೀ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಅಧಿಕಾರಕ್ಕೆ ತಂದವರನ್ನು ಪಕ್ಷ ಕಡೆಗಣಿಸುವುದಿಲ್ಲ ಎಂದರು.
ಯಾವುದೇ ಸಂಧಾನಕ್ಕೂ ನಾನು ಒಪ್ಪುವುದಿಲ್ಲ, ಪಕ್ಷದ ವರಿಷ್ಠರು ಹಾಗೂ ಹಿತೈಶಿಗಳ ಸಲಹೆ ಮೇರೆಗೆ ಕೆಲಸ ಮಾಡುತ್ತ ಪಕ್ಷದಲ್ಲಿ ಬಂಡಾಯಕ್ಕೆ ಆಸ್ಪದವಿಲ್ಲ, ತುಮಕೂರಿನ ಜನರು ಬುದ್ಧಿವಂತರಿದ್ದಾರೆ, ಬಂಡಾಯಕ್ಕೆ ಬೆಲೆ ಕೊಡುವುದಿಲ್ಲ ಎಂದ ಅವರು, ಜೋಳಿಗೆ ಕೊಟ್ಟವರ ಪ್ರೀತಿಗಾಗಿ ನಿಲ್ಲುತ್ತೇನೆ, ದೇವಸ್ಥಾನಕ್ಕೆ ಹೋಗಿ ಜೋಳಿಗೆ ಹಿಡಿದಿದ್ದೇನೆ, ಪತ್ರಕರ್ತರು, ಬುದ್ದಿಜೀವಿಗಳು, ಜೋಳಿಗೆ ತುಂಬಿದ್ದಾರೆ, ತಾಕತ್ತಿದ್ದವರು ನನ್ನೊಂದಿಗೆ ಜೋಳಿಗೆ ಹಿಡಿದು ಬರಲಿ ನೋಡೋಣ, ಜನ ಯಾರಿಗೆ ಹಣ ಹಾಕುತ್ತಾರೆ ನೋಡೋಣ, ಜನ ಕೊಟ್ಟಿರುವ ‘ಬಿ’ ಫಾರಂ ಜೋಳಿಗೆಯಲ್ಲಿದೆ ಎಂದರು.
ಬಿಜೆಪಿ ಪಕ್ಷ ಜನರು ಹೇಳುವುದನ್ನೇ ಕೇಳುತ್ತಾರೆ ಹೊರತು ಮುಖಂಡರ ಮಾತಿಗೆ ಮಣೆ ಹಾಕುವುದಿಲ್ಲ, ಪಕ್ಷದ ವರದಿಯಲ್ಲಿ ಸೊಗಡು ಶಿವಣ್ಣನ ಹೆಸರಿದೆ, ನನಗೆ ಟಿಕೆಟ್ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಂಗನಾಯ್ಕ, ನರಸಿಂಹಯ್ಯ, ಜಯಸಿಂಹರಾವ್,ಧನಿಯಾಕುಮಾರ್, ಶಾಂತರಾಜು, ಚೌಡಪ್ಪ, ಮುಂತಾದವರಿದ್ದರು.